ಎಐ ದುರುಪಯೋಗ: ಥ್ರೇಟ್‌ ರೇಟ್‌ ಎಂಬ ಇಸ್ರೇಲ್ ಭಯೋತ್ಪಾದನೆ

Date:

Advertisements

ಪ್ಯಾಲೆಸ್ತೀನ್‌ ಜನ ಪ್ರತಿದಿನವೂ ಜೀವಭಯದಲ್ಲೇ ಬದುಕೋ ಪರಿಸ್ಥಿತಿ ಎದುರಾಗಿದೆ. ಹಿಜ್ಬೊಲ್ಲಾ ಸಂಘಟನೆಯ ನೆಲೆಯಾಗಿರುವ ಲೆಬನಾನ್‌ನಲ್ಲಿ ಇತ್ತೀಚೆಗೆ ನಡೆದ ವಿಚಿತ್ರ ಘಟನೆಯೊಂದು ಇಡೀ ವಿಶ್ವವನ್ನೇ ದಂಗು ಬಡಿಸಿತ್ತು. ಹಿಜ್ಬೊಲ್ಲಾ ಸಂಘಟನೆಯ ಸದಸ್ಯರು ಮತ್ತು ಪ್ಯಾಲೆಸ್ತೀನಿಯರ ಬಳಿಯಿದ್ದ ನೂರಾರು ಪೇಜರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡವು. ಪ್ಯಾಲೆಸ್ತೀನ್‌ ಜನರ ಮೇಲೆ ಇಸ್ರೇಲ್‌ನ ಈ ದಾಳಿಯು ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ. ಮಾತ್ರವಲ್ಲದೆ, ಜಗತ್ತಿನಲ್ಲಿ ಕಣ್ಗಾವಲು ವ್ಯವಸ್ಥೆ ಕುರಿತು ಆತಂಕ ಹುಟ್ಟುಹಾಕಿದೆ.

ಪೇಜರ್ ದಾಳಿಯಿಂದ ಲೆಬನಾನ್ ರಾಜಧಾನಿ ಬೈರೂತ್‌ನ ರಸ್ತೆಗಳಲ್ಲಿ ರಕ್ತದೋಕುಳಿಯೇ ನಡೆದುಹೋಯಿತು. ದುರಂತ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಯ ಮೂಡಿಸಿತ್ತು. ನಾವು ದಿನನಿತ್ಯ ಬಳಸೋ ವಸ್ತುಗಳನ್ನೇ ಇಸ್ರೇಲ್‌ ಅಸ್ತ್ರ ಮಾಡಿಕೊಂಡು ನೂರಾರು ನಾಗರಿಕರ ಸಾವಿಗೆ ಕಾರಣ ಆಗಿದ್ದು, ಕಾನೂನು ಉಲ್ಲಂಘನೆ ಅಲ್ಲದೇ ಮತ್ತೇನು? ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಾರ್ಹ ಅಪರಾಧ. ಅಷ್ಟೇ ಅಲ್ಲ, ಇದು ಕೂಡ ಒಂದು ರೀತಿಯಲ್ಲಿ ಟೆರರಿಸಂ..

ತಂತ್ರಜ್ಞಾನವನ್ನು ಬಳಸಿಕೊಂಡು ಇಸ್ರೇಲ್ ಹೇಗೆಲ್ಲಾ ಕ್ರೌರ್ಯ ಮೆರೆಯುತ್ತಿದೆ ಅನ್ನೋದಕ್ಕೆ ಇತ್ತೀಚಿನ ಪೇಜರ್ ದಾಳಿ ಒಂದು ಉದಾಹರಣೆ. ಆದ್ರೆ ಇದಕ್ಕಿಂತಲೂ ಕ್ರೂರವಾಗಿ ಇಸ್ರೇಲ್‌ ಎಐ ಬಳಸಿಕೊಳ್ತಾ ಇದೆ ಅನ್ನೋ ವಿಚಾರ ಇತ್ತೀಚೆಗೆ ಸುದ್ದಿಯಾಗಿದೆ. ಪ್ಯಾಲೆಸ್ತೀನಿಯರು ತಮ್ಮ ಮೊಬೈಲ್‌ಗಳಲ್ಲಿ ಮಾಡುವ ಪ್ರತಿಯೊಂದು ಮೆಸೇಜ್‌, ಕಾಲ್‌ಗಳು ಮಾತ್ರವಲ್ಲ, ಅವರು ಯಾವ ಶಾಪ್‌ಗೆ ಹೋಗ್ತಾರೆ ಅನ್ನೋದನ್ನೂ ಇಸ್ರೇಲ್ ನಿರಾಯಾಸವಾಗಿ ಕಂಡುಕೊಳ್ಳುತ್ತಿದೆ. ಅಷ್ಟೇ ಯಾಕೆ, ಒಬ್ಬ ವ್ಯಕ್ತಿಯ ಕಾಲಿಗೆ ಅಂಟಿರೋ ಚುಯಿಂಗ್‌ಗಮ್ ಯಾವ ಕಂಪನಿಯದ್ದು ಅನ್ನೋದನ್ನೂ ಪತ್ತೆ ಮಾಡುವ ಪಟ್ಟಿಗೆ ಇಸ್ರೇಲ್‌ ಬಳಿ ತಂತ್ರಜ್ಞಾನದ ವ್ಯವಸ್ಥೆಗಳಿವೆ. ಸ್ಯಾಟಲೈಟ್‌ಗಳ ಇಮೇಜ್‌ಗಳನ್ನ ಇಸ್ರೇಲ್‌ ಬಳಸಿಕೊಳ್ತಾ ಇದೆ.

Advertisements
BOMB

ಪ್ರಪಂಚದಲ್ಲೇ ಅತಿಹೆಚ್ಚು ಬೇಹುಗಾರಿಕೆಗೆ ಒಳಪಟ್ಟಿರೋ ಜನಾಂಗ ಅಂದ್ರೆ ಅದು ಪ್ಯಾಲೆಸ್ತೀನಿಯರು. ಇತ್ತೀಚಿನ ದಿನಗಳಲ್ಲಿ, ಇಸ್ರೇಲ್‌ ಪ್ಯಾಲೆಸ್ತೀನಿಯರ ಮೇಲೆ ಎಐ ಅಂದ್ರೆ ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನವನ್ನ ಬಳಸ್ತಾ ಇರೋದು ಗಂಭೀರ ಚರ್ಚೆಗೆ ಕಾರಣ ಆಗಿದೆ. ಅತೀ ಹೆಚ್ಚು ಶಸ್ತ್ರಾಸ್ತ್ರ ಮತ್ತು ರಕ್ಷಣಾ ಪಡೆಗಳನ್ನ ಹೊಂದಿರುವ ಇಸ್ರೇಲ್‌, ಏನೂ ಇಲ್ಲದೇ ಇರೋ ಪ್ಯಾಲೆಸ್ತೀನ್‌ ಜನರನ್ನ ತನ್ನ ಕಣ್ಗಾವಲಿನಡಿ ಇರಿಸಿಕೊಳ್ಳಲು ‘ಎಐ’ಯನ್ನ ಬಳಸಿಕೊಂಡಿರುವುದು ವಿಪರ್ಯಾಸ.. ಇಸ್ರೇಲ್‌, ಎಐ ಮೂಲಕ ಪ್ಯಾಲೆಸ್ತೀನ್‌ನಲ್ಲಿರೋ ಪ್ರತಿಯೊಬ್ಬ ವ್ಯಕ್ತಿಯ ಚಲನವಲನವನ್ನ 24*7 ಟ್ರ್ಯಾಕ್‌ ಮಾಡುತ್ತಿದೆ. ಈ ರೀತಿ ಕಾನೂನುಬಾಹಿರ ಬೇಹುಗಾರಿಕಾ ನರಮೇಧಕ್ಕೆ ಇಸ್ರೇಲ್‌ ‘ಲ್ಯಾವೆಂಡರ್‌’ ಮತ್ತು ‘ವೇರ್‌ ಈಸ್‌ ಡ್ಯಾಡಿ’ ಅನ್ನೋ ಹೆಸರನ್ನ ಕೊಟ್ಟಿದೆ. ಬೇಹುಗಾರಿಕೆ ಮೂಲಕ ಪ್ಯಾಲೆಸ್ತೀನಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಕೊಲ್ಲುತ್ತಿದೆ.

ಲ್ಯಾವೆಂಡರ್‌ ಅಂದ್ರೆ ಏನು ? ಇದು ಹೇಗೆ ಕೆಲಸ ಮಾಡುತ್ತದೆ?

ಲ್ಯಾವೆಂಡರ್‌ ಎಂಬುದು ಒಂದು ಎಐ ತಂತ್ರಜ್ಞಾನ. ಇದನ್ನ ಬಳಸಿಕೊಂಡೇ ಇಸ್ರೇಲ್‌ ಪ್ಯಾಲೆಸ್ತೀನ್‌ ಜನರನ್ನ ಕಂಟ್ರೋಲ್‌ ಮಾಡುತ್ತಿದೆ. ಡ್ರೋನ್‌ಗಳ ಮೂಲಕ ಪ್ಯಾಲೆಸ್ತೀನ್ ಜನರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಈ ಲ್ಯಾವೆಂಡರ್‌ ತಂತ್ರಜ್ಞಾನದಿಂದ ಒಬ್ಬ ವ್ಯಕ್ತಿ ಬೆಳಿಗ್ಗೆಯಿಂದ ರಾತ್ರಿ ಮಲಗೋ ತನಕ ಏನೆಲ್ಲ ಮಾಡ್ತಾರೆ, ಯಾರಿಗೆ ಮೆಸೆಜ್‌ ಮಾಡ್ತಾರೆ, ಯಾರ್‌ ಜೊತೆ ಮೊಬೈಲ್‌ ಕಾಲ್‌ನಲ್ಲಿ ಮಾತನಾಡಿದ್ದಾರೆ? ಅನ್ನೋದನ್ನೂ ಕೂಡ ಇಸ್ರೇಲ್‌ ಟ್ರ್ಯಾಕ್‌ ಮಾಡ್ತಾ ಇದೆ. ಅಷ್ಟೇಅಲ್ಲ, ಪ್ಯಾಲೆಸ್ತೀನ್‌ನಲ್ಲಿರುವ ಪ್ರತಿಯೊಬ್ಬರಿಗೂ ಕೂಡ 1ರಿಂದ 100 ಅಂಕಗಳನ್ನ ನೀಡಲಾಗ್ತಾ ಇದೆ. ಈ ಅಂಕಗಳಿಗೆ ಇಸ್ರೇಲ್‌ ‘ಥ್ರೇಶ್‌ ಹೋಲ್‌ ಥ್ರೆಟ್‌ ರೇಟ್‌’ ಅಂತ ಕರೆಯತ್ತೆ.. ಯಾರ ರೇಟ್‌ ಹೆಚ್ಚಾಗತ್ತೋ ಅವರ ಮನೆ ಮೇಲೆ ಅಥವಾ ಅವರು ವಾಸಿಸುವ ಪ್ರದೇಶದ ಮೇಲೆ ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆಸುತ್ತಿದೆ.

ಪ್ಯಾಲೆಸ್ತೀನಿಯರ ಮೇಲಿನ ‘ಥ್ರೆಟ್‌ ರೇಟ್‌’ ಹೆಚ್ಚಾಗೋಕೆ ಅವರು ಯಾವುದೇ ತಪ್ಪು ಮಾಡಬೇಕು ಅಂತ ಇಲ್ಲ. ಒಬ್ಬ ವ್ಯಕ್ತಿಯನ್ನ ಈ ಎಐ ಮೂಲಕ ಟೆರರಿಸ್ಟ್‌ ಅಂತ ಗುರುತು ಮಾಡಿದ್ರೆ, ಆ ವ್ಯಕ್ತಿಯನ್ನ ಇನ್ನೊಬ್ಬ ಯಾವುದೇ ವ್ಯಕ್ತಿ ಭೇಟಿ ಮಾಡಿದರೂ ಕೂಡ ಆ ವ್ಯಕ್ತಿಯ ‘ಥ್ರೆಟ್‌ ರೇಟ್‌’ ಜಾಸ್ತಿ ಆಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯನ್ನ ಇಸ್ರೇಲ್‌ ಟೆರರಿಸ್ಟ್‌ ಅಂತ ಗುರುತಿಸಿದರೆ, ಆತ ಒಂದು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರೆ, ಆ ಅಂಗಡಿಗೆ ಬಟ್ಟೆ ತಗೊಳೋಕೆ ಹೋಗೊ ಪ್ರತಿಯೊಬ್ಬರ ‘ಥ್ರೇಶ್‌ ಹೋಲ್‌ ಥ್ರೆಟ್‌ ರೇಟ್‌’ ಕೂಡ ಜಾಸ್ತಿ ಆಗತ್ತೆ. ಅವರು ಮಹಿಳೆಯರು, ಮಕ್ಕಳು ಯಾರೇ ಆಗಿರಬಹುದು.

5809927404217550023

ಈಗಾಗಲೇ, ಈ ವ್ಯಕ್ತಿಗೆ 10 ಅಂಕ ಇದ್ರೆ, ಆ ಅಂಗಡಿಗೆ ಹೋಗಿ ಬಂದ ಕೂಡಲೇ ಅವರ ‘ಥ್ರೆಟ್‌ ರೇಟ್‌’ 30 ಅಥವಾ 50ಕ್ಕೆ ಏರುತ್ತದೆ. ಥ್ರೇಶ್‌ ಹೋಲ್‌ ಥ್ರೆಟ್‌ ರೇಟ್‌ ಹೆಚ್ಚಾಗುತ್ತಿದೆ ಎಂದರೆ, ಆ ವ್ಯಕ್ತಿಯ ಸಾವು ಹತ್ತಿರ ಬಂದಂತೆ ಅರ್ಥ. ಅಂದ್ರೆ, ಪ್ಯಾಲೆಸ್ತೀನ್‌ನಲ್ಲಿರೋ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿಯೊಂದು ಸೆಕೆಂಡ್‌ ಅನ್ನೂ ಭಯದಲ್ಲೇ ಕಳೆಯುತ್ತಿದ್ದಾರೆ. ಬದುಕಿಗಾಗಿ ಹೋರಾಡುತ್ತಿದ್ದಾರೆ.

ಇಸ್ರೇಲ್‌ ಕೊಟ್ಟಿರುವ ಈ ಥ್ರೇಶ್‌ ಹೋಲ್‌ ಥ್ರೆಟ್‌ ರೇಟ್‌ ಮ್ಯಾಕ್ಸಿಮಮ್ ಅಂಕಿಯಾಗಿ 50 ಅಂಕ ಇರುತ್ತದೆ. ಯಾವುದೇ ವ್ಯಕ್ತಿ 50 ಅಂಕಿಯನ್ನು ದಾಟಿದರೆ, ಅವರ ಮೇಲೆ ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆಯುತ್ತಿದೆ. ಅವರನ್ನು ಕೊಲ್ಲಲಾಗುತ್ತದೆ. ಒಂದು ವೇಳೆ, ಆ ದಿನ 50ಕ್ಕಿಂತ ಹೆಚ್ಚು ಅಂಕವುಳ್ಳ ವ್ಯಕ್ತಿಗಳು ಇಲ್ಲ ಎಂದರೆ, ತಮ್ಮ ಟಾರ್ಗೆಟ್‌ ಅಂಕಿಯನ್ನೇ ಕಡಿಮೆ ಮಾಡಲಾಗುತ್ತದೆ. ಅಂದರೆ, ಮ್ಯಾಕ್ಸಿಮಮ್ ಗಡುವು 30 ಅಂಕಕ್ಕೆ ಇಳಿಸಿಕೊಳ್ಳಬಹುದು. 30ಕ್ಕಿಂತ ಹೆಚ್ಚು ‘ಥ್ರೇಶ್‌ ಹೋಲ್‌ ಥ್ರೆಟ್‌ ರೇಟ್‌’ ಯಾರಿಗೆ ಇರುತ್ತದೆಯೂ ಅವರನ್ನು ಕೊಲ್ಲಲಾಗುತ್ತದೆ. ಇದು ಇಸ್ರೇಲ್‌ನ ಬೇಹುಗಾರಿಕಾ ಕ್ರೌರ್ಯಕ್ಕೆ ಉದಾಹರಣೆ.

ಈ ರೀತಿ ಕೇವಲ ಇಸ್ರೇಲ್‌ ಮಾತ್ರ ಮಾಡಿಲ್ಲ, ಬದಲಿಗೆ 2012ಕ್ಕಿಂತ ಮೊದಲು ಅಮೆರಿಕಾ ಕೂಡ ಪಾಕಿಸ್ತಾನದ ಮೇಲೆ ಇದೇ ರೀತಿಯ ಬೇಹುಗಾರಿಕೆ ಮಾಡಿತ್ತು. ಭಯೋತ್ಪಾದಕರನ್ನು ಸಂದರ್ಶನ ಮಾಡಿದ ಎಷ್ಟೋ ಪತ್ರಕರ್ತರನ್ನ ಅಮೆರಿಕಾ ಇದೇ ರೀತಿ ಕೊಲೆ ಮಾಡಿದೆ.

ವೇರ್‌ ಈಸ್‌ ಡ್ಯಾಡಿ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

‘ವೇರ್‌ ಈಸ್‌ ಡ್ಯಾಡಿ’ ಅನ್ನೋದು ಕೂಡ ಇಸ್ರೇಲ್‌ನ ಒಂದು ಎಐ ತಂತ್ರಜ್ಞಾನ. ಈ ತಂತ್ರಜ್ಞಾನದ ಮೂಲಕ ಇಸ್ರೇಲಿ ಅಧಿಕಾರಿಗಳು ತಮ್ಮ ಟಾರ್ಗೆಟ್‌ಗಳ ಒಂದು ಲಿಸ್ಟ್‌ ಮಾಡ್ತಾರೆ. ಯಾರನ್ನ ಕೊಲೆ ಮಾಡಬೇಕು ಅಂತ ಅಧಿಕಾರಿಯೊಬ್ಬರು ಡೆಡ್‌ಲಿಸ್ಟ್‌ ಅನ್ನ ವೇರ್ ಈಸ್ ಡ್ಯಾಡಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡ್ತಾರೆ. ಆ ಲಿಸ್ಟ್‌ನಲ್ಲಿರುವ ಪ್ರತಿ ಹೆಸರನ್ನು ಈ ಸಾಫ್ಟ್‌ವೇರ್ ಟ್ರ್ಯಾಕ್ ಮಾಡುತ್ತದೆ. ಶಂಕಿತ ಸ್ಥಳವನ್ನು ಚೆಕ್‌ ಮಾಡುತ್ತದೆ. ಆ ವ್ಯಕ್ತಿ ತನ್ನ ಮನೆಯನ್ನು ತಲುಪಿದಾಗ ಈ ಸಾಫ್ಟ್‌ವೇರ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. ಕೂಡಲೇ, ಇಸ್ರೇಲಿ ವಾಯುಪಡೆಗೆ ಆತನನ್ನ ಕೊಲ್ಲುವ ಆದೇಶ ನೀಡಲಾಗತ್ತದೆ. ಆತ ತಪ್ಪು ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ, ಆತನ ಜೊತೆ ಆತನ ಕುಟುಂಬನವನ್ನೂ ಕೂಡ ಇಸ್ರೇಲ್‌ ಕೊಲ್ಲುತ್ತದೆ.

ಆತ ಒಂಟಿ ಮನೆಯಲ್ಲಿ ವಾಸ ಇದ್ರೆ, ಮನೆ ಮೇಲೆ ದಾಳಿ ನಡೆಯುತ್ತದೆ. ಒಂದು ವೇಳೆ, ಆತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರೆ, ಇಡೀ ಅಪಾರ್ಟ್‌ಮೆಂಟ್‌ಅನ್ನೇ ನಾಶ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಸುಮಾರು 80% ಪ್ಯಾಲೆಸ್ತೀನಿಯರ ಮನೆಯನ್ನ ಇಸ್ರೇಲ್‌ ನೆಲಸಮ ಮಾಡಿದೆ.

ಕಳೆದ 1ವರ್ಷದಿಂದ ಗಾಜಾದ ಮೇಲೆ ನಡೆಯುತ್ತಿರುವ ಮಾರಣಾಂತಿಕ ಜನಾಂಗೀಯ ಹತ್ಯೆಯಲ್ಲಿ 42 ಸಾವಿರಕ್ಕೂ ಹೆಚ್ಚೂ ಪ್ಯಾಲೆಸ್ತೀನಿಯರನ್ನ ಇಸ್ರೇಲ್‌ ಕೊಂದಿದೆ. ಇದೇ ‘ಎಐ’ಅನ್ನ ಬಳಸಿಕೊಂಡು ಇಸ್ರೇಲ್‌ ಈಗಾಗಲೇ ಸುಮಾರು 37,000 ಪ್ಯಾಲೆಸ್ತೀನಿಯನ್ನು ಕೊಲೆ ಮಾಡಿದೆ. ಈಗಲೂ ಕೊಲ್ತಾ ಇದೆ. ಇಸ್ರೇಲ್‌ ಈ ರೀತಿ ತಂತ್ರಜ್ಞಾನವನ್ನ ಬಳಸಿಕೊಂಡು ಪ್ಯಾಲೆಸ್ತೀನ್ ಜನರನ್ನ ಕೊಲೆ ಮಾಡ್ತಾ ಇರೋದು ತಂತ್ರಜ್ಞಾನದ ದುರುಪಯೋಗ ಕೂಡ ಹೌದು.. ಫೋನ್‌ಗಳನ್ನು ಹ್ಯಾಕ್ ಮಾಡೋಕೆ ಇಸ್ರೇಲ್‌ ಸ್ಪೈವೇರ್‌ಗಳನ್ನ ಬಳಸುತ್ತಿದೆ. ಮಿಲಿಟರಿ ಚೆಕ್‌ಪಾಯಿಂಟ್‌ಗಳಲ್ಲಿ ಮತ್ತು ಪ್ಯಾಲೆಸ್ತೀನಿಯನ್ ವಸತಿ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನ ಬಳಸಿ ಜನರು ಎಲ್ಲಿಗೆ ಹೋಗ್ತಾ ಇದ್ದಾರೆ ಅನ್ನೋ ಬಗ್ಗೆ ಮಾಹಿತಿಗಳನ್ನ ಪಡೆಯುತ್ತಿದೆ. ಅಷ್ಟೇ ಅಲ್ಲ, ಇಸ್ರೇಲ್‌ ತನ್ನ ಸೈಬರ್ ತಂತ್ರಜ್ಞಾನವನ್ನು ಪ್ರಪಂಚದಾದ್ಯಂತ ರಫ್ತು ಮಾಡುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X