ಗಾಜಾದ ಅಲ್-ಮಾವಾಸಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. 60 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಡಬ್ಲ್ಯೂಎಎಫ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಮಿಲಿಟರಿಯು ಜನನಿಬಿಡ ಪ್ರದೇಶವೆಂದು ಗೊತ್ತುಪಡಿಸಿದ ಖಾನ್ ಯೂನಿಸ್‌ನ ಪಶ್ಚಿಮಕ್ಕೆ ಇರುವ ಮಾವಾಸಿ ಮೇಲೆ ದಾಳಿ ಮಾಡಲಾಗಿದೆ. ಈ ಪ್ರದೇಶವು ಇಸ್ರೇಲ್-ಹಮಾಸ್ ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಪ್ಯಾಲೆಸ್ತೇನಿಯರಿಗೆ ನೆಲೆಯಾಗಿದೆ.
“ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ನಡೆಸಲಾಗಿದೆ” ಎಂದು ಇಸ್ರೇಲ್ ಮಿಲಿಟರಿಯೂ ಹೇಳಿದ್ದು ಯಾವುದೇ ಹೆಚ್ಚುವರಿ ಪುರಾವೆಗಳನ್ನು ನೀಡಿಲ್ಲ.
ಇದನ್ನು ಓದಿದ್ದೀರಾ? ಪೋಲಿಯೊ ಲಸಿಕೆ ಅಭಿಯಾನದ ನಡುವೆ ಗಾಜಾದ ಮೇಲೆ ಇಸ್ರೇಲ್ ದಾಳಿ; 35 ಮಂದಿ ಸಾವು
ಹಮಾಸ್ ಮತ್ತು ಇತರ ಉಗ್ರಗಾಮಿಗಳು ನಾಗರಿಕರು ಇರುವ ಜಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಇಸ್ರೇಲ್ ದೀರ್ಘಕಾಲದಿಂದ ಆರೋಪಿಸುತ್ತಾ ಬಂದಿದೆ. ಆದರೆ ಹಮಾಸ್ ಮಾತ್ರ ಇದನ್ನು ನಿರಾಕರಿಸಿದೆ.
“ನಿಖರ ಯುದ್ಧಸಾಮಗ್ರಿಗಳು, ವೈಮಾನಿಕ ಕಣ್ಗಾವಲು ಮತ್ತು ಹೆಚ್ಚುವರಿ ವಿಧಾನಗಳನ್ನು ಬಳಸಲಾಗಿದೆ” ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಈ ದಾಳಿಯಿಂದ ನಾಗರಿಕರೂ ಸಾವನ್ನಪ್ಪಿದ್ದಾರಾ ಎಂದು ಇಸ್ರೇಲ್ ತಿಳಿಸಿಲ್ಲ.
ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ 40,000 ಪ್ಯಾಲೇಸ್ತೆನಿಯರು ಹತರಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಗಾಜಾದ 2.3 ಮಿಲಿಯನ್ ಜನಸಂಖ್ಯೆಯ ಸುಮಾರು ಶೇಕಡ 90ರಷ್ಟು ಜನರನ್ನು ಆಗಾಗೆ ಸ್ಥಳಾಂತರ ಮಾಡಲಾಗಿದೆ.
Israel struck a tented encampment in southern Gaza near Khan Younis, killing at least 40 Palestinians in their sleep and injuring 60. A spokesperson for Gaza’s Civil Defence called it “one of the most heinous massacres in this frenzied war”. pic.twitter.com/f1aWKRCJqV
— Maktoob (@MaktoobMedia) September 10, 2024
