ಪಾಕಿಸ್ತಾನದ ಬಹಾವಲ್ಪುರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ ಹತ್ತು ಮಂದಿ ಮತ್ತು ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿ 26 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಟಿಆರ್ಎಫ್ ಹೊತ್ತುಕೊಂಡಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರವನ್ನು ನಡೆಸಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸೇನೆಯೊಂದಿಗೆ ನಾವಿದ್ದೇವೆ ಎಂದ ಕಾಂಗ್ರೆಸ್, ಶಿವಸೇನೆ, ಆರ್‌ಜೆಡಿ ನಾಯಕರು
ಮಂಗಳವಾರ ಬೆಳಗಿನ ಜಾವ 1.05ಕ್ಕೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜೈಶ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಆ ಪೈಕಿ ಬಹಾವಲ್ಪುರದ ಸುಭಾನ್ ಅಲ್ಲಾ ಸಂಕೀರ್ಣವೂ ಒಂದಾಗಿದೆ. ಇದು ಉಗ್ರರ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಬಹವಾಲ್ಪುರ್ ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾಗಿದ್ದು, ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿದೆ.
ಹತ್ಯೆಯಾದವರಲ್ಲಿ ಅಜರ್ ಅಕ್ಕ, ಆಕೆಯ ಪತಿ, ಸೋದರಳಿಯ ಮತ್ತು ಆತನ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಆಕೆಯ ಕುಟುಂಬದ ಐವರು ಮಕ್ಕಳು ಸೇರಿದ್ದಾರೆ ಎಂದು ಜೆಇಎಂ ಮುಖ್ಯಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ಉರ್ದು ವರದಿ ಮಾಡಿದೆ. ಅಜರ್ ಮತ್ತು ತಾಯಿಯ ಆಪ್ತ ಸಹಾಯಕ ಮತ್ತು ಇತರ ಇಬ್ಬರು ಆಪ್ತ ಸಹಚರರು ಸಹ ಭಾರತೀಯ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯನ್ನು 2000ರಲ್ಲಿ ಮಸೂದ್ ಅಜರ್ ಸ್ಥಾಪಿಸಿದ್ದು, ಹಲವು ದಾಳಿಗಳನ್ನು ಈ ಸಂಘಟನೆ ನಡೆಸಿದೆ.
