ಕೆ ಪಿ ಶರ್ಮಾ ಓಲಿ ಅವರು ನೇಪಾಳದ ನೂತನ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿ ಮೂರನೇ ಬಾರಿ ನೇಮಕವಾಗಿದ್ದಾರೆ.
ಪುಷ್ಮ ಕಮಲ್ ದಹಲ್ ಪ್ರಚಂಡ ಅವರು ಸಂಸತ್ತಿನಲ್ಲಿ ವಿಶ್ವಾಸ ಮತ ಕಳೆದುಕೊಂಡ ನಂತರ 72 ವರ್ಷದ ಕೆ ಪಿ ಶರ್ಮಾ ಓಲಿ ಅವರು ಸಂವಿಧಾನದ 76(2) ವಿಧಿಯ ಅನ್ವಯ ನೂತನ ಸರ್ಕಾರ ರಚನೆಯ ನೇತೃತ್ವ ವಹಿಸಲಿದ್ದಾರೆ.
ಅಧ್ಯಕ್ಷರಾದ ರಾಮಚಂದ್ರ ಪೌದೆಲ್ ಅವರು ನೇಪಾಳ ಕಮ್ಯೂನಿಸ್ಟ್ ಪಕ್ಷ(ಸಿಪಿಎನ್ ಯುಎಂಎಲ್)- ನೇಪಾಳ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ಕೆ ಪಿ ಶರ್ಮಾ ಓಲಿ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?
ಕೆ ಪಿ ಶರ್ಮಾ ಓಲಿ ಅವರ ನೂತನ ಸಂಪುಟದ ಸದಸ್ಯರು ಜು.15 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜು.13 ರಂದುರಾತ್ರಿ ನೇಪಾಳ ಕಾಂಗ್ರೆಸ್‌ನ ಅಧ್ಯಕ್ಷರಾದ ಶೇರ್ ಬಹುದ್ದೂರ್ ದೇಯ್ಬ ಅವರು ತಮ್ಮ ಪಕ್ಷದ 88 ಸದಸ್ಯರೊಂದಿಗೆ ಸಿಪಿಎನ್ ಯುಎಂಎಲ್‌ನ 77 ಸದಸ್ಯರು ಸೇರಿ ಒಟ್ಟು 165 ಸದಸ್ಯರ ಬೆಂಬಲವನ್ನು ಸಲ್ಲಿಸಿದ ನಂತರ ಕೆ ಪಿ ಶರ್ಮಾ ಓಲಿ ಅವರು ನೂತನ ಪ್ರಧಾನಿಯಾಗುವ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಕೆ ಪಿ ಶರ್ಮಾ ಓಲಿ ಅವರು 2015, 2016ರಲ್ಲಿ ಎರಡು ಬಾರಿ ನೇಪಾಳದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.