ಅಮೆರಿಕ ದಾಳಿ ಮಾಡಿದರೆ ಪರಮಾಣು ಅಸ್ತ್ರ ಬಳಕೆ: ಇರಾನ್‌ ಎಚ್ಚರಿಕೆ

Date:

Advertisements

ಅಮೆರಿಕ ಅಥವಾ ಅಮೆರಿಕ ಬೆಂಬಲಿತ ರಾಷ್ಟ್ರಗಳು ನಮ್ಮ ಮೇಲೆ ದಾಳಿ ಮಾಡಿದರೆ, ನಮ್ಮ ರಕ್ಷಣೆಗೆ ಪರಮಾಣು ಅಸ್ತ್ರಗಳನ್ನು ಬಳಸದೆ ಬೇರೆ ದಾರಿಯಿಲ್ಲ ಎಂದು ಇರಾನ್‌ನ ಪರಮೋಚ್ಛ ನಾಯಕ ಆಯತ್ತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರು ತಿಳಿಸಿದ್ದಾರೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್‌ನೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ ನಂತರ ಖಮೇನಿ ಅವರು ಕೂಡ ತಾವು ದಾಳಿ ನಡೆಸುವುದಾಗಿ ಹೇಳಿದ್ದರು.

“ನಾವು ಪರಮಾಣು ಅಸ್ತ್ರಗಳನ್ನು ಮೊದಲು ಬಳಸುವುದಿಲ್ಲ, ಆದರೆ ನೀವು ಇರಾನ್‌ನ ಪರಮಾಣು ವಿಷಯದಲ್ಲಿ ತಪ್ಪು ನಿರ್ಧಾರ ಕೈಗೊಂಡರೆ, ಇಲ್ಲವೆ ಇರಾನ್‌ ಮೇಲೆ ದಾಳಿ ನಡೆಸಿದರೆ ನಾವು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳುತ್ತೇವೆ. ಇರಾನ್‌ಗೆ ಈ ರೀತಿ ಮುಂದಾಗುವುದು ಬೇಕಾಗಿಲ್ಲ, ಆದರೆ ಬೇರೆ ಆಯ್ಕೆಗಳಿಲ್ಲ. ನೀವು ಅಥವಾ ಇಸ್ರೇಲ್‌ ಮೂಲಕ ನಮ್ಮ ಮೇಲೆ ಬಾಂಬ್‌ ದಾಳಿ ಮಾಡಿದರೆ ಇರಾನ್‌ ನಿಮ್ಮ ಮೇಲೆ ಬೇರೆಯದೆ ನಿರ್ಧಾರ ಕೈಗೊಳ್ಳುತ್ತದೆ” ಎಂದು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಯತ್ತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರಾದ ಲರಿಜಾನಿ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಕೆನಡಾ ಸಂಸದ ಕನ್ನಡಿಗ ಚಂದ್ರ ಆರ್ಯಗೆ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬಾಂಬ್ ಬೆದರಿಕೆಗೆ ಮಣಿಯಲು ಇರಾನ್ ನಿರಾಕರಿಸಿದ್ದು, ಅಗತ್ಯವಿದ್ದರೆ ಅಮೆರಿಕ ಸಂಬಂಧಿತ ಸ್ಥಳಗಳಲ್ಲಿ ದಾಳಿ ಮಾಡಲು ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರವನ್ನು ಸಿದ್ಧಪಡಿಸುತ್ತಿದೆ ಎಂದು ಇರಾನ್‌ ಪರಮೋಚ್ಛ ನಾಯಕ ತಿಳಿಸಿದ್ದರು.

ಟ್ರಂಪ್ ಅವರ ಬೆದರಿಕೆಯ ನಂತರ, ಇರಾನ್ ತನ್ನ ಕ್ಷಿಪಣಿಗಳನ್ನು ದೇಶಾದ್ಯಂತವಿರುವ ತನ್ನ ಭೂಗತ ಸ್ಥಳಗಳಲ್ಲಿ ಉಡಾವಣೆಗೆ ಸಿದ್ಧವಾದ ಸ್ಥಿತಿಯಲ್ಲಿ ಇರಿಸಿದೆ. ಇವು ವೈಮಾನಿಕ ದಾಳಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಇರಾನ್‌ ರಾಜಕೀಯ ನಾಯಕರು ತಿಳಿಸಿದ್ದರು.

ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ನಿರತವಾಗಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X