ಕೆನಡಾದ ವ್ಯಾಂಕೋವರ್ ನಗರದಲ್ಲಿ ಸ್ಥಳೀಯ ಉತ್ಸವ ನಡೆಯುತ್ತಿದ್ದ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ನೂರಾರು ಜನರಿದ್ದ ಸ್ಥಳದ ಮೇಲೆ ಹರಿದ ಪರಿಣಾಮ ಹಲವು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಕೆಲವು ವಾಹನಗಳು ಕೂಡ ಜಖಂಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ದಾಳಿಯೋ ಅಥವಾ ಅಪಘಾತವೋ ಎಂಬುದನ್ನು ಪೊಲೀಸರು ಇಲ್ಲಿಯವೆರೆಗೂ ದೃಢಪಡಿಸಿಲ್ಲ.
ಉತ್ಸವದ ವೇಳೆ ಕಪ್ಪು ಬಣ್ಣದ ಎಸ್‌ಯುವಿ ಕಾರು ವೇಗವಾಗಿ ಧಾವಿಸಿ ಜನಸಂದಣಿಯ ಮೂಲಕ ಚಲಿಸುತ್ತಿದ್ದ ಹಲವು ಜನರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರಿನ ಚಾಲಕ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಈ ಭೀಕರ ಘಟನೆಯ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಕಾರು ದಾಳಿಯ ನಂತರ ಶವಗಳು ಬೀದಿಯಲ್ಲಿ ಬಿದ್ದಿರುವುದನ್ನು ತೋರಿಸುತ್ತವೆ. ವೈದ್ಯಕೀಯ ಸಿಬ್ಬಂದಿ, ಸ್ಥಳೀಯ ಕಾರ್ಯಕರ್ತರು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಧಾವಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬರುತ್ತಿದೆ.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಬರೆದಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಮರಣ ಹೊಂದಿದ ಮತ್ತು ಗಾಯಗೊಂಡವರ ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ನಾವೆಲ್ಲರೂ ನಿಮ್ಮ ನೋವಿನಲ್ಲಿ ದುಃಖಿತರಾಗಿದ್ದೇನೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಗಾಯಗೊಂಡವರಿಗೆ ನೆರವು ನೀಡಲು ಎಲ್ಲ ರೀತಿಯ ತುರ್ತುಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
Initial reports of several killed and over a dozen injured, after an SUV plowed into a closed-off street filled with people celebrating the Lapu Lapu Festival in Vancouver, Canada. pic.twitter.com/cLQQPfOMCq
— OSINTdefender (@sentdefender) April 27, 2025
