ಇಂಗ್ಲೆಂಡ್‌ ವಿಮಾನದಲ್ಲಿ ಟ್ರಂಪ್‌, ಅಮೆರಿಕಾಕ್ಕೆ ಸಾವು ಎಂದ ಭಾರತೀಯ ಮೂಲದ ವ್ಯಕ್ತಿ ಬಂಧನ

Date:

Advertisements

ಇಂಗ್ಲೆಂಡ್‌ನ ಈಸಿಜೆಟ್ ವಿಮಾನದಲ್ಲಿ ಬಾಂಬ್ ಬೆದರಿಕೆಯೊಡ್ಡಿ “ಅಲ್ಲಾಹು ಅಕ್ಬರ್” ಎಂದು ಅನುಚಿತವಾಗಿ ವರ್ತಿಸಿದ 41 ವರ್ಷದ ಅಭಯ್ ನಾಯಕ್ ಎಂಬ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಈ ವ್ಯಕ್ತಿ ಲಂಡನ್ ಸಮೀಪದ ಲುಟನ್ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೊಗಳಲ್ಲಿ ಇರುವಂತೆ ಆತ ಕೈಗಳನ್ನು ಮೇಲಕ್ಕೆ ಎತ್ತಿ “ಅಮೆರಿಕಕ್ಕೆ ಸಾವು ಮತ್ತು ಟ್ರಂಪ್‌ಗೆ ಸಾವು” ಎಂದು ಪದೇ ಪದೇ ಕೂಗುತ್ತಿರುವುದು ಕಂಡುಬಂದಿದೆ.

ಈ ಘಟನೆ ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಹೊರಟ ಈಸಿಜೆಟ್ ವಿಮಾನ 609 ರಲ್ಲಿ ಸಂಭವಿಸಿದೆ. ವಿಮಾನವು ಬೆಳಿಗ್ಗೆ 8.20 ಗಂಟೆ ಸುಮಾರಿಗೆ ಗ್ಲ್ಯಾಸ್ಗೋದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ವಿಮಾನದಲ್ಲಿ ಯಾವುದೇ ಸ್ಫೋಟಕಗಳಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸುವವರೆಗೂ ಸಹಪ್ರಯಾಣಿಕರು ಅಭಯ್ ನಾಯಕ್‌ನನ್ನು ಹಿಡಿದುಕೊಂಡಿದ್ದರು. ವಿಮಾನದ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮುಂದಿನ ವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಕಸ್ಟಡಿಯಲ್ಲಿ ಇರಿಸಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?

ಅಭಯ್ ನಾಯಕ್‌ನ ಅನುಚಿತ ವರ್ತನೆಯಿಂದಾಗಿ ಆತನನ್ನು ವಿಮನ ಪ್ರಯಾಣದಿಂದ ನಿಷೇಧಿಸಲಾಗಿದೆ ಎಂದು ಈಸಿಜೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಈಸಿಜೆಟ್‌ನ ಸಿಬ್ಬಂದಿಗೆ ಎಲ್ಲ ಸಂದರ್ಭಗಳನ್ನು ಮೌಲ್ಯಮಾಪನ ಮಾಡಲು, ವಿಮಾನ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ತ್ವರಿತವಾಗಿ ಮತ್ತು ಸೂಕ್ತವಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಲಾಗಿದೆ” ಎಂದು ಈಸಿಜೆಟ್ ಹೇಳಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೋಹಾ | ಕರ್ನಾಟಕ ಸಂಘ ಕತಾರ್, ಐಸಿಸಿ ಸಹಯೋಗದೊಂದಿಗೆ ‘ಎಂಜಿನಿಯರ್ಸ್‌ ಡೇ’ ಆಚರಣೆ

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ...

ಭಾರತ-ಭೂತಾನ್ ನಡುವೆ 2 ಗಡಿಯಾಚೆಗಿನ ರೈಲು ಯೋಜನೆ ಘೋಷಣೆ

ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ...

ಭಯೋತ್ಪಾದಕ ಸಂಘಟನೆ ಸಾಲಿಗೆ ಬಿಷ್ಣೋಯ್ ಗ್ಯಾಂಗ್: ಕೆನಡಾ ಸರ್ಕಾರ ಘೋಷಣೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಕೆನಡಾ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು,...

ಅಮೆರಿಕದ ಹೊರಗೆ ತಯಾರಾದ ಸಿನಿಮಾಗಳಿಗೆ ಶೇ. 100 ಸುಂಕ: ಟ್ರಂಪ್ ಘೋಷಣೆ

ಅಮೆರಿಕದ ಹೊರಗೆ ನಿರ್ಮಾಣವಾಗುವ ಎಲ್ಲ ಚಿತ್ರಗಳ ಮೇಲೂ ಶೇ. 100 ರಷ್ಟು...

Download Eedina App Android / iOS

X