ಮಧ್ಯ ಪ್ರಾಚ್ಯ | ಟರ್ಕಿಶ್ ರಾಷ್ಟ್ರೀಯತೆ ಉಗಮದ ಇತಿಹಾಸ

Date:

Advertisements
ಅತಾತುರ್ಕ್‌ ಅವರ ದೃಷ್ಟಿಕೋನವು ಆಧುನಿಕ, ಜಾತ್ಯತೀತ ಹಾಗೂ ರಾಷ್ಟ್ರೀಯತೆಯ ರಾಷ್ಟ್ರವನ್ನು ಸೃಷ್ಟಿಸುವುದಾಗಿತ್ತು. ಅವರು 'ಕೆಮಾಲಿಸಂ' ಎಂಬ ಸಿದ್ಧಾಂತವನ್ನು ಹುಟ್ಟುಹಾಕಿದರು. ಅವರ ನೀತಿಗಳು ಟರ್ಕಿಯಲ್ಲಿ ಬಲವಾದ ರಾಷ್ಟ್ರೀಯ ಗುರುತನ್ನು ಹುಟ್ಟುಹಾಕಿತು.

ಮಧ್ಯ ಪ್ರಾಚ್ಯ ರಾಷ್ಟ್ರಗಳಾಗಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ದಿನೇ-ದಿನೇ ಉಲ್ಬಣಗೊಳ್ಳುತ್ತಿದೆ. ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ ಬಳಿಕ, ಉಲ್ಬಣವು ಮತ್ತಷ್ಟು ಬಿಗಡಾಯಿಸಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಇರಾನ್ ಸೇರಿದಂತೆ ನಾನಾ ರಾಷ್ಟ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇದೆ. ಈ ದಾಳಿಗಳ ಹಿಂದೆ ಅಮೆರಿಕದ ಸ್ವಾರ್ಥ ಹಿತಾಸಕ್ತಿಯಿದೆ ಎಂದು ಹೇಳಲಾಗುತ್ತಿದೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳ ಈ ದಾಳಿ, ಸಂಘರ್ಷಗಳಿಗೆ ಕಾರಣಗಳನ್ನು ತಿಳಿಯುವ ಸಮಯದಲ್ಲಿ, ಆ ರಾಷ್ಟ್ರಗಳ ರಾಷ್ಟ್ರೀಯತೆ ಉಗಮವಾಗಿದ್ದ ಹೇಗೆ ಎಂಬುದನ್ನು ನೋಡುವುದು ಅತ್ಯಗತ್ಯ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಟರ್ಕಿಯೂ ಒಂದು. ಈ ರಾಷ್ಟ್ರ ಅಥವಾ ರಾಷ್ಟ್ರೀಯತೆಯು ಒಟ್ಟೊಮನ್ ತುರುಷ್ಕರ ಸಾಮ್ರಾಜ್ಯದಲ್ಲಿ ಹೆಚ್ಚುತ್ತಿದ್ದ ಭ್ರಷ್ಟಾಚಾರ ಮತ್ತು ವಿಘಟನೆಯ ವಿರುದ್ಧದ ಹೋರಾಟದಿಂದ ಹುಟ್ಟಿಕೊಂಡಿತು. ಒಟ್ಟೊಮನ್ ಸಾಮ್ರಾಜ್ಯವು ದುರ್ಬಲಗೊಂಡಂತೆ, ಅಲ್ಲಿನ ಪ್ರಜ್ಞಾವಂತ ಜನರು ಹೊಸ ಒಗ್ಗಟ್ಟು ಮತ್ತು ಗುರುತಿನ ಅಗತ್ಯಗಳ ಬಗ್ಗೆ ಹೆಚ್ಚು ಮಾತನಾಡಲಾರಂಭಿಸಿದರು, ಜನರನ್ನು ಒಗ್ಗೂಡಿಸಿದರು. ‘ಯಂಗ್ ಟರ್ಕ್ಸ್’ ಎಂಬ ಸಂಘಟನೆಯು ಆಧುನೀಕರಣ ಮತ್ತು ರಾಷ್ಟ್ರೀಯ ಒಗ್ಗಟ್ಟಿಗೆ ಒತ್ತಾಯಿಸಿತು. ಟರ್ಕಿಶ್ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದರಿಂದ ಜನರನ್ನು ಒಗ್ಗೂಡಿಸಬಹುದು ಎಂದು ಅವರೆಲ್ಲರೂ ಭಾವಿಸಿದ್ದರು. ಈ ಭಾಷಾಭಿಮಾನದ ಆಲೋಚನೆಯು ಜನರನ್ನು ಒಗ್ಗೂಡಿಸುವ ಶಕ್ತಿಯಾಯಿತು. ಇದು, ಆಧುನಿಕ ಟರ್ಕಿಯ ರಚನೆಗೆ ಅಡಿಪಾಯವನ್ನು ಹಾಕಿತು.

ಕ್ರಿಶ್ಚಿಯನ್ ರಾಷ್ಟ್ರೀಯತೆಗಳ ಮೇಲಿನ ಶತ್ರುತ್ವ

Advertisements

ಟರ್ಕಿಶ್ ರಾಷ್ಟ್ರೀಯತೆ ಬೆಳೆದಂತೆ, ಒಟ್ಟೊಮನ್ ಸಾಮ್ರಾಜ್ಯದೊಳಗಿನ ಕ್ರಿಶ್ಚಿಯನ್ ರಾಷ್ಟ್ರೀಯತೆಗಳ ವಿರುದ್ಧದ ಶತ್ರುತ್ವವು ಹೆಚ್ಚಲಾರಂಭಿಸಿತು. ತಮ್ಮ ವಿರುದ್ಧ ಶತ್ರುತ್ವ ಬೆಳೆಯುತ್ತಿದೆ ಎಂದು ಕ್ರಿಶ್ಚಿಯನ್ನರು ಭಾವಿಸಿದ್ದರು. ಇದು ಮೂರು ಪ್ರತ್ಯೇಕ ನರಮೇಧಗಳಿಗೆ ಕಾರಣವಾಯಿತು: ಆರ್ಮೇನಿಯನ್, ಗ್ರೀಕ್ ಹಾಗೂ ಅಸಿರಿಯನ್ ನರಮೇಧಗಳು. 1915-1917ರ ಆರ್ಮೇನಿಯನ್ ನರಮೇಧದಲ್ಲಿ 15 ಲಕ್ಷ ಆರ್ಮೇನಿಯನ್ನರನ್ನು ಸಂಚು ಹೂಡಿ ಕೊಲ್ಲಲಾಯಿತು. ಈ ನರಮೇಧವು ಅತ್ಯಂತ ಕ್ರೂರ ನರಮೇಧಗಳಲ್ಲಿ ಮೊದಲನೆಯದು. ಆರ್ಮೇನಿಯನ್ನರನ್ನು ಒಟ್ಟೊಮನ್ ಸಾಮ್ರಾಜ್ಯದ ದ್ರೋಹಿಗಳೆಂದು ಕರೆದು, ಅವರನ್ನು ಸಿರಿಯನ್ ಮರುಭೂಮಿಯಲ್ಲಿ ಕ್ರೂರ ಮರಣ ಯಾತ್ರೆಗೆ (ಮರುಭೂಮಿಯಲ್ಲಿ ನಡೆಯುತ್ತಲೇ ಸಾಯುವುದು) ದೂಡಲಾಯಿತು. ಒಟ್ಟೊಮನ್ ಸಾಮ್ರಾಜ್ಯ ಪತನಗೊಂಡ ನಂತರವೂ, ಟರ್ಕಿಶ್ ಅಧಿಕಾರಿಗಳು ಕೂಡ ದಶಕಗಳ ಕಾಲ ಈ ನರಮೇಧ ನಡೆದಿದೆ ಎಂಬುದನ್ನು ನಿರಾಕರಿಸಿದರು. ಅದೂ, ಭಾರೀ ಪುರಾವೆಗಳು ಇದ್ದಾಗಲೂ ಕೂಡ.

1914-1922ರ ಅವಧಿಯಲ್ಲಿ ಗ್ರೀಕರ ಮೇಲೆ ನರಮೇಧ ನಡೆಯಿತು. ಲಕ್ಷಾಂತರ ಗ್ರೀಕರನ್ನು ದಾರುಣವಾಗಿ ಕೊಲ್ಲಲಾಯಿತು. ಹಲವರನ್ನು ಗಡಿಪಾರು ಮಾಡಲಾಯಿತು. ಟರ್ಕಿಯ ಗ್ರೀಕರನ್ನು ಒಟ್ಟೊಮನ್ ಸಾಮ್ರಾಜ್ಯವು ದೋಹಿಗಳೆಂದು ಪರಿಗಣಿಸಿತ್ತು. ಈ ನರಮೇಧವು ಬಲವಂತದ ಮರಣ ಯಾತ್ರೆಗಳು, ಸಾಮೂಹಿಕ ಗಲ್ಲಿಗೇರಿಸುವಿಕೆ ಹಾಗೂ ಗ್ರೀಕ್ ಸಾಂಸ್ಕೃತಿಕ ಪರಂಪರೆಗಳ ಧ್ವಂಸವನ್ನು ಒಳಗೊಂಡಿತ್ತು. ಆರ್ಮೇನಿಯನ್ ನರಮೇಧದಂತೆ, ಗ್ರೀಕ್ ನರಮೇಧವನ್ನೂ ಟರ್ಕಿಶ್ ಅಧಿಕಾರಿಗಳು ಅನೇಕ ವರ್ಷಗಳ ಕಾಲ ನಿರಾಕರಿಸಿದ್ದರು.

ಈ ಲೇಖನ ಓದಿದ್ದೀರಾ?: ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು

ಮತ್ತೊಂದು, 1914 ಮತ್ತು 1920ರ ನಡುವೆ ನಡೆದ ಅಸಿರಿಯನ್ ನರಮೇಧ. ಈ ಭೀಕರ ಕೃತ್ಯದಲ್ಲಿ ಸುಮಾರು 2.5 ಲಕ್ಷ ಅಸಿರಿಯನ್ನರನ್ನು ಕೊಲ್ಲಲಾಯಿತು. ಅವರನ್ನು ಒಟ್ಟೊಮನ್ ಸಾಮ್ರಾಜ್ಯವು ತಮ್ಮ ಅವಿಶ್ವಾಸಿಗಳು ಮತ್ತು ಅಶುದ್ಧರೆಂದು ಕರೆದಿತ್ತು. ಈ‍ ನರಮೇಧದಲ್ಲಿ ಸಾಮೂಹಿಕ ಕೊಲೆಗಳು, ಬಲವಂತದ ಗಡಿಪಾರು ಹಾಗೂ ಅಸಿರಿಯನ್ ಸಮುದಾಯಗಳ ಧ್ವಂಸಗಳು ನಡೆದವು.

ಈ ಮೂರು ಕೃತ್ಯಗಳು ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆಯಿಂದ ಮುಕ್ತವಾದ ಏಕರೂಪದ ಟರ್ಕಿಶ್ ರಾಷ್ಟ್ರವನ್ನು ಸೃಷ್ಟಿಸುವ ಆಕಾಂಕ್ಷೆಯೊಂದಿಗೆ ಜನರು ಒಗ್ಗೂಡುತ್ತಿದ್ದ ಸಂಕಷ್ಟದ ಸಮಯದಲ್ಲಿ ನಡೆದವು.

ಪಾಶ್ಚಿಮಾತ್ಯ ಶಕ್ತಿಗಳ ನಿರ್ಲಕ್ಷ್ಯ

ಪಾಶ್ಚಿಮತ್ಯ ಶಕ್ತಿಗಳು ಒಟ್ಟೊಮನ್ ಸಾಮ್ರಾಜ್ಯದೊಳಗಿನ ಕ್ರಿಶ್ಚಿಯನ್ ಸಮುದಾಯಗಳ ಕ್ರೌರ್ಯವನ್ನು ಆರಂಭದಲ್ಲಿ ನಿರ್ಲಕ್ಷಿಸಿದವು. ತಮ್ಮ ಭೂರಾಜಕೀಯದ ಹಿತಾಸಕ್ತಿಗಳ ಮೇಲೆ ಹೆಚ್ಚು ಗಮನ ಹರಿಸಿದವು. ಆದರೆ, ನರಮೇಧ ಕೃತ್ಯಗಳ ವರದಿಗಳು ಹೊರಬಂದಂತೆ, ಪಾಶ್ಚಿಮಾತ್ಯ ದೇಶಗಳಲ್ಲಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತು. ಇದು ಬಾಧಿತ ಜನರಿಗೆ ಮಾನವೀಯ ಸಹಾಯ ಒದಗಿಸುವ ಪ್ರಯತ್ನಗಳಿಗೆ ಕಾರಣವಾಯಿತು.

ಮೊದಲ ಮಹಾಯುದ್ಧದ ನಂತರ ನಡೆದದ್ದೇನು?

ಮೊದಲ ಮಹಾಯುದ್ಧದ ನಂತರ, ನೆರೆಹೊರೆಯ ರಾಷ್ಟ್ರಗಳು ಒಟ್ಟೊಮನ್ ಸಾಮ್ರಾಜ್ಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡವು. ಅಪರಾಧಿಗಳನ್ನು ಜವಾಬ್ದಾರರನ್ನಾಗಿಸಲು ಪ್ರಯತ್ನಿಸಿದವು. 1920ರಲ್ಲಿ ಸಹಿ ಮಾಡಲಾದ ಸೇವರ್ ಒಪ್ಪಂದವು ಒಟ್ಟೊಮನ್ ಸಾಮ್ರಾಜ್ಯವನ್ನು ಒಡೆದು ಹಾಕಲು ಮತ್ತು ಹೊಸ ರಾಷ್ಟ್ರಗಳನ್ನು ಸ್ಥಾಪಿಸುವ ಗುರಿಯೊಂದಿಗೆ ನಡೆಯಿತು. ಈ ಒಪ್ಪಂದವು ಅಲ್ಪಸಂಖ್ಯಾತ ಗುಂಪುಗಳ ರಕ್ಷಣೆ ಮತ್ತು ನರಮೇಧಕ್ಕೆ ಕಾರಣರಾದವರನ್ನು ವಿಚಾರಣೆಗೆ ಒಳಪಡಿಸಲು ನಿಬಂಧನೆಗಳನ್ನು ರೂಪಿಸಿತು. ಆದರೆ, ಟರ್ಕಿಶ್ ಪ್ರತಿರೋಧದಿಂದಾಗಿ ಈ ಒಪ್ಪಂದವು ಸಂಪೂರ್ಣವಾಗಿ ಜಾರಿಯಾಗಲಿಲ್ಲ.

ಮುಸ್ತಫಾ ಕೆಮಾಲ್ ಅತಾತುರ್ಕ್‌ನ ಉದಯ

ಒಟ್ಟೊಮನ್ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಮುಸ್ತಫಾ ಕೆಮಾಲ್ ಅತಾತುರ್ಕ್ ನಿರ್ಣಾಯಕ ವ್ಯಕ್ತಿಯಾಗಿ ಬೆಳೆದರು. ಒಟ್ಟೊಮನ್ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದ ಅತಾತುರ್ಕ್ ಅವರು ಮಿತ್ರರಾಷ್ಟ್ರಗಳ ನೆರವು ಪಡೆಯಲು ಮತ್ತು ಒಟ್ಟೊಮನ್ ಸಾಮ್ರಾಜ್ಯದ ವಿರುದ್ಧದ ಟರ್ಕಿಶ್ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು.

ಟರ್ಕಿಯಲ್ಲಿ ಗಣರಾಜ್ಯದ ಸ್ಥಾಪನೆ

1923ರಲ್ಲಿ, ಅತಾತುರ್ಕ್ ಅವರು ಟರ್ಕಿಯಲ್ಲಿ ಗಣರಾಜ್ಯವನ್ನು ಸ್ಥಾಪಿಸಿದರು. ಒಟ್ಟೊಮನ್ ಸುಲ್ತಾನತೆ ಮತ್ತು ಖಲೀಫತೆಯನ್ನು ಅಧಿಕೃತವಾಗಿ ರದ್ದುಗೊಳಿಸಿದರು. ದೇಶವನ್ನು ಆಧುನೀಕರಣಗೊಳಿಸಲು ಮತ್ತು ಜಾತ್ಯತೀತಗೊಳಿಸಲು ಅವರು ಹಲವಾರು ಸುಧಾರಣೆಗಳನ್ನು ಜಾರಿಗೊಳಿಸಿದರು. ಯುರೋಪಿಯನ್ ಮಾದರಿಗಳ ಆಧಾರದ ಮೇಲೆ ಹೊಸ ಕಾನೂನು ವ್ಯವಸ್ಥೆಯನ್ನು ರೂಪಿಸುವುದು, ಅರೇಬಿಕ್ ಲಿಪಿಯನ್ನು ಲ್ಯಾಟಿನ್ ವರ್ಣಮಾಲೆಯಿಂದ ಬದಲಾಯಿಸುವುದು ಹಾಗೂ ಜಾತ್ಯತೀತ ಮತ್ತು ವೈಜ್ಞಾನಿಕ ಕಲಿಕೆಯನ್ನು ಉತ್ತೇಜಿಸಲು ಶಿಕ್ಷಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವುದು ಸುಧಾರಣೆಗಳ ಭಾಗವಾಗಿದ್ದವು.

ಕೆಮಾಲಿಸಂನ ದೃಷ್ಟಿಕೋನ

ಅತಾತುರ್ಕ್‌ ಅವರ ದೃಷ್ಟಿಕೋನವು ಆಧುನಿಕ, ಜಾತ್ಯತೀತ ಹಾಗೂ ರಾಷ್ಟ್ರೀಯತೆಯ ರಾಷ್ಟ್ರವನ್ನು ಸೃಷ್ಟಿಸುವುದಾಗಿತ್ತು. ಅವರು ‘ಕೆಮಾಲಿಸಂ’ ಎಂಬ ಸಿದ್ಧಾಂತವನ್ನು ಹುಟ್ಟುಹಾಕಿದರು. ಇದು ಗಣರಾಜ್ಯವಾದ, ರಾಷ್ಟ್ರೀಯತೆ, ಜಾತ್ಯತೀತತೆ, ಜನತಾವಾದ ಹಾಗೂ ಜನಪರ ಸುಧಾರಣಾವಾದವನ್ನು ಒಳಗೊಂಡಿತ್ತು. ಅವರ ನೀತಿಗಳು ಟರ್ಕಿಯಲ್ಲಿ ಬಲವಾದ ರಾಷ್ಟ್ರೀಯ ಗುರುತನ್ನು ಹುಟ್ಟುಹಾಕಿತು.

ಅತಾತುರ್ಕ್‌ ಅವರ ದೃಷ್ಟಿಕೋನಗಳು ಮತ್ತು ಸುಧಾರಣೆಗಳು ಇಂದಿಗೂ ಟರ್ಕಿಯ ಮೇಲೆ ಪ್ರಭಾವ ಬೀರುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X