ಜೆಕ್ ಮೂಲದ ಸಾಹಿತಿ, “ದಿ ಅನ್ಬೇರಬಲ್ ಲೈಟ್ನೆಸ್ ಆಫ್ ಬೀಯಿಂಗ್” ಕಾದಂಬರಿಯ ಲೇಖಕ, ಕಾದಂಬರಿಕಾರ, ನಾಟಕಕಾರ ಮಿಲನ್ ಕುಂದೇರಾ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ತಮ್ಮ ಕಾದಂಬರಿಗಳು, ವಿಶಿಷ್ಟ ಬರವಣೆಗೆಯ ಶೈಲಿಯ ಮೂಲಕ ಜನಪ್ರಿಯರಾಗಿದ್ದ ಕುಂದೇರಾ ಅವರು ಜೆಕ್ನ ಬ್ರನೋ ಪಟ್ಟಣದಲ್ಲಿ ಏಪ್ರಿಲ್ 1, 1929 ರಂದು ಜನಿಸಿದ್ದರು.
1968ರಲ್ಲಿ ಜೆಕೊಸ್ಲೊವಾಕಿಯಾದ ಮೇಲೆ ಸೋವಿಯತ್ ಅತಿಕ್ರಮಣವನ್ನು ಟೀಕಿಸಿದ್ದಕ್ಕೆ ಬಹಿಷ್ಕಾರಗೊಂಡ ನಂತರ ಅವರು 1975ರಲ್ಲಿ ಫ್ರಾನ್ಸ್ಗೆ ವಲಸೆ ಹೋಗಿದ್ದರು.
ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಮಿಲೋಸ್ ಫಾರ್ಮನ್ ಸೇರಿದಂತೆ ಹಲವು ಖ್ಯಾತನಾಮರಿಗೆ ಅವರು ಸಿನಿಮಾ, ನಾಟಕಗಳ ಬಗ್ಗೆ ಪಾಠ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ದೇವರ ಹುಂಡಿಯಲ್ಲಿ 5 ಸಾವಿರ ರೂ. ಕದ್ದ ಕಳ್ಳ; ಕಾಣಿಕೆಯಾಗಿ ದೇವರ ಪಾದಕ್ಕೆ ಎಷ್ಟು ಹಣವಿಟ್ಟ ಗೊತ್ತಾ?
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಿನಿಮಾ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅವರು 1953 ರಿಂದ ಕಾದಂಬರಿಗಳು ಮತ್ತು ನಾಟಕಗಳನ್ನು ಬರೆಯಲು ಶುರು ಮಾಡಿದರು.
ದಿ ಜೋಕ್, ದಿ ಬುಕ್ ಆಫ್ ಲಾಫ್ಟರ್, ದಿ ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟಿಂಗ್, ದಿ ಅನ್ಬೇರಬಲ್ ಲೈಟ್ನೆಸ್ ಆಫ್ ಬೀಯಿಂಗ್ ಮಿಲನ್ ಕುಂದೇರಾ ಅವರ ಪ್ರಸಿದ್ಧ ಕೃತಿಗಳಾಗಿವೆ.