ಸಚಿವೆ ಸುಯೆಲ್ಲಾ ವಜಾ ಪ್ರಕರಣ | ರಿಷಿ ಸುನಕ್ ವಿರುದ್ಧ ಮೊದಲ ಅವಿಶ್ವಾಸ ಪತ್ರ

Date:

Advertisements

ಸೋಮವಾರ ನಡೆದ ಸಂಪುಟ ಪುನಾರಚನೆಯಲ್ಲಿ ಗೃಹ ಸಚಿವೆ ಸುಯೆಲ್ಲಾ ಬ್ರವರ್‌ಮನ್ ಅವರನ್ನು ವಜಾಗೊಳಿಸಿದ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಮೊದಲ ಅವಿಶ್ವಾಸ ಪತ್ರವನ್ನು ಎದುರಿಸುತ್ತಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಷ್ಠಾವಂತ ಟೋರಿ ಸಂಸದೆ ಆಂಡ್ರಿಯಾ ಜೆಂಕಿನ್ಸ್, ಸುನಕ್ ಅವರ ಬದಲಿಗೆ “ನಿಜವಾದ ಕನ್ಸರ್ವೇಟಿವ್ ಪಕ್ಷದ ನಾಯಕ”ನಿಗಾಗಿ ಕರೆ ನೀಡಿದ್ದಾರೆ.

“ಸಾಕು ಸಾಕು… ರಿಷಿ ಸುನಕ್ ಹೋಗುವ ಸಮಯ ಬಂದಿದೆ…” ಎಂದು ಎಕ್ಸ್‌ನಲ್ಲಿ ಅವರು ಬರೆದು ತಮ್ಮ ಅವಿಶ್ವಾಸ ಪತ್ರವನ್ನು ಹಂಚಿಕೊಂಡಿದ್ದಾರೆ.

ಸ್ವಂತ ಪಕ್ಷದ ಸಂಸದೆಯೇ ಪ್ರಧಾನಿ ವಿರುದ್ಧ ಅವಿಶ್ವಾಸ ಪತ್ರ ಕಳಿಸಿರುವುದು ಬ್ರಿಟನ್‌ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಹೌಸ್ ಆಫ್ ಕಾಮನ್ಸ್ ವ್ಯವಹಾರಗಳನ್ನು ನೋಡಿಕೊಳ್ಳುವ 1992 ಸಮಿತಿ ಅಧ್ಯಕ್ಷ ಗ್ರಹಾಂ ಬ್ರಾಡ್‌ಗೆ ಆಕೆ ಪತ್ರವನ್ನು ಕಳಿಸಿದ್ದಾರೆ.

Advertisements

ಅವಿಶ್ವಾಸ ಪತ್ರ

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಷ್ಠಾವಂತರಾದ ಟೋರಿ, ಸಂಪುಟದಿಂದ ಸುಯೆಲ್ಲಾ ಅವರನ್ನು ವಜಾಗೊಳಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ‘ರಿಷಿ ಸುನಕ್ ತನ್ನ ಸಂಪುಟದಲ್ಲಿ ಸತ್ಯ ಮಾತನಾಡುತ್ತಿದ್ದ ಏಕೈಕ ವ್ಯಕ್ತಿಯ ಮೇಲೆ ಪ್ರಹಾರ ಮಾಡಿದ್ದಾರೆ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಿಷಿ ಸುನಕ್ ಹುದ್ದೆಯಿಂದ ಇಳಿಯುವ ಸಮಯ ಬಂದಿದೆ’ ಎಂದಿರುವ ಆಂಡ್ರಿಯಾ, ಪ್ರಧಾನಿ ವಿರುದ್ಧ ಅವಿಶ್ವಾಸ ಪತ್ರ ಬರೆಯುವಂತೆ ಇತರ ಸಂಸದರಿಗೂ ಕರೆ ನೀಡಿದ್ದಾರೆ.

ರಿಷಿ ಸುನಕ್ ಪ್ರಧಾನಿಯಾದ ನಂತರ ಸಂಸದರೊಬ್ಬರು ಅವಿಶ್ವಾಸ ಪತ್ರ ಬರೆದಿರುವುದು ಇದೇ ಮೊದಲ ಬಾರಿ. ಆದರೆ, ಇದರಿಂದ ರಿಷಿ ಸುನಕ್ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಎದುರಿಸುವ ಅಗತ್ಯವಿಲ್ಲ. ಆಡಳಿತ ಪಕ್ಷದ ಒಟ್ಟು ಸಂಸದರ ಪೈಕಿ ಶೇ.15ರಷ್ಟು ಮಂದಿ ಅವಿಶ್ವಾಸ ವ್ಯಕ್ತಪಡಿಸಿದರೆ, ಆಗ ಪ್ರಧಾನಿ ವಿಶ್ವಾಸ ಮತವನ್ನು ಗೆಲ್ಲಬೇಕಾಗುತ್ತದೆ.

ಈ ಸುದ್ದಿ ಓದಿದ್ದೀರಾ: ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನೆಹರೂ: ಸಿಎಂ ಸಿದ್ದರಾಮಯ್ಯ

ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದ ಸುಯೆಲ್ಲಾ ಬ್ರವರ್‌ಮನ್ ಅವರನ್ನು ಸಂಪುಟದಿಂದ ವಜಾಗೊಳಿಸುತ್ತಿರುವುದಾಗಿ ರಿಷಿ ಸುನಕ್ ಸರ್ಕಾರ ಸೋಮವಾರ ಪ್ರಕಟಿಸಿತ್ತು. ಆ ಸ್ಥಾನವನ್ನು ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲಿ ಅವರಿಗೆ ನೀಡಲಾಗಿದೆ. ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್‌ಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ಅವರಿಗೆ ವಿದೇಶಾಂಗ, ಕಾಮನ್‌ವೆಲ್ತ್, ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X