ಮೇ 29ರಂದು ನಡೆದ ಸಮಾರಂಭವೊಂದರಲ್ಲಿ ಪ್ಯಾಲೆಸ್ತೀನ್ ಪರ ಭಾಷಣ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನಾಯಕಿ ಮೇಘಾ ವೇಮುರಿಯವರನ್ನು ಈ ಬಾರಿಯ ಪದವಿ ಪ್ರದಾನ ಸಮಾರಂಭಕ್ಕೆ ಹಾಜರಾಗದಂತೆ ಅಮೆರಿಕದ ಎಂಐಟಿ ವಿವಿ ನಿಷೇಧ ವಿಧಿಸಿದೆ. ಮೇಘಾ 2025ನೇ ಸಾಲಿನ ವಿದ್ಯಾರ್ಥಿ ನಾಯಕಿ.
ಸಮಾರಂಭದ ಮಾರ್ಷಲ್ ಕಾರ್ಯವನ್ನು ನಿರ್ವಹಿಸಬೇಕಿದ್ದ ಮೇಘಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಕಾಲೇಜು ಆವರಣದೊಳಗೆ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿದೆ ಎಂದು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪ್ರಕಟಣೆ ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ
ಉಪಕುಲಪತಿ ನೋಬಲ್ ಬೋಸ್ಟನ್ ಗ್ಲೋಬ್ ಅವರು ಮೇಘಾಗೆ ಇ-ಮೇಲ್ ಮಾಹಿತಿ ನೀಡಿ, “ನೀವು ಉದ್ದೇಶಪೂರ್ವಕವಾಗಿ ಮತ್ತು ಪದೇ ಪದೇ ಪದವಿ ಪ್ರದಾನ ಸಮಾರಂಭದ ಸಂಯೋಜಕರ ದಿಕ್ಕು ತಪ್ಪಿಸಿದ್ದೀರಿ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಾವು ಒಪ್ಪಿಕೊಳ್ಳುತ್ತೇವೆಯಾದರೂ, ವೇದಿಕೆಯಿಂದ ಪ್ರತಿಭಟನೆ ವ್ಯಕ್ತಪಡಿಸುವ ನಿಮ್ಮ ನಿರ್ಧಾರ ಸಂಸ್ಥೆಯ ಮಹತ್ವದ ಸಮಾರಂಭವನ್ನು ಹಾಳು ಮಾಡಲಿದೆ. ಇದು ಕ್ಯಾಂಪಸ್ ಅಭಿವ್ಯಕ್ತಿಗಾಗಿ ಇರುವ ಎಂಐಟಿಯ ಟೈಮ್, ಪ್ಲೇಸ್ ಅಂಡ್ ಮ್ಯಾನರ್ ನಿಯಮಾವಳಿಯ ಉಲ್ಲಂಘನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ಯಾಲೆಸ್ತೀನ್ ಪರ ಬೆಂಬಲವನ್ನು ಸಾಂಕೇತಿಸುವ ಕೆಂಪು ಶಿರವಸ್ತ್ರ ಧರಿಸಿದ್ದ ವೆಮುರಿ, ಗಾಝಾದಲ್ಲಿ ಇಸ್ರೇಲ್ ಕ್ರಮಗಳನ್ನು ಮತ್ತು ಆ ದೇಶದ ಜತೆಗೆ ಎಂಐಟಿ ಹೊಂದಿರುವ ಸಂಶೋಧನಾ ಒಪ್ಪಂದವನ್ನು ಕಟುವಾಗಿ ಟೀಕಿಸಿದ್ದರು. ತಮ್ಮ ಜತೆ ಪದವಿ ಪಡೆಯುವ ಪದವೀಧರರು ಈ ನಿಲುವನ್ನು ತಾಳುವಂತೆ ಕರೆ ನೀಡಿದ್ದರು.
Ugiri mokkakke. Illi hindugalanna saysidru baybidalla ivru.. yaavdo Palestine para😤😤😤 ellinda payment sikthide ivrge mathadakke