ಡ್ರೋನ್ ದಾಳಿ ನಡೆಸಿ ರಷ್ಯಾದ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿದೆ. ಇದು ರಷ್ಯಾದ ವಾಯುಯಾನದ ಮೇಲೆ ಇದುವರೆಗೆ ನಡೆದ ಅತೀ ದೊಡ್ಡ ದಾಳಿಯಾಗಿದೆ ಎಂದು ವರದಿಯಾಗಿದೆ.
ಉಕ್ರೇನ್‌ನಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಸೈಬೀರಿಯಾದ ಇರ್ಕುಟ್ಸ್ಕ್ ಒಬ್ಲಾಸ್ಟ್‌ನಲ್ಲಿರುವ ಬೆಲಾಯಾ ವಾಯುನೆಲೆಯಲ್ಲಿ ಡ್ರೋನ್ ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಷ್ಯಾ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಓದಿದ್ದೀರಾ? ರಷ್ಯಾ-ಉಕ್ರೇನ್ ಯುದ್ಧಕ್ಕೆ 3 ವರ್ಷ: ಉಕ್ರೇನ್ ಮೇಲೆ ರಷ್ಯಾ 267 ಡ್ರೋನ್‌ಗಳಿಂದ ದಾಳಿ
ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚಕರು ಎರಡನೇ ಸುತ್ತಿನ ಶಾಂತಿ ಮಾತುಕತೆಗಾಗಿ ಟರ್ಕಿಯ ಇಸ್ತಾನ್‌ಬುಲ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ರಷ್ಯಾದ ವಾಯುವ್ಯ ಭಾಗದಲ್ಲಿರುವ ಮುರ್ಮನ್ಸ್ಕ್ ನಗರದ ಬಳಿಯ ಒಲೆನ್ಯಾ ವಾಯುನೆಲೆಯಲ್ಲಿ ವಿಮಾನಗಳ ಮೇಲೆಯೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
#BREAKING
— Nabila Jamal (@nabilajamal_) June 1, 2025
Ukraine hits 2,000 km deep inside Russia in its boldest drone strike yet
Over 40 aircraft reportedly destroyed, including Tu-95 bombers and an A-50 radar jet. Drones were hidden in trucks and launched from inside Russia
If true, its major blow to Russia's airpower… pic.twitter.com/G7zdyA2Mj8
Tu-95 ಮತ್ತು Tu-22M3 ವಿಮಾನಗಳು, A-50 ವಿಮಾನಗಳು ಸೇರಿದಂತೆ ಹಲವು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿವೆ. ರಿಯಾಜಾನ್ ಮತ್ತು ಇವನೊವೊ ಪ್ರದೇಶಗಳಲ್ಲಿನ ಡಯಾಗಿಲೆವೊ ಮತ್ತು ಇವನೊವೊ ವಾಯುನೆಲೆಗಳಲ್ಲಿ ರಷ್ಯಾದ ಯುದ್ಧ ವಿಮಾನಗಳು ಸಹ ಸುಟ್ಟುಹೋಗಿವೆ ಎಂದೂ ವರದಿಯಾಗಿದೆ.
