ರಷ್ಯಾ ತೈಲ ಖರೀದಿಸಿದರೆ ಗಂಭೀರ ಆರ್ಥಿಕ ನಿರ್ಬಂಧ: ಭಾರತಕ್ಕೆ ನ್ಯಾಟೊ ಮುಖ್ಯಸ್ಥರ ಎಚ್ಚರಿಕೆ

Date:

Advertisements

ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದರೆ ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳಿಗೆ ನ್ಯಾಟೊ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಸೆನೆಟರ್‌ಗಳ ಜೊತೆ ಮಾತುಕತೆ ಬಳಿಕ ವರದಿಗಾರರ ಜೊತೆ ಮಾತನಾಡಿದ ಅವರು, ಶಾಂತಿ ಮಾತುಕತೆಗೆ ಮುಂದಾಗುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಒತ್ತಾಯಿಸುವಂತೆ ಭಾರತ, ಚೀನಾ ಮತ್ತು ಬ್ರೆಜಿಲ್‌ಗೆ ಸೂಚಿಸಿದ್ದಾರೆ.

‘ಚೀನಾ ಅಧ್ಯಕ್ಷರೇ, ಭಾರತದ ಪ್ರಧಾನಿಗಳೇ ಮತ್ತು ಬ್ರೆಜಿಲ್‌ನ ಅಧ್ಯಕ್ಷರೇ.. ನೀವು ರಷ್ಯಾ ಜೊತೆ ತೈಲ ಮತ್ತು ಅನಿಲ ಖರೀದಿ ವ್ಯವಹಾರ ಮುಂದುವರಿಸಿದರೆ. ರಷ್ಯಾ, ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಸಿದ್ಧವಾಗದೇ ಇದ್ದರೆ ನಾನು ಶೇ100ರಷ್ಟು ದ್ವಿತೀಯ ನಿರ್ಬಂಧ ಹೇರುತ್ತೇನೆ. ಈ ಮೂರೂ ದೇಶಗಳಿಗೆ ನಾನು ಹೇಳುವುದೇನೆಂದರೆ, ಈ ದಿನ ರಾತ್ರಿ ನಿಮ್ಮ ದೇಶಗಳ ಮೇಲೆ ದೊಡ್ಡ ನಿರ್ಬಂಧ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಪುಟಿನ್‌ಗೆ ಕರೆ ಮಾಡಿ ಶಾಂತಿ ಮಾತುಕತೆಗೆ ಸಿದ್ಧವಾಗಲು ಸೂಚಿಸಿ ಎಂದು ಮೂರೂ ದೇಶಗಳಿಗೆ ನ್ಯಾಟೊ ಮುಖ್ಯಸ್ಥರು ಒತ್ತಾಯಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್‌ಗೆ ಹೊಸ ಮಿಲಿಟರಿ ಬೆಂಬಲ ಹಾಗೂ ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ ಒಂದು ದಿನದ ನಂತರ ನ್ಯಾಟೊ ನಾಯಕರ ಹೇಳಿಕೆ ಹೊರಬಿದ್ದಿದೆ.

50 ದಿನಗಳಲ್ಲಿ ರಷ್ಯಾ, ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ರಫ್ತುಗಳ ಮೇಲೆ ಶೇ 100 ರಷ್ಟು ಸುಂಕ ಮತ್ತು ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಈ ಹಿಂದೆ ಘೋಷಿಸಿದ್ದರು.

’50 ದಿನಗಳ ಕೊನೆಯಲ್ಲಿ ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ, ಅದು ತುಂಬಾ ಕೆಟ್ಟದಾಗಿರುತ್ತದೆ. ಸುಂಕಗಳು ಮುಂದುವರಿಯಲಿವೆ ಮತ್ತು ಇತರ ನಿರ್ಬಂಧಗಳು ಮುಂದುವರಿಯಲಿವೆ’ ಎಂದು ಟ್ರಂಪ್ ಹೇಳಿದ್ದರು.

ನ್ಯಾಟೊ ಒಕ್ಕೂಟ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) 31 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ, ಮುಖ್ಯವಾಗಿ ಉತ್ತರ ಅಮೆರಿಕ ಮತ್ತು ಯುರೋಪ್‌ ಖಂಡದ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಸದಸ್ಯ ರಾಷ್ಟ್ರಗಳ ಸಾಮೂಹಿಕ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಒಕ್ಕೂಟ 1949 ರಲ್ಲಿ ಸ್ಥಾಪಿತವಾಯಿತು. ಪ್ರಮುಖ ಸದಸ್ಯ ರಾಷ್ಟ್ರಗಳೆಂದರೆ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಮತ್ತು ಕೆನಡಾ ಮುಂತಾದವು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X