ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಎಂದು ಸುದ್ದಿಯಾಗಿದ್ದ ಈ ಯುವತಿ ಈಗ ಮತ್ತೊಮ್ಮೆ ಜಾಗತಿಕಮಟ್ಟದಲ್ಲಿ ಸದ್ದು ಮಾಡಿದ್ದಾರೆ. ನ್ಯೂಜಿಲೆಂಡ್ ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯೊಂದನ್ನು ವಿರೋಧಿಸಿ, ಅದರ ಪ್ರತಿಯನ್ನು ಹರಿದು ನೃತ್ಯ ಮಾಡುವ ಮೂಲಕ ಸಂಸದೆಯೊಬ್ಬರು ಪ್ರತಿಭಟನೆ ನಡೆಸಿದ್ದಾರೆ. ನ್ಯೂಜಿಲೆಂಡ್ನ ‘ಮೌರಿ’ ಸಂಪ್ರದಾಯದ ‘ಹಾಕಾ’ ನೃತ್ಯ ಮಾಡಿ, ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
22 ವರ್ಷದ ಸಂಸದೆ ‘ಹಾನಾ ರಾಫಿಟಿ ಮೈಪಿ ಕ್ಲಾರ್ಕ್’ ಅವರು ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಎಂದು ಗುರುತಿಸಿಕೊಂಡಿದ್ದಾರೆ. ಅವರು ಒಪ್ಪಂದವೊಂದಕ್ಕೆ ಸಂಬಂಧಿಸಿದ ಮಸೂದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮಸೂದೆಯ ಪ್ರತಿಯನ್ನು ಹರಿದುಹಾಕಿದ್ದಾರೆ. ಬಳಿಕ, ‘ಹಾಕಾ’ ನೃತ್ಯ ಮಾಡಿದ್ದಾರೆ.
ಮಸೂದೆಯ ವಿರುದ್ಧ ಸಂಸದೆ ಹಾನಾ ಅವರು ಆಕ್ರೋಶ ವ್ಯಕ್ತಪಡಿಸಿದಾಗ, ಇತರ ಕೆಲ ಸಂಸದರೂ ಅವರಿಗೆ ಧ್ವನಿಗೂಡಿಸಿದ್ದಾರೆ. ಅಲ್ಲದೆ, ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾರ್ವಜನಿಕರೂ ಕೂಡ ಎದ್ದು ನಿಂತು ‘ಹಾಕಾ’ ನೃತ್ಯದ ಹಾಡನ್ನು ಹಾಡಿದ್ದಾರೆ. ಈ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
What the fu** is this pic.twitter.com/cfD51gMxqS
— Kavish Aziz (@azizkavish) November 14, 2024
ಘಟನೆಯ ಬಳಿಕ, ಸಂಸದೆ ಹಾನಾ ಅವರನ್ನು ಸಂಸತ್ ಸಭಾಪತಿ ಅಮಾನತು ಮಾಡಿದ್ದಾರೆ. ಆದಾಗ್ಯೂ, ಮಸೂದೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಸಂಸತ್ನಲ್ಲಿ ನಿರ್ಧರಿಸಲಾಗಿದೆ.
ಮಂಡಿಸಲಾಗಿರುವ ನೂತನ ಮಸೂದೆಯು ನ್ಯೂಜಿಲೆಂಡ್ ಸಮಾಜವನ್ನು ಒಡೆದು ಇಬ್ಭಾಗ ಮಾಡುತ್ತದೆ. ಮೌರಿ ಸಮುದಾಯದ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸಲಾಗಿದೆ.