ನೈಜೀರಿಯಾ | ಇಂಧನ ಟ್ಯಾಂಕರ್ ಸ್ಫೋಟಗೊಂಡು 150ಕ್ಕೂ ಹೆಚ್ಚು ಮಂದಿ ಸಾವು

Date:

Advertisements

ಇಂಧನ ಟ್ಯಾಂಕರ್‌ ಸ್ಪೋಟಗೊಂಡು 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದುರ್ಘಟನೆ ನೈಜೀರಿಯಾದ ಅಬುಜಾದಲ್ಲಿ ನಡೆದಿದೆ. ಬುಧವಾರ ಸಂಜೆ ಘಟನೆ ನಡೆದಿದ್ದು, ಸ್ಥಳದಲ್ಲಿಯೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಸಾವಿನ ಸಂಖ್ಯೆ 157ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ತುಂಬಿದ ಟ್ಯಾಂಕರ್‌ ನೈಜೀರಿಯಾದ ಕ್ಯಾನೊದಿಂದ ಉತ್ತರದ ಯೋಬೆಗೆ ತೆರಳುತ್ತಿತ್ತು. ಈ ವೇಳೆ, ಅಬುಜಾ ಸಮೀಪದ ಮಜಿಯಾ ಪಟ್ಟಣದ ಬಳಿ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ, ಜನರು ಇಂಧನವನ್ನು ತುಂಬಿಕೊಳ್ಳಲು ಟ್ಯಾಂಕರ್‌ ಬಳಿ ದೌಡಾಯಿಸಿದ್ದಾರೆ. ಆ ಸಂದರ್ಭದಲ್ಲಿ ಟ್ಯಾಂಕರ್ ಸ್ಪೋಟಗೊಂಡಿದೆ” ಎಂದು ಪೊಲೀಸ್ ವಕ್ತಾರ ಲಾವನ್ ಶಿಸು ಆಡಮ್ ಹೇಳಿದ್ದಾರೆ.

ದುರ್ಘಟನೆಯ ಸ್ಥಳದಲ್ಲಿಯೇ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ಎಲ್ಲರೂ ಇಂಧನ ತುಂಬಿಕೊಳ್ಳಲು ಹೋಗಿರಲಿಲ್ಲ. ಟ್ಯಾಂಕರ್ ಪಲ್ಟಿಯಾದ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಅವರು ಹೇಳಿದ್ದಾರೆ.

Advertisements

“ಇದೊಂದು ದುಃಖಕರ ಸಂಗತಿ. ಸ್ಥಳದಲ್ಲಿ ಏನಾಗುತ್ತಿದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಹೆಚ್ಚು ಬಡತನ, ಸೌಕರ್ಯಗಳ ಕೊರತೆ, ಇಂಧನ ಬೆಲೆ ಏರಿಕೆಯಿಂದ ಜನರು ಹತಾಶರಾಗಿದ್ದರು. ಹೀಗಾಗಿ, ಅವರು ಇಂಧನವನ್ನು ಸಂಗ್ರಹಿಸಿಲು ಹೋಗಿದ್ದು, ದುರಂತ ಅಂತ್ಯ ಕಂಡಿದ್ದಾರೆ” ಎಂದು ಅಲ್‌ಝಜೀರ ವರದಿ ಮಾಡಿದೆ.

ದುರ್ಘಟನೆಯಲ್ಲಿ ಬಜಾವಾದ ಆದಮು ಅಬ್ದುಲ್ಲಾಹಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ದುರ್ಘಟನೆ ನಡೆದಾದ ನಾನು ಅಲ್ಲಿಯೇ ಇದ್ದೆ. ನಾನು ಇಂಧನ ತೆಗೆದುಕೊಂಡು ಮನೆಗೆ ಹೋದೆ. ಮತ್ತೆ ಟ್ಯಾಂಕರ್ ಬಳಿಗೆ ಹೋಗಲು ಸಿದ್ಧನಾಗುವ ವೇಳೆಗೆ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಟ್ಯಾಂಕರ್ ಸ್ಪೋಟಗೊಂಡಿತ್ತು” ಎಂದು ಹೇಳಿದ್ದಾರೆ.

ನೈಜೀರಿಯಾದಲ್ಲಿ ಸರಕುಗಳನ್ನು ಸಾಗಿಲು ರೈಲ್ವೆ ವ್ಯವಸ್ಥೆಯು ಉತ್ತಮವಾಗಿಲ್ಲದ ಕಾರಣ, ಹೆಚ್ಚಿನ ಸರಕುಗಳನ್ನು ರಸ್ತೆ ಮಾರ್ಗದಲ್ಲಿಯೇ ಸಾಗಿಸಲಾಗುತ್ತದೆ. ಪರಿಣಾಮ, ಹಲವಾರು ಅಪಘಾತಗಳು ಸಂಭವಿಸುವುದು ಆ ದೇಶದಲ್ಲಿ ಸಾಮಾನ್ಯವಾಗಿಹೋಗಿದೆ.

ಈ ವರದಿ ಓದಿದ್ದೀರಾ?: ಸರ್ಕಾರವನ್ನೇ ಖಾಸಗೀಕರಣಗೊಳಿಸುತ್ತಿರುವ ‘ಅರ್ಬನ್ ನಾಜಿ’ಗಳು!

ನೈಜೀರಿಯಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಪ್ರಕಾರ, 2020ರಲ್ಲಿ ಬರೋಬ್ಬರಿ 1,531 ಪೆಟ್ರೋಲ್ ಟ್ಯಾಂಕರ್ ಅಪಘಾತಗಳು ನಡೆದಿವೆ. ಅಪಘಾತಗಳಲ್ಲಿ 535 ಸಾವುಗಳು ಮತ್ತು 1,142 ಮಂದಿಗೆ ಗಾಯಗಳಾಗಿವೆ.

ಕಳೆದ ತಿಂಗಳಷ್ಟೇ, ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಇಂಧನ ಟ್ಯಾಂಕರ್ ಡಿಕ್ಕಿ ಹೊಡೆದು, ಟ್ಯಾಂಕರ್ ಸ್ಫೋಟಗೊಂಡಿತ್ತು. ಪರಿಣಾಮ, ಕನಿಷ್ಠ 48 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 50 ಪ್ರಾಣಿಗಳು ಜೀವಂತವಾಗಿ ಸುಟ್ಟುಹೋಗಿದ್ದವು.

“ನೈಜೀರಿಯಾದಲ್ಲಿ ರಸ್ತೆ ಮೂಲಸೌಕರ್ಯವು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಹೆದ್ದಾರಿಯಲ್ಲಿಯೂ ರಸ್ತೆಗುಂಡಿಗಳು ತಾಂಡವಾಡುತ್ತಿವೆ. ಅವುಗಳನ್ನು ತಪ್ಪಿಸಲು ಚಾಲಕರು ಪ್ರಯತ್ನಿಸುವ ಕಸರತ್ತಿನಲ್ಲಿ ವಾಹನಗಳು ನಿಯಂತ್ರಣ ಕಳೆದುಕೊಂಡು, ಅಪಘಾತಗಳು ಸಂಭವಿಸುತ್ತಿವೆ” ಎಂದು ಅಲ್‌ಝಜೀರಾ ವರದಿಯಾರ ಇದ್ರಿಸ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X