ನಾರ್ವೇ ಲೇಖಕ ಜಾನ್ ಫೋಸ್ ಅವರಿಗೆ 2023ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಘೋಷಿಸಿರುವ ಸ್ವೀಡಿಷ್ ಅಕಾಡೆಮಿಯು ಜಾನ್ ಫೋಸ್ ಅವರ ನಾಟಕಗಳು ಹಾಗೂ ಗದ್ಯಗಳು ಧ್ವನಿ ಇಲ್ಲದವರ ಧ್ವನಿಯಾಗಿವೆ ಎಂದು ತಿಳಿಸಿದೆ. ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಔಪಚಾರಿಕ ಸಮಾರಂಭದಲ್ಲಿ ಫೋಸ್ ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಜಾನ್ ಫೋಸ್ ಅವರು ನಾಟಕ, ಕಾದಂಬರಿ, ಕವನ ಸಂಗ್ರಹಗಳು ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ನೂರಾರು ಕೃತಿಗಳು ವಿಶ್ವದ ಹಲವು ಭಾಷೆಗೆ ಅನುವಾದಗೊಂಡಿವೆ. ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಪ್ರದರ್ಶನಗೊಂಡ ನಾಟಕಕಾರರಲ್ಲಿ ಜಾನ್ ಫೋಸ್ ಒಬ್ಬರಾಗಿದ್ದರೂ, ಅವರು ತಮ್ಮ ಗದ್ಯಗಳಲ್ಲಿ ಹೆಚ್ಚು ಗುರುತಿಸಲ್ಪಟ್ಟಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
BREAKING NEWS
The 2023 #NobelPrize in Literature is awarded to the Norwegian author Jon Fosse “for his innovative plays and prose which give voice to the unsayable.” pic.twitter.com/dhJgGUawMl— The Nobel Prize (@NobelPrize) October 5, 2023
2022 ರ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರಿಗೆ ನೀಡಲಾಗಿತ್ತು.
2023ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆ್ಯನಿ ಎಲ್ ಹಲ್ಲಿಯರ್ ಪಡೆದಿದ್ದರು. ಹಾಗೇ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ‘ಕೊರೊನಾ’ ಲಸಿಕೆ ಕಂಡುಹಿಡಿಯಲು ಸಹಾಯ ಮಾಡಿದ್ದ ಕ್ಯಾಟಲಿನ್ ಕಾರಿಕೋ ಹಾಗೂ ಡ್ರೂ ವೈಸ್‌ಮನ್ ಅವರಿಗೆ ಸಿಕ್ಕಿತ್ತು.
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೌಂಗಿ ಜಿ.ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ.ಎಕಿಮೊವ್ ಅವರಿಗೆ ನೀಡಲಾಗಿತ್ತು. ಇದೀಗ ಸಾಹಿತ್ಯ ವಿಭಾಗದ ಪ್ರಶಸ್ತಿ ಕೂಡ ಪ್ರಕಟವಾಗಿದೆ.