2023ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯು ಕೋವಿಡ್-19 ವೈರಸ್ ವಿರುದ್ಧ ಪರಿಣಾಮಕಾರಿ ಎಂಆರ್‌ಎನ್‌ಎ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುವ ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳ ಬಗ್ಗೆ ಸಂಶೋಧನೆ ಮಾಡಿದ ಇಬ್ಬರು ವಿಜ್ಞಾನಿಗಳಿಗೆ ಲಭಿಸಿದೆ.
ಹಂಗೇರಿಯ ವಿಜ್ಞಾನಿ ಕ್ಯಾಟಲಿನ್ ಕರಿಕೊ ಮತ್ತು ಅಮೆರಿಕದ ವಿಜ್ಞಾನಿ ಡ್ರೂ ವೈಸ್‌ಮನ್ ಅವರಿಗೆ ಜಂಟಿಯಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈಜ್ಞಾನಿಕ ಪ್ರಪಂಚದಲ್ಲಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಸಮಿತಿ ಆಯ್ಕೆ ಮಾಡಿದೆ. ಪ್ರಶಸ್ತಿ ಮೊತ್ತವು ಸುಮಾರು 1 ಮಿಲಿಯನ್ ಡಾಲರ್ ಒಳಗೊಂಡಿರುತ್ತದೆ.
ಹಂಗೇರಿಯ ವಿಜ್ಞಾನಿ ಕ್ಯಾಟಲಿನ್ ಕರಿಕೊ ಅವರು ಸ್ಜೆಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಅಮೆರಿಕ ವಿಜ್ಞಾನಿ ಡ್ರೂ ವೈಸ್‌ಮನ್ ಅವರು ಪೆರೆಲ್‌ಮನ್ ಲಸಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ.
ಇಬ್ಬರು ವಿಜ್ಞಾನಿಗಳು ಕೋವಿಡ್ ಸಮಯದಲ್ಲಿ ಎಂಆರ್‌ಎನ್‌ಎ ಕೋವಿಡ್ -19 ಲಸಿಕೆಯು ಹೇಗೆ ಪ್ರತಿರಕ್ಷಣಾ ವ್ಯವಸ್ಥೆ ಉಂಟು ಮಾಡುತ್ತದೆ ಎಂಬುದನ್ನು ಸಂಶೋಧನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಹಿರಂಗಗೊಂಡ ಬಿಹಾರದ ಜಾತಿ ಗಣತಿ ವರದಿ: ಯಾವ್ಯಾವ ಸಮುದಾಯ ಎಷ್ಟೆಷ್ಟು ಗೊತ್ತೆ?
ಉಳಿದ ನೊಬೆಲ್ ಪ್ರಶಸ್ತಿಗಳನ್ನು ಭೌತಶಾಸ್ತ್ರ (ಅಕ್ಟೋಬರ್ 3), ರಸಾಯನಶಾಸ್ತ್ರ (ಅಕ್ಟೋಬಲ್ 4), ಸಾಹಿತ್ಯ (ಅಕ್ಟೋಬರ್ 5), ಮತ್ತು ಶಾಂತಿ (ಅಕ್ಟೋಬರ್ 6) ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 9 ರಂದು ಘೋಷಿಸಲಾಗುವುದು.
ಸ್ವೀಡಿಷ್ ಡೈನಮೈಟ್ ಸಂಶೋಧಕ ಮತ್ತು ಶ್ರೀಮಂತ ಉದ್ಯಮಿ ಆಲ್ಫ್ರೆಡ್ ಅವರ ಹೆಸರಿನಲ್ಲಿ 1901 ರಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 7 ವಿಭಾಗಗಳಿಗೆ ನೀಡಲಾಗುತ್ತದೆ.