ಅಕ್ಟೋಬರ್ ಏಳರಂದು ಹಮಾಸ್ ನಡೆಸಿದ ದಾಳಿಯಲ್ಲಿ ಸತ್ತವರ ಸಂಖ್ಯೆ 1200 ಎಂದು ಇಸ್ರೇಲ್ ಪರಿಷ್ಕರಿಸಿದೆ. ಈ ಹಿಂದೆ ಇಸ್ರೇಲ್ ಅಂದು ಸಾವಿಗೀಡಾದವರ ಸಂಖ್ಯೆ 1400 ಎಂದಿತ್ತು.
‘ಅಕ್ಟೋಬರ್ 7 ರ ಹತ್ಯಾಕಾಂಡಕ್ಕೆ ಬಲಿಯಾದವರ ಸಂಖ್ಯೆ ಸುಮಾರು 1200 0 ಆಗಿದೆ’ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಲಿಯರ್ ಹಯಾತ್ ಶುಕ್ರವಾರ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂಕಿಅಂಶವನ್ನು ಗುರುವಾರ ನವೀಕರಿಸಲಾಗಿದೆ ಎಂದು ಅವರು ಹೇಳಿದರು.
ಹಯಾತ್ ಪ್ರಕಾರ, ಈ ಹಿಂದೆ ಸೇರಿಸಲಾದ ಅಪರಿಚಿತ ಶವಗಳು ಪ್ಯಾಲೇಸ್ತೀನಿಯನ್ ಹೋರಾಟಗಾರರಿಗೆ ಸೇರಿರುವ ಸಾಧ್ಯತೆಯಿರುವುದರಿಂದ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ ಎಂದು AFP ಸುದ್ದಿ ಸಂಸ್ಥೆ ತಿಳಿಸಿದೆ.
‘ಗುರುತಿಸಲಾಗದ ಬಹಳಷ್ಟು ಶವಗಳು ಇದ್ದವು ಮತ್ತು ಅವು ಭಯೋತ್ಪಾದಕರಿಗೆ ಸೇರಿವೆ ಎಂದು ನಾವು ಭಾವಿಸುತ್ತೇವೆ, ಇಸ್ರೇಲಿ ಸಾವುನೋವುಗಳಲ್ಲ’ ಎಂದು ಹಯಾತ್ ಹೇಳಿದ್ದಾರೆ.
ದಾಳಿಯ ಸಮಯದಲ್ಲಿ ಪ್ಯಾಲೇಸ್ತೀನಿಯನ್ ಗುಂಪುಗಳು ಇಸ್ರೇಲಿ ಸೈನಿಕರು ಮತ್ತು ನಾಗರಿಕರು, ಹಲವಾರು ವಿದೇಶಿ ಪ್ರಜೆಗಳನ್ನು ಒಳಗೊಂಡಂತೆ 240 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ್ದವು ಎಂದು ಇಸ್ರೇಲಿ ಅಧಿಕಾರಿಗಳು ಹೇಳುತ್ತಾರೆ.
ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಯುದ್ಧ ಸಾರಿದೆ. ಅಲ್ಲಿನ 23 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಆಹಾರ, ವಿದ್ಯುತ್ ಮತ್ತು ಇಂಧನದ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಮತ್ತು ಬಿಟ್ಟೂಬಿಡದೆ ಬಾಂಬ್ ದಾಳಿ ನಡೆಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ: ವಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಡಾ ಅಶ್ವತ್ಥನಾರಾಯಣ
ಇಸ್ರೇಲಿನ ವೈಮಾನಿಕ ದಾಳಿಗಳಿಂದ ಗಾಜಾ ಸಂಪೂರ್ಣವಾಗಿ ನೆಲಸಮಗೊಂಡಿದೆ. ಗಾಜಾದ 70 ಪ್ರತಿಶತಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು 11.078 ಜನರನ್ನು ಕೊಲ್ಲಲಾಗಿದೆ ಎಂದು ಪ್ಯಾಲೆಸ್ತೀನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.