ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ 14 ಯೋಧರು ಸೇರಿದಂತೆ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕ್ವೆಟ್ಟಾದಿಂದ ಪೇಶಾವರಕ್ಕೆ ರೈಲು ಪ್ರಯಾಣಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಜಾಫರ್ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್‌ಗೆ ತಲುಪಲು ಕೆಲವೇ ಕ್ಷಣಗಳು ಇರುವಾಗ ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೆಯೊಂದರಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ರೈಲ್ವೇ ನಿಲ್ದಾಣದಲ್ಲಿ ನೆಲೆಸಿದ್ದ ಯೋಧರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ದಾಳಿ ನಡೆಸಿದೆ ಹೇಳಿದೆ.
ಇದನ್ನು ಓದಿದ್ದೀರಾ? ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗದು: ಫಾರೂಕ್ ಅಬ್ದುಲ್ಲಾ
ಸರ್ಕಾರಿ ವಕ್ತಾರರಾದ ಶಾಹಿದ್ ರಿಂಡ್ ಕೂಡಾ ಈ ಬಾಂಬ್ ಸ್ಫೋಟವು ಆತ್ಮಾಹುತಿ ಬಾಂಬರ್ ದಾಳಿಯಂತೆ ಕಾಣುತ್ತದೆ ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ಇನ್‌ಫೆಂಟ್ರಿ ಶಾಲೆಯ ಸೇನಾ ಸಿಬ್ಬಂದಿಗಳೇ ಗುರಿಯಾಗಿದ್ದರು ಎಂದೂ ತಿಳಿಸಿದ್ದಾರೆ.
(1/2) ⬇️ A bomb explosion at Quetta railway station in Pakistan’s Balochistan province has killed at least 25 people and injured around 50.
— British Pakistani Index (@PakistaniIndex) November 9, 2024
The Baloch Liberation Army has claimed responsibility.#QuettaBlast #Balochistan #Pakistan pic.twitter.com/3H5hzVZR4K
“ಗಾಯಗೊಂಡವರಲ್ಲಿ ಅನೇಕರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈವರೆಗೆ ಗಾಯಗೊಂಡ 44 ಜನರನ್ನು ಸಿವಿಲ್ ಆಸ್ಪತ್ರೆಗೆ ಕರೆತರಲಾಗಿದೆ” ಎಂದು ಆಸ್ಪತ್ರೆಯ ವಕ್ತಾರ ಡಾ. ವಾಸಿಂ ಬೇಗ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
