ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣಾ ದಿನದಂದೇ ರಾಷ್ಟ್ರವ್ಯಾಪಿ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ಸರ್ಕಾರದ ಈ ಕ್ರಮವು ಮತ್ತಷ್ಟು ಆತಂಕಕ್ಕೆ ದೂಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ.
ಚುನಾವಣೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಪ್ರಕಟಿಸಿರುವ ಆಂತರಿಕ ಸಚಿವಾಲಯವು, “ಇತ್ತೀಚಿಗೆ ದೇಶದಲ್ಲಿ ನಡೆದಿರುವ ಸಶಸ್ತ್ರ ದಾಳಿಗಳಲ್ಲಿ ಸಾಕಷ್ಟು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು ಮತ್ತು ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಭದ್ರತಾ ಕ್ರಮಗಳು ಅತ್ಯಗತ್ಯ. ಹಾಗಾಗಿ ಮೊಬೈಲ್ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ” ಎಂದು ಹೇಳಿದೆ.
ಚುನಾವಣೆಗೂ ಮುನ್ನಾದಿನವಾದ ಬುಧವಾರದಂದು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಎರಡು ಬಾಂಬ್ ಸ್ಫೋಟ ನಡೆದಿತ್ತು. ಈ ಘಟನೆಯಲ್ಲಿ 28 ಜನರು ಸಾವನ್ನಪ್ಪಿದ್ದರು. ಇಂದು ಕೂಡ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿಯೋರ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹಿಂಸಾಚಾರದ ಉಲ್ಬಣದ ಮಧ್ಯೆ ಭದ್ರತೆಯನ್ನು ಹೆಚ್ಚಿಸಲು ಪಾಕಿಸ್ತಾನವು ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗಿನ ಕೆಲವು ಭೂ ಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಜೈಲಿನಿಂದಲೇ ಮತ ಚಲಾಯಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇತರ ಪ್ರಮುಖ ಬಂಧಿತ ರಾಜಕೀಯ ವ್ಯಕ್ತಿಗಳು ಅಂಚೆ ಮತಪತ್ರದ ಮೂಲಕ ಜೈಲಿನಿಂದಲೇ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಬೆಂಬಲಿಗರಿಗೆ ಮತದಾನದ ನಂತರ ಫಲಿತಾಂಶಗಳನ್ನು ಪ್ರಕಟಿಸುವವರೆಗೆ ಮತಗಟ್ಟೆಗಳ ಹೊರಗೆ ಕಾಯುವಂತೆ ಕರೆ ನೀಡಿದ ನಂತರ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
@ECP_Pakistan
عسکری 4 کراچی میں دوپہر کے دو بجنے کو ہیں یہاں رجسٹرڈ ووٹر کی تعداد تقریبا پندرہ ہزار ہے لوگوں کی بھیڑ صبح سے موجود ہے لیکن تا حال ووٹنگ شروع نہ ہوسکی
کوئی ہے جوابدہ؟ pic.twitter.com/qsOdtUuMka— Alamgir Khan (@AKFixit) February 8, 2024
ಗುರುವಾರ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಆದರೆ, ಕೆಲವು ಕಡೆಗಳಲ್ಲಿ ಮಧ್ಯಾಹ್ನ ಎರಡು ಗಂಟೆಯಾದರೂ ಮತದಾನ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂಬ ದೂರುಗಳು ಕೂಡ ಕೇಳಿಬಂದಿದೆ. ಮತಪತ್ರಗಳನ್ನು ಹಾಕುವ ಮತಪೆಟ್ಟಿಗೆಗಳು ಮತದಾನ ಕೇಂದ್ರಕ್ಕೆ ಬಂದಿದ್ದರೂ ಕೂಡ ಸಿಬ್ಬಂದಿಗಳೇ ಬಂದಿಲ್ಲ ಎಂದು ಆರೋಪಿಸಿ ಕೆಲ ನಾಗರಿಕರು ತಮ್ಮ ಕಚೇರಿಯ ಇಂಟರ್‌ನೆಟ್ ಸೇವೆ ಬಳಸಿ ಟ್ವೀಟ್ ಮಾಡುತ್ತಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದೆ.
ووٹ ایک امانت اور قومی فریضہ ہے۔ میں نے اپنا فرض ادا کردیا- آپ بھی گھر وں سے نکلیں ، ووٹ دیں اور ملک کی تقدیر بدلنے میں حصہ لیں۔ pic.twitter.com/L5sS8myWNG
— BilawalBhuttoZardari (@BBhuttoZardari) February 8, 2024
“ಇಂಟರ್‌ನೆಟ್ ಸೇವೆಗಳನ್ನು ಅಮಾನತು ಮಾಡಿರುವುದರಿಂದ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ಸಮಸ್ಯೆಯಾಗಿದೆ. ಅಭ್ಯರ್ಥಿಗಳ ಚುನಾವಣಾ ಚಿಹ್ನೆ, ಹೆಸರು ನೋಡಲು ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳನ್ನು ಬಳಸುತ್ತಿದ್ದರು. ಈಗ ಅವರು ಗೊಂದಲಕ್ಕೀಡಾಗಿದ್ದಾರೆ” ಎಂದು ಡಾಟಾ ಸಂಸ್ಥೆಯೊಂದು ಮಾಹಿತಿ ನೀಡಿದೆ.
Pakistanis, the illegitimate, fascist regime has blocked cell phone services across Pakistan on polling day.
You are all requested to counter this cowardly act by removing passwords from your personal WiFi accounts, so anyone in the vicinity can have access to internet on this… pic.twitter.com/b0OwDhwBaB
— PTI (@PTIofficial) February 8, 2024
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯು ಒಟ್ಟು 336 ಸ್ಥಾನಗಳನ್ನು ಒಳಗೊಂಡಿದ್ದು, 265 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಕೊಲೆಯಾದ ಕಾರಣ ಅಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಉಳಿದ 60 ಸ್ಥಾನಗಳನ್ನು ಮಹಿಳೆಯರಿಗೆ ಹಾಗೂ 10 ಸ್ಥಾನಗಳನ್ನು ಮುಸ್ಲಿಮೇತರರಿಗೆ ಮೀಸಲಿಡಲಾಗಿದೆ.
ಇದನ್ನು ಓದಿದ್ದೀರಾ? 40 ಪರ್ಸೆಂಟ್ ಕಮಿಷನ್ ಯಥಾಸ್ಥಿತಿ ಮತ್ತೆ ಮುಂದುವರೆದಿದೆ: ಡಿ ಕೆಂಪಣ್ಣ ಆರೋಪ
ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ, ‘4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 5,121 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಜೈಲಿನಲ್ಲಿರುವ ಕಾರಣ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. 74 ವರ್ಷದ ಷರೀಫ್ ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವ ಹುಮ್ಮಸ್ಸಿನಲ್ಲಿದ್ದಾರೆ. ಫೆ.22ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.