ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಬಲವಂತವಾಗಿ ಹೊರಹಾಕಲ್ಲ: ಅಮೆರಿಕ ರಾಯಭಾರಿ

Date:

ಗಾಜಾ ಪಟ್ಟಿಯಲ್ಲಿರುವ ಸುಮಾರು 20 ಲಕ್ಷ ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವ ಯಾವುದೇ ಯೋಜನೆ ಇಸ್ರೇಲ್‌ ಬಳಿ ಇಲ್ಲ ಎಂದು ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್‌ ಹಕಬೀ ಹೇಳಿದ್ದಾರೆ.

- Advertisement -

ಇಸ್ರೇಲ್‌ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನ್‌-ಅಮೆರಿಕನ್ನರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನಿಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಗಾಜಾದಿಂದ ಹೊರಹಾಕುವ ಯಾವುದೇ ಯೋಜನೆ ಇಸ್ರೇಲ್‌ ಸರ್ಕಾರಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಆದರೆ, ಇಸ್ರೇಲ್‌ನ ಬಲಪಂಥೀಯ ಸಚಿವರ ಇತ್ತೀಚಿನ ಹೇಳಿಕೆಗಳು ಇದಕ್ಕೆ ವಿರುದ್ಧವಾಗಿವೆ. ರಾಷ್ಟ್ರೀಯ ಭದ್ರತಾ ಸಚಿವ ಇತಮಾರ್‌ ಬೆನ್‌ ಗ್ವಿರ್‌ ಗುರುವಾರ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದು, ಅದರಂತೆ ಮೊದಲ ವರ್ಷದಲ್ಲಿ ಸುಮಾರು 2.5 ಲಕ್ಷ ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಹೊರಹೋಗುವಂತೆ ಮಾಡುವುದು ಹಾಗೂ ಮುಂದಿನ ಆರು ವರ್ಷಗಳಲ್ಲಿ ಉಳಿದ ಸುಮಾರು 20 ಲಕ್ಷ ಜನರನ್ನು ಸ್ಥಳಾಂತರಿಸುವ ಗುರಿ ಹೊಂದಲಾಗಿದೆ. ಇದಕ್ಕೂ ಒಂದು ದಿನ ಮೊದಲು ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಜ್‌, ಗಾಜಾದ ಪ್ಯಾಲೆಸ್ತೀನಿಯರನ್ನು ಸಮುದ್ರ ಮತ್ತು ಭೂಮಾರ್ಗದ ಮೂಲಕ ಹೊರಗೆ ಕಳುಹಿಸಲು ಇಸ್ರೇಲ್‌ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಅವರು ಎಲ್ಲಿಗೆ ತೆರಳಬೇಕು ಎಂಬ ಬಗ್ಗೆ ಅಮೆರಿಕದೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದರು.

ಗಾಜಾದ ಶೇ.80ರಷ್ಟು ಜನರು ಅಲ್ಲಿಂದ ಹೊರಹೋಗಲು ಬಯಸುತ್ತಿದ್ದಾರೆ. ಆದರೆ, ಹಮಾಸ್‌ ಅವರನ್ನು ತಡೆಯುತ್ತಿದೆ ಎಂದು ಕಾಟ್ಜ್‌ ಹೇಳಿಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಹಕಬೀ, ಪ್ಯಾಲೆಸ್ತೀನಿಯರು ಸ್ವಯಂಪ್ರೇರಣೆಯಿಂದ ಗಾಜಾದಿಂದ ಹೊರಹೋಗಲು ಬಯಸಿದರೆ ಅವರಿಗೆ ಆ ಅವಕಾಶ ಇರಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ನಿಲುವು ಎಂದು ಹೇಳಿದ್ದಾರೆ. ಗಾಜಾದಲ್ಲಿರುವ ಪ್ಯಾಲೆಸ್ತೀನಿಯರನ್ನು ಅಲ್ಲಿಯೇ ‘ಬಂಧಿಸಿಡುವುದು’ ಅವಮಾನಕರ ಎಂದೂ ಅವರು ಹೇಳಿದ್ದಾರೆ.

‘ಬಲವಂತದ ಸ್ಥಳಾಂತರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇಸ್ರೇಲಿಗಳು ಅಥವಾ ಅಮೆರಿಕನ್ನರು ಅದನ್ನು ಸೂಚಿಸುತ್ತಿಲ್ಲ. ಇದನ್ನು ಬೆಂಬಲಿಸುವ ಯಾರ ಬಗ್ಗೆಯೂ ನನಗೆ ತಿಳಿದಿಲ್ಲ’ ಎಂದು ಹಕಬೀ ಹೇಳಿದ್ದಾರೆ. ಆಕ್ರಮಿತ ಪ್ರದೇಶದಲ್ಲಿರುವ ನಾಗರಿಕರನ್ನು ಬಲವಂತವಾಗಿ ಸ್ಥಳಾಂತರಿಸುವುದು ಜಿನೀವಾ ಒಪ್ಪಂದಗಳ ಅಡಿಯಲ್ಲಿ ಯುದ್ಧಾಪರಾಧವೆಂದು ಪರಿಗಣಿಸಲಾಗುತ್ತದೆ.

2023ರ ಅಕ್ಟೋಬರ್‌ 7ರಂದು ಹಮಾಸ್‌ ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಬಳಿಕ ಇಸ್ರೇಲ್‌ ಆರಂಭಿಸಿದ ಸೇನಾ ಕಾರ್ಯಾಚರಣೆಯಿಂದಾಗಿ ಗಾಜಾದ ಬಹುತೇಕ ಸಂಪೂರ್ಣ ಜನಸಂಖ್ಯೆಯೇ ಈಗಾಗಲೇ ಆಂತರಿಕವಾಗಿ ಸ್ಥಳಾಂತರಗೊಂಡಿದೆ.

ಈ ನಡುವೆ, ಇಸ್ರೇಲ್‌ನ ಕೆಲವು ಬಲಪಂಥೀಯ ರಾಜಕಾರಣಿಗಳು ಗಾಜಾ ಪಟ್ಟಿಗೆ ಮತ್ತೆ ಯಹೂದಿ ವಸಾಹತುಗಾರರನ್ನು ಕರೆತರುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. 2005ರಲ್ಲಿ ಇಸ್ರೇಲ್‌ ಗಾಜಾದಲ್ಲಿದ್ದ ತನ್ನ ವಸಾಹತುಗಳನ್ನು ತೆರವುಗೊಳಿಸಿತ್ತು.

ಇದನ್ನೂ ಓದಿ: ಖಮೇನಿ ಪುತ್ರನ ಪ್ರತೀಕಾರ ಶಪಥ, ಟ್ರಂಪ್‌ಗೆ ನೇರ ಎಚ್ಚರಿಕೆ

ಗಾಜಾದಿಂದ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವ ಕುರಿತ ಹೇಳಿಕೆಗಳು ಅಕ್ಟೋಬರ್‌ 27ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿವೆ. ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ನೇತೃತ್ವದ ಸರ್ಕಾರದಲ್ಲಿ ಈ ಹಿಂದೆ ರಾಜಕೀಯವಾಗಿ ದೂರವಿಡಲಾಗಿದ್ದ ಬಲಪಂಥೀಯ ನಾಯಕರಿಗೂ ಸ್ಥಾನ ನೀಡಲಾಗಿದೆ.

ಇನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಎರಡನೇ ಅವಧಿಯ ಆರಂಭದಲ್ಲಿ ಗಾಜಾದಲ್ಲಿರುವ ಎಲ್ಲ ಪ್ಯಾಲೆಸ್ತೀನಿಯರನ್ನು ಕನಿಷ್ಠ ತಾತ್ಕಾಲಿಕವಾಗಿಯಾದರೂ ಬೇರೆಡೆಗೆ ಸ್ಥಳಾಂತರಿಸಿ, ಯುದ್ಧದಿಂದ ಧ್ವಂಸಗೊಂಡ ಗಾಜಾವನ್ನು ಐಷಾರಾಮಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಈ ಪ್ರಸ್ತಾಪಕ್ಕೆ ಈಜಿಪ್ಟ್‌ ಸೇರಿದಂತೆ ಹಲವು ದೇಶಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಟ್ರಂಪ್‌ ಸುಮ್ಮನಾಗಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...