2023ರ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಈ ಬಾರಿ ಮೂವರಿಗೆ ನೀಡಲಾಗಿದೆ.
ಫ್ರಾನ್ಸ್‌ನ ವಿಜ್ಞಾನಿಗಳಾದ ಪಿಯರೆ ಅಗೊಸ್ಟಿನಿ, ಆನ್ನೆಎಲ್ ಹುಲ್ಲಿಯರ್ ಹಾಗೂ ಹಂಗೇರಿಯ ಫೆರೆಂಕ್ ಕ್ರೌಸ್ಜ್ ಎಂಬುವರಿಗೆ ‘ಬೆಳಕಿನ ಅಟೊಸೆಕೆಂಡ್ ಪಲ್ಸಸ್ ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳ ಅಧ್ಯಯನಕ್ಕಾಗಿ’ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಮೊತ್ತ 10 ಲಕ್ಷ ಡಾಲರ್ ಒಳಗೊಂಡಿದೆ.
ಅಟೊಸೆಕೆಂಡ್ ಬೆಳಕಿನ ಪಲ್ಸ್ ಏನೆಂದರೆ ಒಂದು ಸೆಕೆಂಡಿನ ಶತಕೋಟಿಯ ಒಂದು ಭಾಗದಷ್ಟು ಬೆಳಕಿನ ಸಣ್ಣ ಸ್ಫೋಟಗಳಾಗಿವೆ. ಈ ಅಟೋಸೆಕೆಂಡ್ ಪಲ್ಸಸ್ ವಸ್ತುವಿನಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ
ಈ ಮೂವರು ತಮ್ಮ ಪ್ರಯೋಗಗಳಿಗಾಗಿ ಗುರುತಿಸಲ್ಪಡುತ್ತಿದ್ದಾರೆ. ಇದು ಪರಮಾಣುಗಳು ಮತ್ತು ಅಣುಗಳೊಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸಲು ಮಾನವ ಜಗತ್ತಿಗೆ ಹೊಸ ಸಾಧನಗಳನ್ನು ನೀಡಿದೆ ಎಂದು ನೊಬೆಲ್ ಅಕಾಡೆಮಿ ತಿಳಿಸಿದೆ.
ಅಕ್ಟೋಬರ್ 2ರಂದು ಹಂಗೇರಿಯ ವಿಜ್ಞಾನಿ ಕ್ಯಾಟಲಿನ್ ಕರಿಕೊ ಮತ್ತು ಅಮೆರಿಕದ ವಿಜ್ಞಾನಿ ಡ್ರೂ ವೈಸ್‌ಮನ್ ಅವರಿಗೆ ಜಂಟಿಯಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಅಕ್ಟೋಬರ್ 4ರಂದು ರಸಾಯನಶಾಸ್ತ್ರ, ಅಕ್ಟೋಬರ್ 5ರಂದು ಸಾಹಿತ್ಯ ಮತ್ತು ಅಕ್ಟೋಬರ್ 6ರಂದು ಶಾಂತಿ ವಿಭಾಗಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗುತ್ತದೆ.