ಸುಮಾರು 72 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನ ಪತನಗೊಂಡ ಘಟನೆ ಬುಧವಾರ ಖಜಕಿಸ್ತಾನದ ಅಕ್ಟೌ ನಗರದ ಬಳಿ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ ವಿಮಾನ ಅಗ್ನಿಗಾಹುತಿಯಾಗಿದ್ದು ಒಟ್ಟು12 ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ಮಧ್ಯ ಏಷ್ಯಾದ ದೇಶದ ತುರ್ತು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಸಿರಿಯಾ ಅಧ್ಯಕ್ಷ ಪ್ರಯಾಣಿಸುತ್ತಿದ್ದ ವಿಮಾನ ಪತನ ಶಂಕೆ; ಮೃತಪಟ್ಟಿರುವ ಸಾಧ್ಯತೆ?
ಅಪಘಾತದ ಸ್ಥಳದಲ್ಲಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಈ ವಿಮಾನವನ್ನು ಅಜರ್‌ಬೈಜಾನ್ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು ಮತ್ತು ರಷ್ಯಾದ ಚೆಚೆನ್ಯಾದ ಬಾಕುದಿಂದ ಗ್ರೋಜ್‌ನಿಗೆ ಈ ವಿಮಾನ ಹಾರುತ್ತಿತ್ತು. ಆದರೆ ಗ್ರೋಜ್‌ನಿಯಲ್ಲಿ ಮಂಜು ಆವರಿಸಿದ್ದ ಕಾರಣ ಮಾರ್ಗ ಬದಲಾಯಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಆದರೆ ಈ ಬಗ್ಗೆ ಅಜರ್‌ಬೈಜಾನ್ ಏರ್‌ಲೈನ್ಸ್‌ನಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. 67 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಖಜಕಿಸ್ತಾನದ ಮಾಧ್ಯಮ ತಿಳಿಸಿದೆ.
The preliminary cause of the crash of the aircraft of the #Azerbaijan|i company AZAL in #Kazakhstan was a collision with a flock of birds. According to preliminary data, there're 67 passengers & 5 crew members on the plane flying from Baku to Grozny/#Russia, 12 people survived. pic.twitter.com/t2WMy2uA84
— Karina Karapetyan (@KarinaKarapety8) December 25, 2024
