ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಕುಟುಂಬಕ್ಕೆ 2023ರಲ್ಲಿ ವಿದೇಶಗಳ ನಾಯಕರಿಂದ ಸಾವಿರಾರು ಡಾಲರ್‌ನಷ್ಟು ಉಡುಗೊರೆ ಬಂದಿವೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ತನ್ನ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ಪ್ರಕಟಿಸಿದೆ.
ಈ ಪೈಕಿ ಭಾರತದಿಂದ ಸಿಕ್ಕಿರುವ 20,000 ಡಾಲರ್(₹17.16 ಲಕ್ಷ) ಮೌಲ್ಯದ ವಜ್ರವು ಅತ್ಯಂತ ದುಬಾರಿ ಉಡುಗೊರೆಯಾಗಿದೆ.
2023ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜಿಲ್ ಬೈಡನ್ ಅವರಿಗೆ ನೀಡಿರುವ 7.5-ಕ್ಯಾರೆಟ್ ವಜ್ರವು ಅತ್ಯಂತ ದುಬಾರಿ ಉಡುಗೊರೆಯಾಗಿದೆ. ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿಯಿಂದ ಜಿಲ್ 14,063 ಡಾಲರ್ ಮೌಲ್ಯದ ಬ್ರೂಚ್ ಮತ್ತು ಬ್ರೇಸ್ಲೆಟ್, ಈಜಿಪ್ಟ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆಯಿಂದ 4,510 ಡಾಲರ್ ಮೌಲ್ಯದ ಫೋಟೊ ಆಲ್ಬಮ್ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್ಯೋಲ್ಯೂನ್ ಅವರಿಂದ 7,100 ಡಾಲರ್ ಮೌಲ್ಯದ ಸ್ಮರಣಾರ್ಥ ಫೋಟೊ ಆಲ್ಬಮ್, ಮಂಗೋಲಿಯನ್ ಪ್ರಧಾನಿಯಿಂದ 3,495 ಡಾಲರ್ ಮೌಲ್ಯದ ಮಂಗೋಲಿಯನ್ಯೋಧರ ಪ್ರತಿಮೆ, ಬ್ರೂನಿ ಸುಲ್ತಾನರಿಂದ 3,300 ಡಾಲರ್ ಮೌಲ್ಯದ ಬೆಳ್ಳಿಯ ಬಟ್ಟಲು ಸೇರಿದಂತೆ ಅಮೆರಿಕ ಅಧ್ಯಕ್ಷರು 2023ರಲ್ಲಿ ಸ್ವತಃ ಹಲವು ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ಇಸ್ರೇಲ್ ಅಧ್ಯಕ್ಷರಿಂದ 3,160 ಡಾಲರ್ ಮೌಲ್ಯದ ಸ್ಟರ್ಲಿಂಗ್ ಸಿಲ್ವರ್ ಟ್ರೇ ,ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯಿಂದ 2,400 ಡಾಲರ್ ಮೌಲ್ಯದ ಕೊಲಾಜ್ ಉಡುಗೊರೆಯಾಗಿ ಪಡೆದಿದ್ದಾರೆ.
ಅಮೆರಿಕ ಕಾನೂನಿನ ಪ್ರಕಾರ, ವಿದೇಶಗಳ ನಾಯಕರಿಂದ ಪಡೆದ ಉಡುಗೊರೆಗಳನ್ನು ಅಧ್ಯಕ್ಷರು ಪ್ರಕಟಿಸಬೇಕು.
