ಪ್ಯಾಲೆಸ್ತೀನ್ ಕುರಿತ ವಿವಾದಿತ ಹೇಳಿಕೆ: ಸಂಪುಟದ ಸಚಿವೆಯನ್ನು ವಜಾ ಮಾಡಿದ ಇಂಗ್ಲೆಂಡ್ ಪ್ರಧಾನಿ

Date:

Advertisements

ಪ್ಯಾಲೆಸ್ತೀನ್ ಬಗ್ಗೆ ವಿವಾದಿತ ಲೇಖನ ಪ್ರಕಟಿಸಿದ್ದ ತನ್ನ ಸಂಪುಟದ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರವರ್‌ಮನ್ ಅವರನ್ನು ವಜಾಗೊಳಿಸಿರುವ ಇಂಗ್ಲೆಂಡ್‌ ಪ್ರಧಾನಿ ರಿಶಿ ಸುನಕ್, ಅದೇ ಸ್ಥಾನಕ್ಕೆ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲೀ ಅವರನ್ನು ನೇಮಿಸಿದ್ದಾರೆ.

ಇಂಗ್ಲೆಂಡಿನ ಅತ್ಯಂತ ಹಿರಿಯ ಸಚಿವರಲ್ಲಿ ಒಬ್ಬರಾದ ಸುಯೆಲ್ಲಾ ಬ್ರವರ್‌ಮನ್ ಅವರು ಇತ್ತೀಚಿಗೆ ಪ್ಯಾಲೆಸ್ತೀನ್ ಪರವಾದ ಮೆರವಣಿಗೆಯನ್ನು ಲಂಡನ್‌ನಲ್ಲಿ ಹಮ್ಮಿಕೊಂಡ ಸಂದರ್ಭದಲ್ಲಿ ಪೊಲೀಸರು ಪ್ಯಾಲೆಸ್ತೀನ್ ಪರ ಮೃದುವಾದ ಭಾವನೆ ಹೊಂದಿದ್ದಾರೆ ಎಂದು ವಿವಾದಿತ ಲೇಖನ ಪ್ರಕಟಿಸಿದ ನಂತರ ಹುದ್ದೆಯಿಂದ ವಜಾಗೊಂಡಿದ್ದಾರೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದ ಮೂಲಗಳ ಪ್ರಕಾರ, ಸುನಕ್ ಅವರು ಸಚಿವ ಸ್ಥಾನವನ್ನು ತೊರೆಯಲು ಸುಯೆಲ್ಲಾ ಬ್ರವರ್‌ಮನ್ ಅವರಿಗೆ ಮನವಿ ಮಾಡಿದ್ದು, ರಿಶಿ ಅವರ ನಿರ್ದೇಶನವನ್ನು ಸುಯೆಲ್ಲಾ ಒಪ್ಪಿಕೊಂಡರು ಎನ್ನಲಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ದಯವಿಟ್ಟು ಬಿಟ್ಟುಬಿಡಿ, ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಅಂಗಲಾಚಿದರೂ ಅತ್ಯಾಚಾರವೆಸಗಿದ ರಾಕ್ಷಸರು

ವಜಾಗೊಂಡ ನಂತರ ನೀಡಿದ ಹೇಳಿಕೆಯಲ್ಲಿ ಸುಯೆಲ್ಲಾ ಬ್ರವರ್‌ಮನ್, ”ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಸುಯೋಗವಾಗಿದೆ. ನಾನು ಸೂಕ್ತ ಸಮಯದಲ್ಲಿ ಹೆಚ್ಚಿನದನ್ನು ಹೇಳಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ಪ್ರತಿಭಟನೆ ನಡೆಸುವಾಗ ಪ್ಯಾಲೆಸ್ತೀನಿಯನ್‌ ಪರವಾದ ಗುಂಪುಗಳನ್ನು ಪೊಲೀಸರು ಹೆಚ್ಚು ನಿರ್ಲಕ್ಷಿಸಿದ್ದಾರೆ ಎಂದು ಸುನಕ್ ಅವರ ಅನುಮೋದನೆಯಿಲ್ಲದೆ ಸುಯೆಲ್ಲಾ ಅವರು ಲೇಖನವನ್ನು ಪ್ರಕಟಿಸಿದರು.

ಕೆಲವು ದಿನಗಳ ಹಿಂದೆ, ಸುಯೆಲ್ಲಾ ಬ್ರವರ್‌ಮನ್ ಅವರು ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ರ್‍ಯಾಲಿಗಳನ್ನು “ದ್ವೇಷದ ಮೆರವಣಿಗೆಗಳು” ಎಂದು ವಿವರಿಸಿದ್ದರು. ಪ್ಯಾಲೆಸ್ತೀನ್ ಪರವಾದ ಪ್ರದರ್ಶನಗಳು ಕೆಲವು ಗುಂಪುಗಳ ಪ್ರಾಮುಖ್ಯತೆಯ ಪ್ರತಿಪಾದನೆಯಾಗಿದೆ ಎಂದು ಹೇಳಿದ್ದರು.

ಬ್ರವರ್‌ಮನ್ ಕ್ಯಾಬಿನೆಟ್ ಸ್ಥಾನವನ್ನು ಮಧ್ಯದಲ್ಲಿಯೇ ತೊರೆಯುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, 2022 ರಲ್ಲಿ ಲಿಜ್ ಟ್ರಸ್ ಸರ್ಕಾರದ ಅವಧಿಯಲ್ಲಿ, ಅವರು ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ತಮ್ಮ ವೈಯಕ್ತಿಕ ಈ-ಮೇಲ್‌ನಿಂದ ಅಧಿಕೃತ ದಾಖಲೆಯನ್ನು ಕಳುಹಿಸುವ ಮೂಲಕ ಮಂತ್ರಿ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಹುದ್ದೆ ತೊರೆದರು.

ಸುಮಾರು ಆರು ವಾರಗಳ ನಂತರ ರಿಷಿ ಸುನಕ್ ಅವರು ಹೊಸ ಕನ್ಸರ್ವೇಟಿವ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರನ್ನು ಮತ್ತೆ ಗೃಹ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲಾಯಿತು.

ಸುಯೆಲ್ಲಾ ಬ್ರವರ್‌ಮನ್ ಅವರ ಪೋಷಕರು ಭಾರತೀಯ ಮೂಲದವರಾಗಿದ್ದು ಕೆಲವು ದಶಕಗಳ ಹಿಂದೆ ಆಫ್ರಿಕಾದ ಮೂಲಕ ಇಂಗ್ಲೆಂಡ್‌ಗೆ ವಲಸೆ ಬಂದಿದ್ದರು.

ಅಲ್ಲದೆ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್‌ ಸಂಪುಟವನ್ನು ಪುನರಾಚಿಸಿದ್ದು, ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೋನ್‌ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. 2010ರಿಂದ 2016ರವರೆಗೆ ಡೇವಿಡ್ ಕ್ಯಾಮರೋನ್ ಇಂಗ್ಲೆಂಡ್‌ ಪ್ರಧಾನಿಯಾಗಿದ್ದರು. ಬ್ರೆಕ್ಸಿಟ್ ಜನಾಭಿಪ್ರಾಯ ಸಂದರ್ಭದಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X