ಉಕ್ರೇನ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪದಿದ್ದರೆ ಹೋರಾಟಕ್ಕೆ ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧವನ್ನು ಕೊನೆಗೊಳಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಎಲ್ಲವೂ ಉಕ್ರೇನ್ ಅಧ್ಯಕ್ಷರ ನಿಲುವಿನ ಮೇಲೆ ನಿಂತಿದೆ. ಅಗತ್ಯಬಿದ್ದರೆ ಉಕ್ರೇನ್ ಅಧ್ಯಕ್ಷ ವಲೋಡಿಮಿರ್ ಝೆಲೆನ್ಕಿ ಅವರನ್ನು ಭೇಟಿ ಮಾಡಲು ಸಿದ್ದ ಎಂದು ಹೇಳಿದ್ದು ಭೇಟಿ ಆದರೆ ಅದರಲ್ಲಿ ಏನಾದರೂ ಅರ್ಥವಿರಬೇಕು” ಎಂದು ತಿಳಿಸಿದ್ದಾರೆ.
“ಕಳೆದ ತಿಂಗಳು ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಅಂತರರಾಷ್ಟ್ರೀಯ ಒತ್ತಡ ಹೇರಿದ್ದಾರೆ. ಉಕ್ರೇನ್ ಭೇಟಿ ನೀಡಿದ ಇಂಗ್ಲೆಂಡ್ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಅವರು ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್‍ಗೆ ಹೆಚ್ಚುವರಿ ನೆರವು ನೀಡಲು ಅಮೇರಿಕಾ ಸಿದ್ಧವಾಗಿವೆ ಇದರಿಂದ ಉಕ್ರೇನ್ ಹೋರಾಟದಲ್ಲಿ ಮುಂದುವರಿಯಬಹುದು” ಎಂದು ಅವರು ಹೇಳಿದ್ದಾರೆ.
“ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಲು ಮತ್ತು ಉಕ್ರೇನ್‍ನ ರಕ್ಷಣೆಯನ್ನು ಬಲಪಡಿಸಲು ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಲಾಗಿದೆ. ಕಳೆದ ಮೂರು ವರ್ಷದಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ನಡೆಯುತ್ತಿದೆ.ಯುದ್ಧ ನಿಲ್ಲಿಸಲು ಅಮೆರಿಕಾ ಸೇರಿದಂತೆ ವಿಶ್ವದ ಅನೇಕ ದೇಶಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ” ಎಂದಿದ್ದಾರೆ.
