ಸೌದಿ ಅರೇಬಿಯಾದಲ್ಲಿ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗುವ ಮಹತ್ವದ ರಿಯಾದ್ ಮೆಟ್ರೋ ಯೋಜನೆಯ ಮೊದಲ ಹಂತವನ್ನು ಪ್ರಾರಂಭಿಸಲಾಗಿದೆ. ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಯೋಜನೆಯನ್ನು ಉದ್ಘಾಟಿಸಿದರು.
ಮೆಟ್ರೋ ರಿಯಾದ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬೆನ್ನೆಲುಬೆಂದು ಪರಿಗಣಿಸಲಾಗುತ್ತದೆ. ರಿಯಾದ್ ಮೆಟ್ರೋವು 176 ಕಿಮೀ ವ್ಯಾಪಿಸಿರುವ ಆರು ರೈಲು ಮಾರ್ಗಗಳು ಮತ್ತು ನಾಲ್ಕು ಮುಖ್ಯ ಕೇಂದ್ರಗಳನ್ನು ಒಳಗೊಂಡಂತೆ 85 ನಿಲ್ದಾಣಗಳನ್ನು ಒಳಗೊಂಡಿದೆ.
ಡಿಸೆಂಬರ್ 1ರಿಂದ ಸಾರ್ವಜನಿಕರಿಗೆ ಮೂರು ಮಾರ್ಗಗಳ ಸೇವೆ ತೆರೆಯಲಾಗುತ್ತದೆ. ಕ್ರಮೇಣವಾಗಿ ನಗರದಾದ್ಯಂತ ಮೆಟ್ರೋ ಸೇವೆಯನ್ನು ವಿಸ್ತರಿಸಲು ಆಡಳಿತ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ದರ್ಶನವಾಗದ ‘ಶವ್ವಾಲ್’ ಚಂದ್ರ: ಸೌದಿ ಅರೇಬಿಯಾದಲ್ಲಿ ಏ.10ಕ್ಕೆ ಈದುಲ್ ಫಿತ್ರ್ ಹಬ್ಬ
ಉದ್ಘಾಟನೆ ವೇಳೆ ಮಾತನಾಡಿದ ರಾಜ, “ರಾಜಧಾನಿಯ ಭವಿಷ್ಯದ ಸಾರ್ವಜನಿಕ ಸಾರಿಗೆ ಅಗತ್ಯಗಳ ಕುರಿತು ರಾಯಲ್ ಕಮಿಷನ್ ನಡೆಸಿದ ಅಧ್ಯಯನಗಳ ನಂತರ ಮೆಟ್ರೋ ಮತ್ತು ಬಸ್ ಸೇವೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಯೋಜನೆಯನ್ನು ಪ್ರಾರಂಭಿಸಲಾಗಿದೆ” ಎಂದು ರಾಜ ಹೇಳಿದರು.
ಮೆಕ್ಕಾದಲ್ಲಿ ಮೊದಲ ಮೆಟ್ರೋ ಮಾರ್ಗ ಆರಂಭವಾದ ಬಳಿಕ ಈಗ ರಿಯಾದ್ ಮೆಟ್ರೋ ಎರಡನೇ ಮೆಟ್ರೋ ಸೇವೆಯಾಗಿದೆ. ಮೆಕ್ಕಾದಲ್ಲಿ ಮೆಟ್ರೋ ಸೇವೆಯು ಹಜ್ ಸೀಸನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.
