ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಮೋದಿ ಅವರ ತೀವ್ರಗಾಮಿ ಹಿಂದು ರಾಷ್ಟ್ರೀಯವಾದಿ ಧೋರಣೆ ಹಾಗೂ ಆ ಧೋರಣೆಯಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಯುರೋಪಿಯನ್ ಪಾರ್ಲಿಮೆಂಟ್ ಬೋರ್ಡ್ ಕಳವಳ ವ್ಯಕ್ತಪಡಿಸಿತ್ತು. ಭಾರತಕ್ಕೆ ಹಲವಾರು ಸಲಹೆಗಳನ್ನು ನೀಡಿ ನಿರ್ಣಯ ಮಂಡಿಸಿತ್ತು. ಇದೀಗ, ಆ ನಿರ್ಣಯ ಮಂಡನೆಯ ವಿಡಿಯೋ ಮತ್ತೆ ವೈರಲ್ ಆಗಿದೆ. ಹಲವಾರು ನೆಟ್ಟಿಗರು ಆ ವಿಡಿಯೋವನ್ನು ಹಂಚಿಕೊಂಡು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
2023ರ ಜುಲೈನಲ್ಲಿ ನಡೆದಿದ್ದ ಯುರೋಪಿಯನ್ ಸಂಸತ್ ಅಧಿವೇಶನದಲ್ಲಿ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಧಾರ್ಮಿಕ ಹಲ್ಲೆಗಳ ಬಗ್ಗೆ ನಿರ್ಣಯ ಮಂಡಿಸಲಾಗಿತ್ತು. “ಭಾರತದಲ್ಲಿ ಪತ್ರಕರ್ತರು, ಧಾರ್ಮಿಕ ಅಲ್ಪಸಂಖ್ಯಾತರು, ಮಾನವ ಹಕ್ಕುಗಳ ಹೋರಾಟಗಾರರು ನಾನಾ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪ್ರತಿದಿನ ಹಿಂಸೆ, ಹಲ್ಲೆಗಳಿಗೆ ತುತ್ತಾಗುತ್ತಿದ್ದಾರೆ. ಮತೀಯ ಸಂಘರ್ಷದಿಂದ ನರಳುತ್ತಿದ್ದಾರೆ. ಯಾಕೆಂದರೆ, ಭಾರತದ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಹಿಂದೇಟು ಹಾಕುತ್ತಿದೆ. ಸಂವಿಧಾನಬದ್ದ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ” ಎಂದು ಪಾರ್ಲಿಮೆಂಟರಿ ಬೋರ್ಡ್ ಆರೋಪಿಸಿತ್ತು.
ಅಂದಿನ ಯುರೋಪಿಯನ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದ ಯುರೋಪಿಯನ್ ಸೆಕ್ರೆಟರಿ-ಜನರಲ್ ಕ್ಲಾಸ್ ವೆಲ್ಲೆ ಅವರು, “ಯುರೋಪಿಯನ್ ಸಂಸತ್ತು ಅತ್ಯಂತ ಸ್ಪಷ್ಟವಾದ ನಿರ್ಣಯದ ಮೇಲೆ ಮತ ಚಲಾಯಿಸಬೇಕು. ಮೋದಿ ಅವರ ಹಿಂದು ರಾಷ್ಟ್ರೀಯವಾದಿ ಭಾರಣವನ್ನು ಖಂಡಿಸುವಲ್ಲಿ ನಿರ್ಣಯವು ಸ್ಪಷ್ಟವಾಗಿರಬೇಕು. ಭಾರತದಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ. ಪತ್ರಕರ್ತರನ್ನು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಲಾಗಿದೆ. ನಾನು ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ನಾನೇ ಗಮನಿಸಿದಂತೆ ಭಾರತದಲ್ಲಿ ದ್ವೇಷ ಹೆಚ್ಚುತ್ತಿದೆ. ಇದು ನನಗೆ ಬಹಳ ದುಃಖ ತಂದಿದೆ. ಯಾಕೆಂದರೆ, ಭಾರತವು ನಮ್ಮ ಮುಖ್ಯ ಪಾಲುದಾರ ರಾಷ್ಟ್ರಗಳಲ್ಲಿ ಒಂದು. ಭಾರತವು ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಾನು ಕಳಕಳಿ ಹೊಂದರಿಬೇಕು” ಎಂದು ಹೇಳಿದ್ದರು.
BIG BREAKING ➖ Narendra Modi under severe attack in Europe 🔥
— Ravinder Kapur. (@RavinderKapur2) December 30, 2024
Now European Parliament board attacks PM Modi.
*HUGE SETBACK FOR BJP GOVERNMENT* ⭐
⚡Never witnessed such Scathing attack on the Indian PM ever.
⚡India's image is now like a Religiously radicalized, Oppressor… pic.twitter.com/bLlYiIVZg5
“ವ್ಯಾಪಾರ ಸೇರಿದಂತೆ ಎಲ್ಲ ವಿಷಯಗಳಲ್ಲಿ ಭಾರತದ ಪಾಲುದಾರಿಕೆಯ ಭಾಗವಾಗಿ ನಾವು ನಿರ್ಣಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕಿದೆ. ಜನಾಂಗೀಯ ಮತ್ತು ಧಾರ್ಮಿಕ ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಹಿಂದೂ ಉಗ್ರವಾದವನ್ನು ಕೊನೆಗೊಳಿಸಲು ನಾವು ಭಾರತಕ್ಕೆ ಕರೆ ನೀಡುತ್ತೇವೆ. ಹೊಸ ವ್ಯಾಪಾರ ಒಪ್ಪಂದದಲ್ಲಿ ಐರೋಪ್ಯ ಒಕ್ಕೂಟಕ್ಕೆ ಭಾರತವು ಪ್ರಮುಖ ಪಾಲುದಾರನಾಗಿದೆ. ಆದರೆ, ಕ್ರಿಶ್ಚಿಯನ್ ಸಮುದಾಯವಾಗಿ ನಾವು ಇತರ ಭವಿಷ್ಯ ಮತ್ತು ಗುರುತುಗಳನ್ನು ಗೌರವಿಸಲು ಭಾರತವನ್ನು ಕೇಳಬೇಕಿದೆ” ಎಂದಿದ್ದರು.
ಈ ವರದಿ ಓದಿದ್ದೀರಾ?: ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ
“ಧಾರ್ಮಿಕ ಹಿಂಸಾಚಾರಗಳ ಸಂದರ್ಭಗಳಲ್ಲಿ ಭಾರತದ ಅಧಿಕಾರಿಗಳು ಸದ್ಯಕ್ಕೆ ಶಕ್ತಿಹೀನರಾಗಿದ್ದಾರೆಯೇ ಅಥವಾ ಅವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಕಿರುಕುಳವನ್ನು ಪ್ರಚೋದಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕಿದೆ. ಅಲ್ಪಸಂಖ್ಯಾತರ ವಿರುದ್ಧ ಧಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಅಧಿಕಾರಿಗಳು ಮತ್ತು ಸರ್ಕಾರ ನಿಷ್ಪಕ್ಷಪಾತವಾಗಿ ಮಧ್ಯಸ್ಥಿಕೆ ವಹಿಸಬೇಕು. ಇಂದು ಯಾವುದೇ ರಾಷ್ಟ್ರೀಯತೆಯ ಹಿಂಸಾಚಾರವನ್ನು ತಿರಸ್ಕರಿಸಬೇಕಿದೆ. ಅದಕ್ಕಾಗಿ ಯುರೋಪಿಯನ್ ಒಕ್ಕೂಟದಿಂದ ಸ್ಪಷ್ಟ ಸಂದೇಶವನ್ನು ನಾವು ಕಳಿಸೋಣ” ಎಂದು ಹೇಳಿದ್ದರು.
“ಭಾರತದಲ್ಲಿ ಮಾನವ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ಒತ್ತಾಯಿಸುತ್ತೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆಪಡುವ ಭಾರತದಲ್ಲಿ ಕ್ರಿಶ್ಚಿಯನ್ನರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಅಸಹಿಷ್ಣುತೆ ಮತ್ತು ಹಿಂಸೆ, ದಾಳಿಗಳು ವಿಭಿನ್ನ ಚಿತ್ರಣವನ್ನು ನೀಡುತ್ತವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆ ನಿರ್ಣಯ ಮಂಡಿಸಿದ ನಂತರವೂ ಭಾರತದಲ್ಲಿ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಧಾರ್ಮಿಕ ಹಿಂಸಾಚಾರವನ್ನು ತಡೆಯಲು ಮುಂದಾಗಿಲ್ಲ. ಮಾತ್ರವಲ್ಲದೆ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಸ್ವತಃ ಮೋದಿ ಅವರೇ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ದ್ವೇಷ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಹಳೆಯ ವಿಡಿಯೋ ವೈರಲ್ ಆಗಿದೆ.