ಪೂರ್ವ ರಷ್ಯಾದ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪದ ನಂತರ ಶಿವೇಲುಚ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಜ್ವಾಲಾಮುಖಿಯು ಲಾವಾವನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ ಬಳಿಕ ಸಮುದ್ರ ಮಟ್ಟದಿಂದ 8 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಬೂದಿ ಹಾರಿದೆ. ಯಾವುದೇ ಪ್ರಾಣಾಪಾಯ, ಸಾವು ನೋವುಗಳ ವರದಿಯಾಗಿಲ್ಲ.
ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್‌ಸ್ಕಿಯಿಂದ ಸುಮಾರು 280 ಮೈಲುಗಳಷ್ಟು ದೂರದಲ್ಲಿ ಶಿವೇಲುಚ್ ಪರ್ವತವಿದ್ದು ಅಲ್ಲಿ ಈ ಜ್ವಾಲಾಮುಖಿ ಕಾಣಿಸಿಕೊಂಡಿದೆ. ಈ ಪ್ರದೇಶ ರಷ್ಯಾದ ಕಮ್ಚಟ್ಕಾದಲ್ಲಿರುವ ಸುಮಾರು 181,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾಗಿದೆ.
ಇದನ್ನು ಓದಿದ್ದೀರಾ? 2025ಕ್ಕೆ ವಿನಾಶಕಾರಿ ಪ್ರಳಯವಾಗುತ್ತಾ?; ಬಾಬಾಗಳು ಮತ್ತು ವದಂತಿಗಳು
ಭೂಕಂಪದ ಕೇಂದ್ರಬಿಂದುವು ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್‌ಸ್ಕಿಯಿಂದ ಸುಮಾರು 55 ಮೈಲುಗಳಷ್ಟು ದೂರದಲ್ಲಿದೆ. ಸುಮಾರು 30 ಮೈಲುಗಳಷ್ಟು ಆಳವನ್ನು ಹೊಂದಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಹೇಳಿದೆ.
Shiveluch volcano erupts after 7.0 magnitude earthquake strikes off eastern Russian coast
— ANI Digital (@ani_digital) August 18, 2024
Read @ANI Story | https://t.co/9khkDWNYR3#Shiveluchvolcano #Russia #earthquake pic.twitter.com/7JaJ3OUaQe
ಭೂಕಂಪವು ಅಧಿಕ ಹಾನಿಯನ್ನು ಉಂಟು ಮಾಡಿಲ್ಲ. ಆದರೆ ಕಟ್ಟಡಗಳು, ಕೆಲವು ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಭೂಕಂಪನ ಕಾಣಿಸಿಕೊಂಡ ಬಳಿಕ ಈವರೆಗೂ ರಷ್ಯಾದ ತುರ್ತು ಸಚಿವಾಲಯವು ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ.
ಆದರೆ ಯುಎಸ್ ಸುನಾಮಿ ಎಚ್ಚರಿಕೆ ನೀಡುವ ಸಂಸ್ಥೆಯು, “ಈ ಭೂಕಂಪದಿಂದ ಅಪಾಯಕಾರಿ ಸುನಾಮಿ ಅಲೆಗಳು ರಷ್ಯಾದ ಕರಾವಳಿಯಾದ್ಯಂತ ಕೇಂದ್ರಬಿಂದುವಿನಿಂದ 300 ಕಿಮೀ (ಅಂದಾಜು 186 ಮೈಲುಗಳು) ಒಳಗೆ ಬರುವ ಸಾಧ್ಯತೆಯಿದೆ” ಎಂದು ಎಚ್ಚರಿಕೆ ನೀಡಿದೆ.
BREAKING: 7.2 magnitude earthquake strikes near Kamchatka, Russia! Locals report ground moving like it's alive. But that's not all – Shiveluch volcano ERUPTS, spewing 8km-high dust column! Take a deep breath, this is getting intense! pic.twitter.com/1HFtwfPSrV
— Facts Prime (@factsprime35) August 17, 2024