181 ಜನ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡ ಘಟನೆ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 171 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್‌ನಿಂದ ಹಿಂದಿರುಗಿತ್ತು. ವಿಮಾನದಲ್ಲಿದ್ದ 181 ಜನರಲ್ಲಿ 175 ಮಂದಿ ಪ್ರಯಾಣಿಕರು ಮತ್ತು 6 ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಂಡಿಂಗ್ ವಿಫಲವಾದ ಬಳಿಕ ವಿಮಾನವು ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಇದರಿಂದ ದೊಡ್ಡ ಸ್ಫೋಟ ಸಂಭವಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಕ್ಕಿಗಳಿಗೆ ವಿಮಾನ ಡಿಕ್ಕಿಯಾದ ಪರಿಣಾಮ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದುವರೆಗೆ ಇಬ್ಬರನ್ನು ರಕ್ಷಿಸಲಾಗಿದೆ.
ಕ್ಷಮೆ ಯಾಚಿಸಿದ ‘ಜೆಜು ಏರ್’
ದುರಂತದ ಬೆನ್ನಲ್ಲೇ ಜೆಜು ಏರ್ ಸಂಸ್ಥೆ ಕ್ಷಮೆ ಯಾಚಿಸಿದೆ, ಮುಯಾನ್ ವಿಮಾನ ದುರಂತದಲ್ಲಿ ಸಂಕಷ್ಟಕ್ಕೀಡಾದ ಪ್ರತಿಯೊಬ್ಬರಲ್ಲಿಯೂ ಕ್ಷಮೆ ಕೋರುತ್ತೇವೆ. ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ದುರ್ಘಟನೆಯ ಬಗ್ಗೆ ವಿಷಾದಿಸುತ್ತೇವೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸಂತ್ರಸ್ತರ ಕುಟುಂಬದವರಿಗೆ ನೆರವಾಗುವ ಸಲುವಾಗಿ, ವಿಮಾನ ನಿಲ್ದಾಣವಿದ್ದ ಜಿಯೊಲ್ಲನಮ್-ಡೊ ಪ್ರಾಂತ್ಯದಲ್ಲಿ ತಾತ್ಕಾಲಿಕವಾಗಿ ವಿಶೇಷ ರೈಲು ಕಾರ್ಯಾಚರಣೆ ಆರಂಭಿಸುವುದಾಗಿ ಕೊರಿಯಾ ರೈಲ್ವೆ ತಿಳಿಸಿದೆ. ಅಲ್ಲದೇ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಶವಾಗಾರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ 94 ಶವಗಳನ್ನು ಇರಿಸಲಾಗಿದೆ. ಈ ಬಗ್ಗೆ ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
🚨 SAD NEWS! South Korea Airlines crashes, explodes with 181 passengers.
— Megh Updates 🚨™ (@MeghUpdates) December 29, 2024
179 people presumed DEAD in South Korea plane crash, fire department says.
Only 2 survivors. OH GOD 🙏 pic.twitter.com/yF5rycsIRO