ದಕ್ಷಿಣ ಕೊರಿಯಾದಲ್ಲಿ ಭಾನುವಾರ ನಡೆದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ ಮೃತರ ಸಂಖ್ಯೆ ಕನಿಷ್ಠ 177ಕ್ಕೆ ಏರಿಕೆಯಾಗಿದೆ. ವಿಮಾನ ಲ್ಯಾಂಡ್ ಆಗುವ ವೇಳೆ ಬೆಂಕಿ ಹೊತ್ತಿ ಈ ಅವಘಡ ಸಂಭವಿಸಿದೆ.
ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್‌ನಿಂದ ಹಿಂದಿರುಗಿತ್ತು. ಥಾಯ್ ರಾಜಧಾನಿ ಬ್ಯಾಂಕಾಕ್‌ನಿಂದ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳನ್ನು ಹೊತ್ತು ತಂದಿತ್ತು. ಲ್ಯಾಂಡಿಂಗ್ ಆಗುವ ವೇಳೆ ಪತನಗೊಂಡಿತ್ತು.
ಇದನ್ನು ಓದಿದ್ದೀರಾ? ದಕ್ಷಿಣ ಕೊರಿಯಾ | ರನ್‌ವೇನಲ್ಲಿ ಹೊತ್ತಿ ಉರಿದ ವಿಮಾನ, ಮೃತರ ಸಂಖ್ಯೆ 171ಕ್ಕೆ ಏರಿಕೆ
ಇಬ್ಬರು ಸಿಬ್ಬಂದಿಗಳ ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾಗಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.
ಇನ್ನು ಸಾರಿಗೆ ಸಚಿವಾಲಯದ ಪ್ರಕಾರ, ದಕ್ಷಿಣ ಕೊರಿಯಾದ ನೆಲದಲ್ಲಿ ಸಂಭವಿಸಿದ ಅತೀ ಮಾರಣಾಂತಿಕ ವಿಮಾನ ಅಪಘಾತ ಇದಾಗಿದೆ. ಸುಮಾರು ಮೂರು ದಶಕಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಇಂತಹ ಅಪಘಾತ ಸಂಭವಿಸಿಲ್ಲ.
🚨Jeju Air flight skids off runway in South Korea’s Muan International Airport.
— Still🏝️Roaming (@roaming_rn) December 29, 2024
175 passengers, 6 crew members were aboard. 23 people confirmed dead thus far according to Yonhap. pic.twitter.com/kW3t6nLNPO
ಇದನ್ನು ಓದಿದ್ದೀರಾ? ದಕ್ಷಿಣ ಕೊರಿಯಾ | ತುರ್ತು ಮಿಲಿಟರಿ ಆದೇಶ ವಾಪಸ್
“ವಿಮಾನದ ಕೊನೆಯ ಭಾಗ ಮಾತ್ರ ಕೊಂಚ ಆಕಾರ ಹೊಂದಿದೆ. ಉಳಿದ ಭಾಗಗಳನ್ನು ಗುರುತಿಸಲು ಅಸಾಧ್ಯವಾದ ಸ್ಥಿತಿಗೆ ತಲುಪಿದೆ. ಇಬ್ಬರನ್ನು ವಿಮಾನದ ಕೊನೆಯ ಭಾಗದಲ್ಲಿ ರಕ್ಷಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮುವಾನ್ ಅಗ್ನಿಶಾಮಕ ಮುಖ್ಯಸ್ಥ ಲೀ ಜಂಗ್-ಹ್ಯುನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಭೀಕರ ವಿಮಾನ ಅಪಘಾತಕ್ಕೆ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ.
ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 1997ರಲ್ಲಿ ಗುವಾಮ್‌ನಲ್ಲಿ ಕೊರಿಯನ್ ಏರ್ ಅಪಘಾತ ಸಂಭವಿಸಿತ್ತು. ಸುಮಾರು 200ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಈ ಅಪಘಾತವು ದಕ್ಷಿಣ ಕೊರಿಯಾದ ವಿಮಾನಯಾನ ಸಂಸ್ಥೆಯ ಇತಿಹಾಸದಲ್ಲೇ ಅತೀ ಭೀಕರ ಅಪಘಾತವಾಗಿದೆ. 2002ರಲ್ಲಿ ಏರ್ ಚೀನಾ ಅಪಘಾತ ಸಂಭವಿಸಿದ್ದು ಇದರಿಂದಾಗಿ 129 ಮಂದಿ ಸಾವನ್ನಪ್ಪಿದ್ದಾರೆ.
