ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಸಮರ ಕಾನೂನು ಜಾರಿ ಮಾಡಿದ್ದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ವಿರುದ್ಧ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಅನ್ನು ಜಾರಿ ಮಾಡಿದೆ. ಯೂನ್ ಅವರ ಬಂಧನಕ್ಕೆ ದಕ್ಷಿಣ ಕೊರಿಯಾದ ನ್ಯಾಯಾಲಯವು ಮಂಗಳವಾರ ಅಧಿಕಾರಿಗಳಿಗೆ ಅನುಮೋದನೆ ನೀಡಿದೆ.
ದಕ್ಷಿಣ ಕೊರಿಯಾದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷರೊಬ್ಬರು ಬಂಧನವನ್ನು ಎದುರಿಸುತ್ತಿರುವುದಾಗಿದೆ. ಸಿಯೋಲ್ ವೆಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ ವಾರಂಟ್ ಅನ್ನು ಅನುಮೋದಿಸಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕೊರಿಯಾ | ತುರ್ತು ಮಿಲಿಟರಿ ಆದೇಶ ವಾಪಸ್
ಅಧಿಕಾರದಿಂದ ಅಮಾನತುಗೊಂಡಿರುವ ಯೂನ್ ಅವರು ಸಮರ ಕಾನೂನನ್ನು ಜಾರಿಗೊಳಿಸಿದ ವಿಚಾರದಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಡಿಸೆಂಬರ್ 3ರಂದು ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ಸಮರ ಕಾನೂನನ್ನು ಘೋಷಿಸಲಾಗಿತ್ತು. ಅದಾದ ಬಳಿಕ ಒತ್ತಡ ಹೆಚ್ಚಾದಂತೆ ಈ ಕಾನೂನು ಜಾರಿಯನ್ನು ಹಿಂಪಡೆಯಲಾಗಿತ್ತು. ಸಮರ ಕಾನೂನು ಭಾರತದಲ್ಲಿ ತುರ್ತು ಪರಿಸ್ಥಿತಿಗೆ ಸಮವಾಗಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕೊರಿಯಾ | ಭೀಕರ ವಿಮಾನ ಅಪಘಾತ; ಮೃತರ ಸಂಖ್ಯೆ 177ಕ್ಕೆ ಏರಿಕೆ
ಈ ಹಿಂದೆ 1979ರಲ್ಲಿ ದಕ್ಷಿಣ ಕೊರಿಯಾದಲ್ಲಿ ಈ ಸಮರ ಕಾನೂನನ್ನು ಜಾರಿ ಮಾಡಲಾಗಿತ್ತು. ದಂಗೆಯಲ್ಲಿ ದಕ್ಷಿಣ ಕೊರಿಯಾದ ಆಗಿನ ಮಿಲಿಟರಿ ಸರ್ವಾಧಿಕಾರಿ ಪಾರ್ಕ್ ಚುಂಗ್-ಹೀ ಹತ್ಯೆಯಾದಾಗ ಈ ಕಾನೂನು ಘೋಷಿಸಲಾಗಿತ್ತು.
ಆದರೆ ದಕ್ಷಿಣ ಕೊರಿಯಾ 1987ರಲ್ಲಿ ಸಂಸದೀಯ ಪ್ರಜಾಪ್ರಭುತ್ವವಾದ ಬಳಿಕ ಈ ಕಾನೂನು ಎಂದಿಗೂ ಜಾರಿಯಾಗಿಲ್ಲ. ಆದರೆ ಇತ್ತೀಚೆಗೆ ಯೂನ್ ಈ ಕಾನೂನು ಘೋಷಿಸುವ ಮೂಲಕ ಈ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.
