ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗಲೇ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ನಡೆದಿದೆ.
ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರು ಬುಸಾನ್‌ನ ಗಡೆಯೊಕ್ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಿಮಾನ ನಿಲ್ದಾಣವನ್ನು ವೀಕ್ಷಿಸಲು ತೆರಳಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಯೋರ್ವ, 59 ವರ್ಷದ ಲೀ ಜೈ ಮ್ಯೂಂಗ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
Lee Jae-myung, chief of South Korea’s main opposition Democratic Party, was taken to a hospital after being attacked by an unidentified person, multiple local media reported Tuesday. #GLOBALink pic.twitter.com/Mtht2ApJt0
— China Xinhua News (@XHNews) January 2, 2024
ಘಟನೆಯಿಂದಾಗಿ ಮ್ಯೂಂಗ್ ಅವರ ಕುತ್ತಿಗೆಯ ಎಡಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಬುಸಾನ್ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳದಿಂದಲೇ ದಾಳಿಕೋರನನ್ನು ಅಧಿಕಾರಿಗಳು ಬಂಧಿಸಿದ್ದು, ಈ ಕೃತ್ಯದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ವಿಮಾನ ನಿಲ್ದಾಣವನ್ನು ವೀಕ್ಷಿಸಲು ತೆರಳಿದ್ದ ವೇಳೆ ಲೀ ಜೈ ಮ್ಯೂಂಗ್ ಅವರ ಕೆಲವೊಂದು ಬೆಂಬಲಿಗರು ಕೂಡ ಸ್ಥಳದಲ್ಲಿದ್ದರು. ಅವರ ಬೆಂಬಲಿಗರಂತೆ ವೇಷ ಧರಿಸಿದ್ದ ಯುವಕ ಏಕಾಏಕಿ ದಾಳಿ ನಡೆಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದವರು ಆಘಾತಗೊಂಡು ಕಿರುಚುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಲೀ ಜೈ ಮ್ಯೂಂಗ್ ಅವರು ದಕ್ಷಿಣ ಕೊರಿಯಾದಲ್ಲಿ ಧ್ರುವೀಕರಣ ರಾಜಕಾರಣಿಯಾಗಿ ಸದಾ ವಿವಾದಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಭೂ ಮಾಫಿಯಾ ಹಗರಣಗಳ ಆರೋಪ ಇವರ ಮೇಲಿದೆ.
South Korea’s opposition party leader stabbed in neck, suspect arrested pic.twitter.com/H4LESRqE7l
— CGTN (@CGTNOfficial) January 2, 2024
“ಲೀ ಅವರ ಮೇಲೆ ನಡೆದಿರುವ ಈ ಮಾರಣಾಂತಿಕ ಹಲ್ಲೆಯು ಭಯೋತ್ಪಾದಕ ಕೃತ್ಯವಾಗಿದೆ. ಯಾವುದೇ ಸಂದರ್ಭಗಳಲ್ಲಿ ಯಾರಿಗೂ ಹೀಗೆ ಸಂಭವಿಸಬಾರದು. ಇದು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ” ಎಂದು ಲೀ ಅವರ ಡೆಮಾಕ್ರಟಿಕ್ ಪಕ್ಷದ ಸಂಸದ ಕ್ವಾನ್ ಚಿಲ್-ಸಿಯುಂಗ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
South Korea’s political opposition, Lee Jae-myung, was stabbed in the neck while speaking to reporters. He has been airlifted to hospital where doctors say he is in a stable condition. pic.twitter.com/O5srIcfV2L
— Al Jazeera English (@AJEnglish) January 2, 2024
ಲೀ ಜೈ ಮ್ಯೂಂಗ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಬುಸಾನ್ ನ್ಯಾಷನಲ್ ಆಸ್ಪತ್ರೆಯಿಂದ ಹೆಲಿ ಆ್ಯಂಬುಲೆನ್ಸ್ ಮೂಲಕ ಸಿಯೋಲ್‌ನಲ್ಲಿರುವ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ದಾಳಿ ನಡೆಸಿದ ಯುವಕ ಯಾರು? ಆತನ ಹಿನ್ನೆಲೆ ಏನು ಎಂಬುದರ ಬಗ್ಗೆ ಈವರೆಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.