ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆಯು ಸುಮಾರು 34 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಜೊತೆಗೆ ಮೂರು ಟ್ರಾಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಜನವರಿ 25 ಮತ್ತು 26ರಂದು ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಇದನ್ನು ಓದಿದ್ದೀರಾ? ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪ: ಒಂಬತ್ತು ಭಾರತೀಯ ಮೀನುಗಾರರ ಬಂಧನ
ಶ್ರೀಲಂಕಾಕ್ಕೆ ಸೇರಿದ ಸಮುದ್ರ ಮಾರ್ಗದಲ್ಲಿ ನೌಕಾಪಡೆಯುವ ಅಕ್ರಮವಾಗಿ ಮೀನುಗಾರಿಯನ್ನು ತಡೆಯಲು ನಿರಂತರ ಗಸ್ತು ತಿರುಗುತ್ತಿದೆ. ಈ ಸಂದರ್ಭದಲ್ಲಿ ಈಶಾನ್ಯ ಮನ್ನಾರ್ ಜಿಲ್ಲೆಯ ಕರಾವಳಿಯಲ್ಲಿ ಅಕ್ರಮವಾಗಿ ಮೀನುಗಾರಿ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ಇನ್ನು ಬಂಧಿತ ಮೀನುಗಾರರನ್ನು ಮುಂದಿನ ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿದ್ದ ಸುಮಾರು 41 ಭಾರತೀಯ ಮೀನುಗಾರರನ್ನು ಈಗಾಗಲೇ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಒಂದು ವಾರದ ಹಿಂದೆ ಶ್ರೀಲಂಕಾ ಭಾರತೀಯ ಹೈಕಮಿಷನ್‌ಗೆ ತಿಳಿಸಿದೆ.
ಜನವರಿ 12ರಂದು ಎಂಟು ಭಾರತೀಯ ಮೀನುಗಾರರನ್ನು ಬಂಧಿಸಲಾಯಿತು. ಎರಡು ಮೀನುಗಾರಿಕೆ ಟ್ರಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಷಹಜಹಾನ್ ಪ್ರಕರಣ | ಮೀನುಗಾರಿಕೆ ಸಂಸ್ಥೆ ಮೂಲಕ ಅಕ್ರಮ ಹಣ ವರ್ಗಾವಣೆ; ಇಡಿ ವಿವರ
ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳಲ್ಲಿ ಮೀನುಗಾರರ ವಿಷಯವು ವಿವಾದಾಸ್ಪದವಾಗಿಯೇ ಉಳಿದಿದೆ. ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದಾರೆ. ಶ್ರೀಲಂಕಾದ ಪ್ರಾದೇಶಿಕ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ಪಾಕ್ ಜಲಸಂಧಿಯು ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕೆ ಸ್ಥಳವಾಗಿದೆ. ಎರಡೂ ದೇಶಗಳ ಮೀನುಗಾರರು ಪರಸ್ಪರ ಅತಿಕ್ರಮಣ ಮಾಡುತ್ತಿದ್ದು, ಆಗಾಗ್ಗೆ ಬಂಧನಕ್ಕೆ ಒಳಗಾಗುತ್ತಿದ್ದಾರೆ.
2024ರಲ್ಲಿ, ದ್ವೀಪ ರಾಷ್ಟ್ರದ ನೌಕಾಪಡೆಯು ಶ್ರೀಲಂಕಾದ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 529 ಭಾರತೀಯ ಮೀನುಗಾರರನ್ನು ಬಂಧಿಸಿತು.
