ಶುಕ್ರವಾರ(ಏ.5)ರ ಬೆಳಗ್ಗೆ ನ್ಯೂಜೆರ್ಸಿಯಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ವೇಳೆ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಪ್ರತಿಮೆಯು ಕಂಪಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಭೂಕಂಪನದ ಕೇಂದ್ರ ಬಿಂದುವು ನ್ಯೂಜೆರ್ಸಿಯ ಕ್ಯಾಲಿಫೋನ್ ಆಗಿತ್ತು. ಬೆಳಿಗ್ಗೆ 10:23ರ ಸುಮಾರಿಗೆ ಭೂಮಿ ಕಂಪಿಸಿತ್ದೆತು. ಈ ವೇಳೆ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಪ್ರತಿಮೆಯು ಕಂಪಿಸಿದೆ @EarthCam ಟ್ವಿಟರ್ ಖಾತೆಯಲ್ಲಿ ಭೂಕಂಪನದ ವಿಡಿಯೋವನ್ನು ಏಪ್ರಿಲ್ 5ರಂದು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
EarthCam captured the moment a 4.8-magnitude earthquake recorded in New Jersey shook residents in surrounding states and New York City on Friday morning. The earthquake was the strongest in NJ since 1884. pic.twitter.com/cKXmXqmxtW
— EarthCam (@EarthCam) April 5, 2024
‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಭೂಕಂಪನದ ವೇಳೆ ಕೆಲ ಸೆಕೆಂಡುಗಳ ವರೆಗೆ ಕಂಪಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸರಿಸುಮಾರು 42 ಮಿಲಿಯನ್ ಜನರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ.
ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್-ಕೆನಡಾ ಗಡಿಯವರೆಗೆ ಭೂಮಿ ಕಂಪಿಸಿರುವುದಾಗಿ ಅಮೆರಿಕದ ಭೂಕಂಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಮಿಯ ಅಲುಗಾಡುವಿಕೆಯು ಕೆಲವು ಸೆಕೆಂಡುಗಳ ಕಾಲ ನಡೆದರೂ, ನ್ಯೂಯಾರ್ಕ್ ನಗರದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
Yesterday statue of liberty struck by the lightning and today earthquake hit New York City,what the hell is going on.#NewYorkCity #NewYork #NewJersey #earthquake #earthquakenyc pic.twitter.com/yPR3jTjrnw
— The optimist✌ (@MuhamadOmair83) April 5, 2024
ಈ ನಡುವೆ ಚಂಡಮಾರುತದ ವೇಳೆ ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಮಿಂಚು ಕೂಡ ಬಡಿದಿದೆ. ಆ ಮಿಂಚು ಪ್ರತಿಮೆಯ ಕೈಯ್ಯಲ್ಲಿರುವ ಟಾರ್ಚಿಗೆ ಬಡಿದಿದೆ. ಈ ದೃಶ್ಯವನ್ನು ಛಾಯಾಗ್ರಾಹಕ ಡಾನ್ ಮಾರ್ಟಿನ್ ಎಂಬವರು ಸೆರೆ ಹಿಡಿದಿದ್ದು, ಅವರು ಕ್ಲಿಕ್ ಮಾಡಿದ ಫೋಟೋ ಕೂಡ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
