ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ಚರ್ಚ್‌ನಲ್ಲಿ ಭಾನುವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 20 ಜನ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸಿರಿಯನ್ ಅಧಿಕಾರಿಗಳು ಹೇಳುವ ಪ್ರಕಾರ ಡಮಾಸ್ಕಸ್‌ನ ದ್ವೀಲಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ಗೆ ನುಗ್ಗಿದ ದಾಳಿಕೋರ ಮೊದಲು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಬಳಿಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.
ಸಿರಿಯನ್ ಆಡಳಿತದ ಅತ್ಯಂತ ಸುರಕ್ಷಿತ ಪ್ರದೇಶವೆಂದು ರಾಜಧಾನಿ ಎಂದು ಡಮಾಸ್ಕಸ್‌ನ್ನುಪರಿಗಣಿಸಲಾಗಿದೆ. ಈಗ ಇದರ ಮಧ್ಯಭಾಗದಲ್ಲಿಯೇ ಈ ದಾಳಿ ನಡೆದಿದೆ. ಸರ್ಕಾರಿ ಮಾಧ್ಯಮಗಳು ಇದನ್ನು ಹೇಡಿತನದ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿವೆ, ಆದರೂ ಈ ದಾಳಿಯ ಜವಾಬ್ದಾರಿಯನ್ನು ಇಲ್ಲಿಯವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.