ಜಪಾನಿನ ಸರಕುಗಳ ಮೇಲೆ 35%ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ತಪ್ಪಿಸಲು ಜಪಾನ್ ಪ್ರಯತ್ನಸುತ್ತಿದೆ. ಆದಾಗ್ಯೂ, ಅಮೆರಿಕ (ಟ್ರಂಪ್) ಜೊತೆಗಿನ ಮಾತುಕತೆಯಲ್ಲಿ ‘ಸುಲಭವಾಗಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಹೇಳಿದ್ದಾರೆ.
“ನಾವು ಸುಲಭವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ” ಎಂದು ಅವರು ಹೇಳಿದ್ದಾರೆ.
ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಮಾತುಕತೆಗೆ ಬುಧವಾರದ ಗಡುವನ್ನು ನಿಗದಿ ಮಾಡಲಾಗಿದೆ. ಅದಕ್ಕಾಗಿ, ಅಮೆರಿಕಗೆ ಜಪಾನ್ ಪ್ರಧಾನಿ ತೆರಳುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
“30%, 35% ಅಥವಾ ನಾವು ನಿರ್ಧರಿಸುವ ಯಾವುದೇ ಪ್ರಮಾಣದ ಸಂಖ್ಯೆಯನ್ನು ಪಾವತಿಸಬೇಕೆಂದು ತಮಗೆ ಟ್ರಂಪ್ ಪತ್ರ ಬರೆದಿದ್ದಾರೆ. ಅಲ್ಲದೆ, ಅಮೆರಿಕದ ಆಟೋಮೊಬೈಲ್ಸ್ ಮತ್ತು ಅಕ್ಕಿಯನ್ನು ಖರೀಸುವಂತೆ ನಮಗೆ ಟ್ರಂಪ್ ಸೂಚಿಸಿದ್ದಾರೆ. ಇದು, ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ಅನ್ಯಾಯ” ಎಂದು ಶಿಗೇರು ಹೇಳಿದ್ದಾರೆ.