ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಗೆಲ್ಲುತ್ತಿದ್ದಂತೆ ಅವರ ಆಪ್ತ ಗೆಳೆಯ ಎಲಾನ್ ಮಸ್ಕ್ ಅವರ ಟೆಸ್ಲಾ ಷೇರು ಬೆಲೆಯು NASDAQನಲ್ಲಿ ಶೇಕಡ 14ರಷ್ಟು ಏರಿಕೆ ಕಂಡಿದೆ. ಫ್ಲೋರಿಡಾದಲ್ಲಿ ತನ್ನ ವಿಜಯ ಭಾಷಣದಲ್ಲಿ ಯುಎಸ್ ಅಧ್ಯಕ್ಷ ಬಿಲಿಯನೇರ್ ಮಸ್ಕ್ ಹೆಸರು ಪ್ರಸ್ತಾಪ ಮಾಡುತ್ತಿದ್ದಂತೆ ಷೇರು ಜಿಗಿದಿದೆ.
NASDAQನಲ್ಲಿ ಆರಂಭಿಕ ವಹಿವಾಟಿನಲ್ಲಿಸ ಟೆಸ್ಲಾ ಷೇರುಗಳು ಶೇಕಡ 15ರಷ್ಟು ಏರಿಕೆಯಾಗಿ $289.41ರಲ್ಲಿ ವಹಿವಾಟು ನಡೆಸುತ್ತಿವೆ.ಟೆಸ್ಲಾ ಷೇರುಗಳು $284.67ರಲ್ಲಿ ವಹಿವಾಟು ಆರಂಭಿಸಿದೆ. ಬಳಿಕ ದಿನದ ಗರಿಷ್ಠ ಮಟ್ಟ $289.59ಕ್ಕೆ ತಲುಪಿದೆ.
ಇದನ್ನು ಓದಿದ್ದೀರಾ? ಕಮಲಾ ಪೂರ್ವಜರ ಊರಿನಲ್ಲಿ ನಿರಾಸೆ; ಉತ್ತರ ಪ್ರದೇಶದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಪೂಜೆ
“ಆತ (ಎಲಾನ್ ಮಸ್ಕ್) ವಿಶೇಷ ವ್ಯಕ್ತಿ, ಆತ ಅಸಾಧಾರಣ ಪ್ರತಿಭೆ” ಎಂದು ಫ್ಲೋರಿಡಾದಲ್ಲಿ ತನ್ನ ಬೆಂಬಲಿಗ ಮಸ್ಕ್ ಅನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಹೇಳಿದ್ದಾರೆ. “ನಮ್ಮ ಮೇಧಾವಿಗಳನ್ನು ನಾವು ರಕ್ಷಿಸಿಕೊಳ್ಳಬೇಕು. ನಮ್ಮಲ್ಲಿ ಅಂತಹ ಜನರು ಹೆಚ್ಚು ಇಲ್ಲ” ಎಂದು ಕೂಡಾ ಹೇಳಿಕೊಂಡಿದ್ದಾರೆ.
Vox Populi, Vox Dei pic.twitter.com/jUWaLo8qiA
— ALX 🇺🇸 (@alx) November 6, 2024
“ನಿರೀಕ್ಷೆಯಂತೆ, ಟ್ರಂಪ್ ಇವಿಗಳಿಗೆ ರಿಯಾಯಿತಿಗಳು ಮತ್ತು ತೆರಿಗೆ ಪ್ರೋತ್ಸಾಹಕಗಳನ್ನು ತೆಗೆದುಹಾಕಿದರೆ ಟೆಸ್ಲಾ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಪ್ರಯೋಜನವನ್ನು ನೀಡುತ್ತದೆ” ಎಂದು ವೆಡ್‌ಬುಷ್‌ನ ಡಾನ್ ಐವ್ಸ್ ಎಪಿಗೆ ತಿಳಿಸಿದ್ದಾರೆ.
