ಟೆಕ್ಸಾಸ್‌ನ ಗ್ವಾಡಾಲುಪೆ ನದಿ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು ಹಠಾತ್ ಪ್ರವಾಹ ಉಂಟಾಗಿದೆ. ಈವರೆಗೆ 24 ಮಂದಿ ಸಾವನ್ನಪ್ಪಿದ್ದು, ಇನ್ನೂ 12ಕ್ಕೂ ಅಧಿಕ ಬೇಸಿಗೆ ಶಿಬಿರದಲ್ಲಿದ್ದ ಶಿಬಿರಾರ್ಥಿ ಯುವಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಶುಕ್ರವಾರ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಮಾಹಿತಿ ನೀಡಿದ್ದಾರೆ. “ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ರಾತ್ರಿಯಿಡೀ ಮತ್ತು ಶನಿವಾರದವರೆಗೆ ಮುಂದುವರಿಯುತ್ತವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಮಾಚಲ ಪ್ರದೇಶ ಸೇರಿ ಉತ್ತರ ಭಾರತದಲ್ಲಿ ಭಾರೀ ಮಳೆ, ಪ್ರವಾಹಕ್ಕೆ 41 ಸಾವು
ಇನ್ನು ಗುಡುಗು ಸಹಿತ ಮಳೆಯಾದ ನಂತರ, ಯುಎಸ್ ರಾಷ್ಟ್ರೀಯ ಹವಾಮಾನ ಸೇವೆಯು ಹಠಾತ್ ಪ್ರವಾಹ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಯಾವುದೇ ಮುನ್ನೆಚ್ಚರಿಕೆ ಇಲ್ಲದೆಯೇ ಬೆಳಗಿನ ಜಾವಕ್ಕೆ ಮುಂಚೆಯೇ ತೀವ್ರ ಪ್ರವಾಹ ಸಂಭವಿಸಿದೆ ಎಂದು ಕೆರ್ವಿಲ್ಲೆಯ ನಗರ ವ್ಯವಸ್ಥಾಪಕ ಡಾಲ್ಟನ್ ರೈಸ್ ಹೇಳಿದ್ದಾರೆ. ಗ್ವಾಡಾಲುಪೆ ನದಿ ಪ್ರವಾಹ ಹಂತಕ್ಕಿಂತ ವೇಗವಾಗಿ ಏರುತ್ತಿದ್ದಂತೆ ಸ್ಥಳಾಂತರ ಪ್ರಕ್ರಿಯೆ ನಡೆಸಲು ಅವಕಾಶ ಸಿಕ್ಕಿಲ್ಲ ಎಂದು ವರದಿಯಾಗಿದೆ.
