ಮೂಗಿಗೆ ಕೈ ಹಾಕಿ ಸಿಂಬಳ ಒರೆಸಿದ ಎಲಾನ್ ಮಸ್ಕ್ ಮಗ; 145 ವರ್ಷದ ಮೇಜನ್ನೆ ಬದಲಿಸಿದ ಟ್ರಂಪ್!

Date:

Advertisements

ಶ್ವೇತಭವನಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಉದ್ಯಮಿ ಎಲಾನ್‌ ಮಸ್ಕ್ ಅವರ 4 ವರ್ಷದ ಪುತ್ರ ಲಿಟಲ್‌ ಎಕ್ಸ್ ಮೂಗಿನೊಳಗಿಟ್ಟುಕೊಂಡಿದ್ದ ಬೆರಳಿನ ಮೂಲಕ ಟ್ರಂಪ್ ಮೇಜಿಗೆ ಸಿಂಬಳ ಒರೆಸಿದ್ದ ವಿಡಿಯೋ ವೈರಲ್ ಆಗಿತ್ತು. ಈಗ 145 ವರ್ಷ ಹಳೆಯ ಮೇಜನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬದಲಾಯಿಸಿದ್ದಾರೆ.

ಕಳೆದ ವಾರ ಲೈವ್ ಟಿವಿಯಲ್ಲಿ ಎಲಾನ್ ಮಸ್ಕ್ ಅವರ 4 ವರ್ಷದ ಮಗ ಲಿಟಲ್ ಎಕ್ಸ್, ಟ್ರಂಪ್ ಜೊತೆ ಕಚೇರಿಯಲ್ಲಿ ಕೂತಿದ್ದ ಈ ವೇಳೆ ಆತ ಮೂಗಿಗೆ ಕೈ ಹಾಕಿ ಅದನ್ನು ಅಮೆರಿಕನ್ ಅಧ್ಯಕ್ಷರು ಬಳಸುವ ಮೇಜಿಗೆ ಒರೆಸಿದ್ದಾನೆ. ಇದನ್ನು ಗಮನಿಸಿದ ಡೊನಾಲ್ಡ್ ಟ್ರಂಪ್ ಅಸಮಾಧಾನಗೊಂಡು ಆ ಡೆಸ್ಕ್‌ ಅನ್ನೇ ಬದಲಾಯಿಸಿದ್ದಾರೆ ಎನ್ನಲಾಗಿದೆ.

ಟೀಕೆಗಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ಇದೊಂದು ತಾತ್ಕಾಲಿಕ ಬದಲಾವಣೆ ಎಂದಿದ್ದಾರೆ. ಟ್ರಂಪ್ ಜರ್ಮೋಫೋಬ್ (ಕೀಟಾಣುಗಳ ಭಯ) ಸಮಸ್ಯೆ ಹೊಂದಿದ್ದಾರೆ. ಹೀಗಾಗಿಯೇ ಮೇಜನ್ನು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಈ ಮೇಜನ್ನು 1880ರಲ್ಲಿ ವಿಕ್ಟೋರಿಯಾ ರಾಣಿ ಅಂದಿನ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದ್ದರು.

Advertisements

ಬ್ರಿಟಿಷ್ ಆರ್ಕ್ಟಿಕ್ ಪರಿಶೋಧನಾ ಹಡಗು ಹೆಚ್‌ಎಂಎಸ್‌ ರೆಸೊಲ್ಯೂಟ್‌ನಿಂದ ತಯಾರಿಸಲಾದ ರೆಸೊಲ್ಯೂಟ್ ಡೆಸ್ಕ್ ಅನ್ನು 1880 ರಲ್ಲಿ ರಾಣಿ ವಿಕ್ಟೋರಿಯಾ ಅವರು 19ನೇ ಅಮೆರಿಕಾ ಅಧ್ಯಕ್ಷ ರುದರ್‌ಫೋರ್ಡ್ ಹೇ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಐಕಾನಿಕ್ ಡೆಸ್ಕ್ ಅನ್ನು ವೆಸ್ಟ್ ವಿಂಗ್‌ನಲ್ಲಿರುವ ಬಹುತೇಕ ಎಲ್ಲ ಅಮೇರಿಕನ್ ನಾಯಕರು ಬಳಸಿದ್ದಾರೆ. ಇದೀಗ ಈ ಐತಿಹಾಸಿಕ ಹಿನ್ನೆಲೆ ಇರುವ ಟೇಬಲ್ ಅನ್ನು 2ನೇ ಬಾರಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಬದಲಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಷ್ಯಾ ಕಂಪನಿಯ ಬಿಯರ್‌ ಬಾಟಲ್‌ ಮೇಲೆ ಗಾಂಧೀಜಿ ಭಾವಚಿತ್ರ: ಸಾರ್ವಜನಿಕರ ಆಕ್ರೋಶ

ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಹೊಸ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಲು ಎಲಾನ್ ಮಸ್ಕ್ ತನ್ನ ಪುತ್ರನೊಂದಿಗೆ ಓವಲ್ ಕಚೇರಿಗೆ ಬಂದ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ 145 ವರ್ಷಗಳಷ್ಟು ಹಳೆಯದಾದ ಐಕಾನಿಕ್ ರೆಸಲ್ಯೂಟ್ ಡೆಸ್ಕ್ ಅನ್ನು ಓವಲ್ ಕಚೇರಿಯಿಂದ ಹೊರಗೆ ಹಾಕಿ ಜಾರ್ಜ್ ಹೆಚ್‌ಡಬ್ಲ್ಯೂ ಬುಷ್‌ಗೆ ಸೇರಿದ ಸಿ ಅಂಡ್ ಒ ಡೆಸ್ಕ್‌ ಅನ್ನು ಬಳಸುತ್ತಿದ್ದಾರೆ. ಈ ಬದಲಾವಣೆಗೆ ಕಾರಣವನ್ನು ವಿವರಿಸದ ಡೊನಾಲ್ಡ್ ಟ್ರಂಪ್, ‘ಸುಂದರ, ಆದರೆ ತಾತ್ಕಾಲಿಕ ಬದಲಿ’ ಎಂದು ಹೇಳಿದ್ದಾರೆ.

145 ವರ್ಷಗಳಷ್ಟು ಹಳೆಯದಾದ ಐಕಾನಿಕ್ ರೆಸಲ್ಯೂಟ್ ಡೆಸ್ಕ್ ಅನ್ನು ಈ ಹಿಂದೆ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಅವಧಿಯಲ್ಲಿ ಜೋ ಬಿಡೆನ್ ಮತ್ತು ಬರಾಕ್ ಒಬಾಮಾ ಬಳಸುತ್ತಿದ್ದರು. ಇದೀಗ ಐಕಾನಿಕ್ ರೆಸಲ್ಯೂಟ್ ಡೆಸ್ಕ್ ಅನ್ನು ಓವಲ್ ಕಚೇರಿಯಿಂದ ತಾತ್ಕಾಲಿಕವಾಗಿ ತೆಗೆದು ಹಾಕಿ, ಅದರ ಬದಲಿಗೆ ಸಿ ಆಂಡ್ ಒ ಡೆಸ್ಕ್ ಅನ್ನು ಬಳಸಲು ನಿರ್ಧರಿಸಿದ್ದಾರೆ.

‘ಅಮೆರಿಕಾ ಅಧ್ಯಕ್ಷರು ಚುನಾವಣೆಯಲ್ಲಿ ಗೆದ್ದ ನಂತರ 7 ಡೆಸ್ಕ್‌ಗಳಲ್ಲಿ 1 ಆಯ್ಕೆಯನ್ನು ಪಡೆಯುತ್ತಾರೆ’ ಎಂದು ಟ್ರಂಪ್ ಫೆಬ್ರವರಿ 19 ರಂದು ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಅಧ್ಯಕ್ಷ ಜಾರ್ಜ್ ಹೆಚ್‌ಡಬ್ಲ್ಯೂ ಬುಷ್ ಮತ್ತು ಇತರರು ಬಳಸುತ್ತಿದ್ದ ಮತ್ತು ಬಹಳ ಪ್ರಸಿದ್ಧವಾಗಿರುವ ಈ ಡೆಸ್ಕ್, ‘ಸಿ ಅಂಡ್ ಒ’ ಅನ್ನು ತಾತ್ಕಾಲಿಕವಾಗಿ ಶ್ವೇತಭವನದಲ್ಲಿ ಸ್ಥಾಪಿಸಲಾಗಿದೆ, ಆದರೆ ರೆಸಲ್ಯೂಟ್ ಡೆಸ್ಕ್ ಅನ್ನು ಲಘುವಾಗಿ ನವೀಕರಿಸಲಾಗುತ್ತಿದೆ, ಇದು ಬಹಳ ಮುಖ್ಯವಾದ ಕೆಲಸ. ಇದು ಸುಂದರವಾದ, ಆದರೆ ತಾತ್ಕಾಲಿಕ ಬದಲಿಯಾಗಿದೆ’ ಎಂದು ಹೇಳಿದ್ದರು.

2021 ರಲ್ಲಿ ಕೊನೆಗೊಂಡ ತಮ್ಮ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲಿ ನಾಲ್ಕು ವರ್ಷಗಳ ಕಾಲ ಟ್ರಂಪ್ ರೆಸಲ್ಯೂಟ್ ಡೆಸ್ಕ್ ಅನ್ನು ಬಳಸಿದ್ದರು. ಜನವರಿ 20 ರಂದು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಇದನ್ನು ಹಲವು ಬಾರಿ ಬಳಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X