ಮ್ಯಾನ್ಮಾರ್‌ನಿಂದ ಹೊರಟಿದ್ದ ಎರಡು ದೋಣಿಗಳು ನಾಪತ್ತೆ: ಸಮುದ್ರದಲ್ಲಿ 500ಕ್ಕೂ ಹೆಚ್ಚು ರೋಹಿಂಗ್ಯಾಗಳ ಜಲಸಮಾಧಿ ಶಂಕೆ

Date:

ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಆಶ್ರಯ ಅರಸಿ ಹೊರಟಿದ್ದ ಸುಮಾರು 530 ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಸಮುದ್ರದಲ್ಲಿ ನಾಪತ್ತೆಯಾಗಿವೆ. ಜೂನ್ 29 ರಂದು ಪ್ರಯಾಣ ಆರಂಭಿಸಿದ್ದ ಈ ದೋಣಿಗಳ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಸ್ತುತ ಮುಂಗಾರು ಮಳೆಯಿಂದಾಗಿ ಸಮುದ್ರವು ಪ್ರಕ್ಷುಬ್ಧವಾಗಿರುವ ಕಾರಣ ಹಾಗೂ ಹಳೆಯ ಮೀನುಗಾರಿಕಾ ದೋಣಿಗಳಲ್ಲಿ ಮಿತಿಮೀರಿದ ಜನರನ್ನು ತುಂಬಿದ್ದರಿಂದ ಇವೆರಡೂ ದೋಣಿಗಳು ಮುಳುಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಶಂಕಿಸಲಾಗಿದೆ.

- Advertisement -

ಮ್ಯಾನ್ಮಾರ್‌ನ ರಖೈನ್ ಪ್ರಾಂತ್ಯವು ಸೇನೆ ಹಾಗೂ ಅರಾಕನ್ ಆರ್ಮಿ ಬಂಡುಕೋರರ ನಡುವಿನ ಕಾಳಗದಿಂದ ತತ್ತರಿಸಿದ್ದು, ಅಲ್ಲಿ ಸಂಪರ್ಕ ಜಾಲಗಳು ಸಂಪೂರ್ಣ ಕಡಿತಗೊಂಡಿವೆ. ರೋಹಿಂಗ್ಯಾಗಳ ಪರಿಸ್ಥಿತಿ ಸುಧಾರಣೆಗೆ ಶ್ರಮಿಸುತ್ತಿರುವ ‘ಅರಾಕನ್ ಪ್ರಾಜೆಕ್ಟ್’ನ ಕ್ರಿಸ್ ಲೆವಾ ಅವರ ಮಾಹಿತಿಯ ಪ್ರಕಾರ, ಈ ದೋಣಿಗಳು ಜೂನ್ 29 ರಂದು ಸಿನ್ ಟೆಟ್ ಮಾವ್ (Sin Tet Maw) ಗ್ರಾಮದಿಂದ ಮ್ಯಾನ್ಮಾರ್‌ನ ದಕ್ಷಿಣ ಕರಾವಳಿಯತ್ತ ಹೊರಟಿದ್ದವು. ಅಲ್ಲಿಂದ ಕಾಡಿನ ಮಾರ್ಗವಾಗಿ ಥೈಲ್ಯಾಂಡ್ ಮೂಲಕ ಮಲೇಷ್ಯಾ ತಲುಪುವುದು ಇವರ ಉದ್ದೇಶವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಾಮಾನ್ಯವಾಗಿ ಪ್ರಯಾಣ ಆರಂಭಿಸಿದ ವಾರ ಅಥವಾ 10 ದಿನಗಳಲ್ಲಿ ಇವರು ತಮ್ಮ ಕುಟುಂಬಗಳನ್ನು ಸಂಪರ್ಕಿಸುತ್ತಾರೆ. ಆದರೆ ಮೂರು ವಾರ ಕಳೆದರೂ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ನಡುವೆ ಬಾಂಗ್ಲಾದೇಶದ ಕರಾವಳಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇರಾವತಿ ಡೆಲ್ಟಾ ಹಾಗೂ ಮಾನ್ ರಾಜ್ಯದ ಕರಾವಳಿ ಬಳಿ ಮೀನುಗಾರರಿಗೆ ಒಂಬತ್ತು ದಿನಗಳ ಬಳಿಕ ಮತ್ತಷ್ಟು ಮೃತದೇಹಗಳು ಸಿಕ್ಕಿವೆ. ಈ ಅಂಶಗಳು ದೋಣಿಗಳು ಮಾರ್ಗಮಧ್ಯೆಯೇ ಮಗುಚಿಬಿದ್ದಿರುವುದನ್ನು ಪುಷ್ಟೀಕರಿಸುತ್ತಿವೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಸೇನೆಗೆ ಬಲವಂತದ ಸೇರ್ಪಡೆ ಹಾಗೂ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿನ ಶೋಚನೀಯ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ರೋಹಿಂಗ್ಯಾಗಳು ಅಕ್ರಮ ಮಾನವ ಕಳ್ಳಸಾಗಣೆದಾರರ ಮೊರೆಹೋಗುತ್ತಿದ್ದಾರೆ. ಪ್ರತಿಯೊಬ್ಬರಿಂದ 2,000 ದಿಂದ 4,000 ಡಾಲರ್‌ವರೆಗೆ (ಸುಮಾರು 1.5 ರಿಂದ 3 ಲಕ್ಷ ರೂ.) ಹಣ ವಸೂಲಿ ಮಾಡುವ ಕಳ್ಳಸಾಗಣೆದಾರರು, ಯಾವುದೇ ಸುರಕ್ಷತೆ ಇಲ್ಲದೆ ಅಮಾನವೀಯವಾಗಿ ಇವರನ್ನು ದೋಣಿಗಳಲ್ಲಿ ಸಾಗಿಸುತ್ತಾರೆ. ಹಣ ನೀಡದವರನ್ನು ಚಿತ್ರಹಿಂಸೆಗೊಳಪಡಿಸಿದ ಉದಾಹರಣೆಗಳೂ ಇವೆ.

ಮಲೇಷ್ಯಾ ನೌಕಾಪಡೆಯು ಕಣ್ಗಾವಲು ಹೆಚ್ಚಿಸಿರುವುದರಿಂದ, ಕಳ್ಳಸಾಗಣೆದಾರರು ಇದೀಗ ಮತ್ತೆ ಥೈಲ್ಯಾಂಡ್ ಮಾರ್ಗವನ್ನೇ ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗದ (UNHCR) ಅಂದಾಜಿನ ಪ್ರಕಾರ, 2026ರಲ್ಲಿ ಇದುವರೆಗೆ 74 ದೋಣಿಗಳಲ್ಲಿ 4,700 ರೋಹಿಂಗ್ಯಾಗಳು ಸಮುದ್ರದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಆದರೆ, ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈ ಸಂಖ್ಯೆ 10,000 ದಾಟಿರಬಹುದು ಎಂದು ಲೆವಾ ಅಂದಾಜಿಸಿದ್ದಾರೆ. ಸುಭದ್ರ ಬದುಕರಸಿ ಹೊರಟ ನೂರಾರು ಅಮಾಯಕ ಜೀವಗಳು ಇದೀಗ ಕಡಲ ಒಡಲು ಸೇರಿರುವುದು ದುರಂತವೇ ಸರಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...