ಪೆನ್ಸಿಲ್ವೇನಿಯಾದಲ್ಲಿ ಕಾರು ಅಪಘಾತ; ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

Date:

ಲ್ಯಾಂಕಾಸ್ಟರ್ ಕೌಂಟಿಯ ಪೆನ್ಸಿಲ್ವೇನಿಯಾ ಟರ್ನ್‌ಪೈಕ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಈ ವಿದ್ಯಾರ್ಥಿಗಳು ವಾಸವಿದ್ದರು ಎನ್ನಲಾಗಿದೆ.

ಮೃತ ವಿದ್ಯಾರ್ಥಿಗಳನ್ನು 23 ವರ್ಷದ ಸೌರವ್ ಪ್ರಭಾಕರ್ ಮತ್ತು 20 ವರ್ಷದ ಮಾನವ್ ಪಟೇಲ್ ಎಂದು ಗುರುತಿಸಲಾಗಿದೆ. ಮೇ 10ರ ಶನಿವಾರ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಮೃತರ ಗುರುತನ್ನು ಲ್ಯಾಂಕಾಸ್ಟರ್ ಕೌಂಟಿ ಕರೋನರ್ ಕಚೇರಿ ದೃಢಪಡಿಸಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಹಾಗೆಯೇ ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿದೆ.

ಇದನ್ನು ಓದಿದ್ದೀರಾ? ವೀಸಾ ರದ್ದು | ಅಮೆರಿಕದಿಂದ ಸ್ವಯಂ ಗಡಿಪಾರಾದ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಯಾರು?

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪೆನ್ಸಿಲ್ವೇನಿಯಾ ರಾಜ್ಯ ಪೊಲೀಸ್ (ಪಿಎಸ್‌ಪಿ), “ವಾಹನವು ರಸ್ತೆಯನ್ನು ಬಿಟ್ಟು ಮರಕ್ಕೆ ಡಿಕ್ಕಿ ಹೊಡೆದು ಸೇತುವೆಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಧಾವಿಸಿದ ತುರ್ತು ಸಿಬ್ಬಂದಿಗಳು ಪರಿಶೀಲಿಸಿದಾಗ ಚಾಲಕ ಮತ್ತು ಹಿಂಭಾಗದ ಪ್ರಯಾಣಿಕರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಮುಂಭಾಗ ಕುಳಿತಿದ್ದ ಪ್ರಯಾಣಿಕರೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರೀಡಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಹೇಳಿದ್ದಾರೆ.

ಅಪಘಾತದ ಸ್ಥಳವು ಮುಖ್ಯ ರಸ್ತೆಯಿಂದ ಸಂಪೂರ್ಣವಾಗಿ ಹೊರಗಿದೆ. ಆದ್ದರಿಂದಾಗಿ ಸಂಚಾರಕ್ಕೆ ವ್ಯತ್ಯಯವಾಗಿಲ್ಲ. ಪಿಎಸ್‌ಪಿಯ ವಿಧಿವಿಜ್ಞಾನ ಸೇವಾ ಘಟಕವು ತನಿಖೆಗೆ ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಇಬ್ಬರು ಭಾರತೀಯರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಕ್ಲೀವ್‌ಲ್ಯಾಂಡ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ದಾಖಲಾಗಿದ್ದರು ಎಂದು ಹೇಳಿದೆ.

“ಇಬ್ಬರು ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ದುರದೃಷ್ಟಕರ ರಸ್ತೆ ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಇಂತಹ ಸಂದರ್ಭದಲ್ಲಿ ನಾವು ಅವರ ಕುಟುಂಬದೊಂದಿಗೆ ಇದ್ದೇವೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡಲಾಗುವುದು” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸ್ಪೆಷಲ್ | ಇದು ಅಮೆರಿಕ-ಚೀನಾಗಳ ಷಡ್ಯಂತ್ರ; ಭಾರತ-ಪಾಕ್ ಬಲಿಯಾಗದಿರಲಿ

ಯುದ್ಧ- ಪರಿಹಾರವಲ್ಲ, ಸಮಸ್ಯೆ ಎನ್ನುವುದು ಅಮೆರಿಕ ಮತ್ತು ಚೀನಾ ದೇಶಗಳ ನಿಲುವಾಗಿದೆ....

ಭಾರತ-ಪಾಕ್ ಸಂಘರ್ಷ | ಉದ್ವಿಗ್ನತೆ ಶಮನಗೊಳಿಸಲು ಪಾಕ್‌ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ತಾಕೀತು

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ನೆರವು...

ಭಾರತ-ಪಾಕ್ ಸಂಘರ್ಷ | ಬ್ಲ್ಯಾಕೌಟ್‌ ಮತ್ತು ಸೈರನ್‌ಗಳು: ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಆತಂಕದಲ್ಲೇ ರಾತ್ರಿ ಕಳೆದ ಜನ

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಂಜಾಬ್‌ನ ಅಮೃತಸರ, ಪಠಾಣ್‌ಕೋಟ್...

ಪಾಕ್‌ ಮೇಲೆ ಜಲ ದಾಳಿ: ಸಲಾಲ್, ಬಹ್ಲಿಹಾರ್ ಡ್ಯಾಮ್‌ನಿಂದ ನೀರು ಬಿಡುಗಡೆ

ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಿದೆ. ಪಾಕ್‌ ವಿರುದ್ಧ ಜಲ...