ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲುವ ಸಂಚನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಅಲ್ಲದೆ ಅದರಲ್ಲಿ ಭಾರತ ಸರ್ಕಾರವೂ ಭಾಗಿಯಾಗಿದೆ ಎಂದು ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು ಹೆಸರೇಳದ ಮೂಲಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಟೈಮ್ಸ್’ ಇಂದು ವರದಿ ಮಾಡಿದೆ .
ಈ ವರದಿಯ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಪ್ರತಿಭಟನೆಯ ಪರಿಣಾಮವಾಗಿ ಭಾರತವೇ ಸಂಚುಕೋರರಿಂದ ಸಂಚನ್ನು ಕೈಬಿಟ್ಟಿತೆ ಅಥವಾ ಅದನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ವಿಫಲಗೊಳಿಸಲಾಗಿದೆಯೇ ಎಂದು ಮೂಲಗಳು ಹೇಳಲಿಲ್ಲ ಎಂದು ‘ಫೈನಾನ್ಶಿಯಲ್ ಟೈಮ್ಸ್’ ವರದಿಯಲ್ಲಿ ತಿಳಿಸಿದೆ.
ಜೂನ್ನಲ್ಲಿ ವ್ಯಾಂಕೋವರ್ ಉಪನಗರದಲ್ಲಿ ನಡೆದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ನ ಹತ್ಯೆಗೆ ಭಾರತೀಯ ಏಜೆಂಟರು ಕಾರಣ ಎಂದು ಕೆನಡಾ ಪ್ರಧಾನಿ ಗಂಭೀರ ಆರೋಪ ಮಾಡಿದ ಎರಡು ತಿಂಗಳ ನಂತರ ಈ ವರದಿ ಬಂದಿದೆ.
ಭಾರತವು ಕೆನಡಾದ ಆರೋಪಗಳನ್ನು ತಿರಸ್ಕರಿಸಿ “ರಾಜಕೀಯ ಪ್ರೇರಿತ” ಮತ್ತು “ಅಸಂಬದ್ಧ” ಎಂದು ತಿರುಗೇಟು ನೀಡಿತ್ತು.
ಭಾರತಕ್ಕೆ ರಾಜತಾಂತ್ರಿಕ ಎಚ್ಚರಿಕೆಯ ಹೊರತಾಗಿ, ಅಮೆರಿಕ ಫೆಡರಲ್ ಪ್ರಾಸಿಕ್ಯೂಟರ್ಗಳು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ ಒಬ್ಬ ಶಂಕಿತನ ವಿರುದ್ಧ ಮೊಹರು ಮಾಡಿದ ದೋಷಾರೋಪಣೆಯನ್ನು ಸಹ ಸಲ್ಲಿಸಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ
ಗುರುಪತ್ವಂತ್ ಸಿಂಗ್ ಪನ್ನುನ್ ವಿಫಲ ಸಂಚಿನಿಂದ ಬಚಾವಾದ ಸಿಖ್ ಪ್ರತ್ಯೇಕತಾವಾದಿ ಎಂದು ಪತ್ರಿಕೆ ತಿಳಿಸಿದೆ
ಈ ಸಂಚಿನ ಬಗ್ಗೆ ಅಮೆರಿಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆಯೇ ಎಂದು ಹೇಳಲು ಪನ್ನುನ್ ನಿರಾಕರಿಸಿದ್ದಾರೆ ಎಂದು ಪತ್ರಿಕೆ ವರದಿ ತಿಳಿಸಿದೆ. ಆದರೆ “ಭಾರತೀಯ ಏಜಂಟರಿಂದ ಅಮೆರಿಕದ ನೆಲದಲ್ಲಿ ನನ್ನ ಜೀವಕ್ಕೆ ಬೆದರಿಕೆಯ ವಿಷಯಕ್ಕೆ ಅಮೆರಿಕ ಸರ್ಕಾರವು ಪ್ರತಿಕ್ರಿಯಿಸಲು ಅವಕಾಶ ನೀಡುತ್ತೇನೆ” ಎಂದು ಅವರು ಉಲ್ಲೇಖಿಸಿದ್ದಾರೆ.
ಪನ್ನೂನ್, ನಿಜ್ಜರ್ ಅವರಂತೆ, ದಶಕಗಳ ಕಾಲದ ಸಿಖ್ ಪ್ರತ್ಯೇಕತಾವಾದಿ ಪ್ರತಿಪಾದಕರಾಗಿದ್ದಾನೆ. ಆದರೆ ಈಗ ಖಲಿಸ್ತಾನ್ ಎಂಬ ಹೆಸರಿನ ಸ್ವತಂತ್ರ ಸಿಖ್ ಸಂಘಟನೆಯೊಂದಿಗೆ ಭಾರತದಿಂದ ಪ್ರತ್ಯೇಕ ದೇಶಕ್ಕೆ ಬೇಡಿಕೆಯಿಟ್ಟಿದ್ದಾನೆ.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಸಂಭಾವ್ಯವಾಗಿ ಭಾಗಿಯಾಗಿದ್ದಾರೆ ಎಂದು ಅಮೆರಿಕಕ್ಕೆ ಕೆನಡಾ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಈ ಬಗ್ಗೆ ಕೆನಡಾ ಸರ್ಕಾರದ ಪ್ರಮುಖ ಮೂಲವು ಸೆಪ್ಟೆಂಬರ್ನಲ್ಲಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗೆ ತಿಳಿಸಿತ್ತು.
ಫೈನಾನ್ಷಿಯಲ್ ಟೈಮ್ಸ್ ವರದಿಯು ಕೆನಡಾ ಆರೋಪದ ನಂತರ ಅಮೆರಿಕ ವಿಫಲವಾದ ಸಂಚಿನ ವಿವರಗಳನ್ನು ಮಿತ್ರರಾಷ್ಟ್ರಗಳ ವ್ಯಾಪಕ ಗುಂಪಿನೊಂದಿಗೆ ಹಂಚಿಕೊಂಡಿದೆ ಎಂದು ಉಲ್ಲೇಖಿಸಿದೆ.