ಉಕ್ರೇನ್ ಯುದ್ಧದ ಬಗ್ಗೆ ವರದಿ ಮಾಡುತ್ತಿದ್ದ ರಾಯಿಟರ್ಸ್ ಸುದ್ದಿ ಸಂಸ್ಥೆ ಸುರಕ್ಷತಾ ಸಲಹೆಗಾರ ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ಹೋಟೆಲ್ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯ ವೇಳೆ ಸಾವನ್ನಪ್ಪಿದ್ದಾರೆ.
ಮೃತ ವರದಿಗಾರ ರಿಯಾನ್ ಇವಾನ್ಸ್ ರಷ್ಯಾದ ದಾಳಿಯಿಂದ ಮೃತರಾದರೆ ಇನ್ನಿಬ್ಬರು ರಾಯಿಟರ್ಸ್ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಭಾನುವಾರ ತಿಳಿಸಿದೆ. ಇವಾನ್ಸ್ ಏಜೆನ್ಸಿಯ ಸುರಕ್ಷತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಆರು ಜನರ ತಂಡದ ಜೊತೆ ಹೋಟೆಲ್ ಸಫೈರ್‌ನಲ್ಲಿ ಇವಾನ್ಸ್ ತಂಗಿದ್ದರು. ಇದೇ ಹೋಟೆಲ್‌ಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು ಇವಾನ್ಸ್ ಮೃತರಾಗಿದ್ದಾರೆ ಎಂದು ರಾಯಿಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ರಷ್ಯಾ ಉಕ್ರೇನ್ ಯುದ್ಧ: ರಷ್ಯಾ ಸೇನಾ ಶಿಬಿರದಲ್ಲಿದ್ದ ಭಾರತೀಯ ಶೆಲ್ ದಾಳಿಗೆ ಬಲಿ
ಏಜೆನ್ಸಿಯ ಇಬ್ಬರು ಪತ್ರಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
“ನಾವು ದಾಳಿಯ ಕುರಿತು ಹೆಚ್ಚಿನ ಮಾಹಿತಿಯನ್ನು ತುರ್ತಾಗಿ ಕಲೆಹಾಕುತ್ತಿದ್ದೇವೆ. ನಾವು ನಮ್ಮ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸುತ್ತಿದ್ದೇವೆ” ಎಂದು ರಾಯಿಟರ್ಸ್ ಹೇಳಿದೆ.
38 ವರ್ಷದ ಇವಾನ್ಸ್ ಮಾಜಿ ಬ್ರಿಟಿಷ್ ಸೈನಿಕ ಆಗಿದ್ದು, 2022ರಿಂದ ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಉಕ್ರೇನ್, ಇಸ್ರೇಲ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ವಿಶ್ವದಾದ್ಯಂತ ಸುರಕ್ಷತೆಯ ಕುರಿತು ಅದರ ಪತ್ರಕರ್ತರಿಗೆ ಇವಾನ್ಸ್ ಸಲಹೆ ನೀಡಿದ್ದರು.
Reuters safety adviser Ryan Evans was killed in a strike on a hotel in the eastern Ukrainian city of Kramatorsk https://t.co/n1m3aY3x4d pic.twitter.com/4rfozcgNLx
— Reuters (@Reuters) August 26, 2024