ಅದಾನಿ ಗ್ರೂಪ್ ಸೇರಿದಂತೆ ವಿಶ್ವದ ಹಲವಾರು ಉದ್ಯಮಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದ ಅಮೆರಿಕ ಮೂಲದ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವುದಾಗಿ ಸಂಸ್ಥಾಪಕ ನಾಥನ್ ಆಂಡರ್ಸನ್ ತಿಳಿಸಿದ್ದಾರೆ.
ಈ ಬಗ್ಗೆ ಹಿಂಡೆನ್ ಬರ್ಗ್ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿರುವ ನಾಥನ್ ಆಂಡರ್ಸನ್, ಕಳೆದ ಒಂದು ವರ್ಷದಿಂದ ನನ್ನ ಕುಟುಂಬ, ನನ್ನ ಸ್ನೇಹಿತರು ಹಾಗೂ ತಂಡದೊಂದಿಗೆ ಹಂಚಿಕೊಂಡಿಂತೆ ನಾನು ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆಯನ್ನು ವಿಸರ್ಜಿಸುವ ನಿರ್ಧಾರವನ್ನು ಕೈಗೊಂಡಿದ್ದೇನೆ. ನಾವು ಅಂದುಕೊಂಡ ಕಾರ್ಯಕ್ರಮಗಳನ್ನು ಪೂರ್ಣಗೊಳಿದ ನಂತರ ಸಂಸ್ಥೆಯನ್ನು ಮುಚ್ಚುವ ಯೋಜನೆ ಕೈಗೊಂಡಿದ್ದೇವೆ. ನಿಯಂತ್ರಕಗಳಿಗೆ ಹಂಚಿಕೊಂಡಂತೆ ಪೋಜಿ ಪ್ರಕರಣಗಳು ಕೊನೆಯದಾಗಿದ್ದು, ನಾವು ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
“ಸಂಸ್ಥೆಯನ್ನು ಸ್ಥಗಿತಗೊಳಿಸುವುದಕ್ಕೆ ನಿರ್ದಿಷ್ಟ ಬೆದರಿಕೆ, ಆರೋಗ್ಯ ಕಾರಣಗಳು ಹಾಗೂ ದೊಡ್ಡ ವೈಯಕ್ತಿಕ ಕಾರಣಗಳು ಒಳಗೊಂಡಂತೆ ಯಾವುದೇ ಕಾರಣಗಳಿಲ್ಲ. ಆರಂಭದಲ್ಲಿ ನಾನು ಕೆಲವು ವಿಷಯಗಳನ್ನು ಸಾಬೀತುಪಡಿಸಬೇಕು ಎಂದು ನಾನು ಭಾವಿಸಿದೆ. ಅಂತಿಮವಾಗಿ ನನ್ನಲ್ಲಿ ನಾನು ಒಂದಿಷ್ಟು ಸುರಕ್ಷತೆಯನ್ನು ಕಂಡುಕೊಂಡಿದ್ದು, ಬಹುಷಃ ಇದು ನನ್ನ ಜೀವನದಲ್ಲಿ ಮೊದಲ ಬಾರಿಯಾಗಿದೆ” ಎಂದು ನಾಥನ್ ಆಂಡರ್ಸನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯವರು ಗಳಿಸಿದ ಡಿಗ್ರಿಗಳು ಮತ್ತು ಮಾಹಿತಿ ಹಕ್ಕು ಎಂಬ ತುಕ್ಕು ಹಿಡಿದ ಹತಾರು
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ನಡೆದ ಈ ಬೆಳವಣಿಗೆಗೆ ಯಾವುದೇ ಕಾರಣಗಳು ಇಲ್ಲವೆಂದು ಆಂಡರ್ಸನ್ ಸ್ಪಷ್ಟಪಡಿಸಿದ್ದಾರೆ.
ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಅದಾನಿ ಸಮೂಹದ ಸಾಗರೋತ್ತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯ ಇತ್ತೀಚೆಗೆ ಆರೋಪಿಸಿತ್ತು. ಈ ಆರೋಪ ಭಾರತದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
