ಅಮೆರಿಕ ದ ಅಟ್ಲಾಂಟದ ಎಮೊರಿ ವಿವಿಯಲ್ಲಿ ಪ್ಯಾಲೆಸ್ಟೀನ್ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸ್ಥಳೀಯ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ. ಮಹಿಳಾ ಪ್ರಾಧ್ಯಾಪಕರೊಬ್ಬರನ್ನು ಒಬ್ಬ ಪೊಲೀಸ್ ಕೆಳಕ್ಕೆ ಬೀಳಿಸಿದರೆ, ಮತ್ತಿಬ್ಬರು ಅಧಿಕಾರಿಗಳು ಅವರ ಕೈಯನ್ನು ಹಿಂದಕ್ಕೆ ಕಟ್ಟಿ ಬೇಡಿ ತೊಡಿಸಿದರು.
ಹಾರ್ವಡ್, ಯೇಲ್ ಸೇರಿದಂತೆ ಅಮೆರಿಕದ ಪ್ರಮುಖ ವಿವಿ ಕ್ಯಾಂಪಸ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಗಾಜಾದಲ್ಲಿ ಅಮಾಯಕ ಪ್ಯಾಲೆಸ್ಟೀನ್ ನಾಗರಿಕರ ಮೇಲೆ ಇಸ್ರೇಲ್ ಪಡೆ ನಡೆಸುತ್ತಿರುವ ದಾಳಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ವಾರ ನ್ಯೂಯಾರ್ಕ್ನ ಕೊಲಂಬಿಯಾ ವಿವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 100 ಮಂದಿಯನ್ನು ಬಂಧಿಸಲಾಗಿತ್ತು.
ಏ.25 ರಂದು ಜಾರ್ಜಿಯ ಪೊಲೀಸರು ಅರ್ಥಶಾಸ್ತ್ರದ ಪ್ರಾಧ್ಯಾಪಕ ಕರೊಲೈನ್ ಫೊಲಿನ್ ಒಳಗೊಂಡು 28 ಮಂದಿಯನ್ನು ಬಂಧಿಸಿದ್ದರು. ಪ್ರತಿಭಟನಾನಿರತ ಸಂಘಟನೆಗಳು ಪೊಲೀಸರ ಕ್ರೌರ್ಯವನ್ನು ‘ಭಯೋತ್ಪಾದನೆಯ ಕೃತ್ಯ’ ಎಂದು ಆರೋಪಿಸಿವೆ.
ಅರ್ಥಶಾಸ್ತ್ರದ ಪ್ರಾಧ್ಯಾಪಕ ಕರೊಲೈನ್ ಅವರನ್ನು ಅಮಾನುಷವಾಗಿ ನಡೆಸಿಕೊಂಡ ರೀತಿಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿವೆ. ತಾನು ಪ್ರಾಧ್ಯಾಪಕಿ ಎಂದು ಹೇಳಿದರೂ ಕರೊಲೈನ್ ಅವರನ್ನು ಪೊಲೀಸರು ನೆಲಕ್ಕೆ ಬೀಳಿಸಿ ಬೇಡಿ ತೊಡಿಸಿ ಅಮಾನುಷವಾಗಿ ವರ್ತಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಈ ನಡುವೆ ಎಮೊರಿ ವಿವಿಯ ತತ್ವಶಾಸ್ತ್ರ ಪ್ರಾಧ್ಯಪಕಿ ನೊಯೊಲ್ಲೆ ಮೆಕ್ಕಾಫಿ ಅವರನ್ನು ಕೂಡ ಬಂಧಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
“ಜಾರ್ಜಿಯಾ ಸ್ಟೇಟ್ ಪ್ಯಾಟ್ರೋಲ್, ಅಟ್ಲಂಟಾ ಪೊಲೀಸ್ ಡಿಪಾರ್ಟ್ಮೆಂಟ್ ಹಾಗೂ ಎಮೊರಿ ಪೊಲೀಸ್ ಡಿಪಾರ್ಟ್ಮೆಂಟ್ ಭಯೋತ್ಪಾದನ ರೀತಿಯ ಕೃತ್ಯಕ್ಕೆ ಎಲ್ಲ ರೀತಿಯ ಜವಾಬ್ದಾರಿದಾರರು” ಎಂದು ಎಮೊರಿ ವಿವಿಯ ಪ್ರತಿಭಟನಾನಿರತ ಸಂಘಟನೆಗಳು ಪ್ರಕಟಣೆಯನ್ನು ಹೊರಡಿಸಿದೆ.
ಪ್ಯಾಲೆಸ್ಟೇನ್ ಮೇಲೆ ಇಸ್ರೇಲ್ ಪಡೆ ನಡೆಸುತ್ತಿರುವ ದಾಳಿಯ ವಿರುದ್ಧ ಎಮೋರಿ ವಿವಿ ಪ್ರತಿಭಟನೆಯನ್ನು ಮುಂದುವರೆಸಿದ್ದು, ಕ್ರೂರವಾಗಿ ವರ್ತಿಸಿ ಬಂಧಿಸಲಾಗಿರುವ ಎಲ್ಲ ಚಳುವಳಿಗಾರರನ್ನು ಪೊಲೀಸರು ತಕ್ಷಣ ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸುದ್ದಿ ಮಾಧ್ಯಮಗಳ ಪ್ರಕಾರ ಕಳೆದ ಒಂದು ವಾರದಲ್ಲಿ ಸರಿಸುಮಾರು 550ಕ್ಕೂ ಹೆಚ್ಚು ಮಂದಿಯನ್ನು ಅಮೆರಿಕಾದ ವಿವಿಧ ವಿವಿ ಕ್ಯಾಂಪಸ್ಗಳಿಂದ ಬಂಧಿಸಲಾಗಿದೆ.
ಅಮೆರಿಕ ಇಸ್ರೇಲ್ ಸೇನೆಗೆ ಬಿಡುಗಡೆ ಮಾಡಿರುವ ಸೇನಾ ಆರ್ಥಿಕ ನೆರವನ್ನು ಕಡಿತಗೊಳಿಸುವುದು ಹಾಗೂ ಇಸ್ರೇಲ್ ಪಡೆಗಳು ಗಾಜಾದಲ್ಲಿ ದಾಳಿಯನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರ ಆಗ್ರಹವಾಗಿದೆ.
Emory University economics professor Caroline Fohlin refused to comply with Georgia police yesterday when they arrested her.
Fohlin tried to get out of it by saying, “I’m a professor.”
No one is above the law.pic.twitter.com/mMnOlSApRJ
— Paul A. Szypula 🇺🇸 (@Bubblebathgirl) April 26, 2024
