ಭಾರತ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಸಂಬಂಧಿಗಳ ನಡುವಿನ ವಿವಾಹ ನಿಶ್ಚಯವಾಗಿದ್ದರೂ, ವೀಸಾ ಸಿಗದ ಹಿನ್ನೆಲೆ ವರ ಪಾಕಿಸ್ತಾನಕ್ಕೆ ತೆರಳಲಾಗಿಲ್ಲ. ಹೀಗಾಗಿ, ಭಾರತದ ವರ ಮತ್ತು ಪಾಕಿಸ್ತಾನದ ವಧು ಆನ್‌ಲೈನ್‌ನಲ್ಲೇ ವಿವಾಹವಾಗಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜೌನ್‌ಪುರದ ಬಿಜೆಪಿ ಕಾರ್ಪೋರೇಟರ್ ತೆಹಸಿನ್ ಶಾಹಿದ್ ಅವರ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಪಾಕಿಸ್ತಾನದ ಲಾಹೋರ್‌ನಲ್ಲಿ ನಲೆಸಿರುವ ಯುವತಿ ಅಂದಲೀಬ್ ಜಹಾರ ಅವರಿಗೆ ವಿವಾಹ ನಿಶ್ಚಯವಾಗಿತ್ತು.
ಮಧು ಅಂದಲೀಬ್ ಜಹಾರ ಅವರು ಬಿಜೆಪಿ ಕಾರ್ಪೋರೇಟರ್ ತೆಹಸಿನ್ ಶಾಹಿದ್ ಅವರ ಸಂಬಂಧಿಯೇ ಆಗಿದ್ದಾರೆ. ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರು ತಾವಿದ್ದಂತೆಯೇ ತಮ್ಮ ಮಗಳ ಮದುವೆ ಮಾಡಬೇಕೆಂಬ ಬಯಕೆ ಹೊಂದಿದ್ದರು. ಹೀಗಾಗಿ, ಶುಕ್ರವಾರ ವಿವಾಹ ನಿಶ್ಚಯಿಸಲಾಗಿತ್ತು.
ಆದರೆ, ಆದರೆ, ರಾಜತಾಂತ್ರಿಕ ಬಿಕ್ಕಟ್ಟುಗಳಂತಹ ಕಾರಣಗಳಿಂದಾಗಿ ವರನಿಗೆ ಪಾಕಿಸ್ತಾನಕ್ಕೆ ತೆರಳಲು ವೀಸಾ ಸಿಗುವುದು ತಡವಾಗಿದೆ. ಪರಿಣಾಮ ಇಬ್ಬರೂ ಅನ್‌ಲೈನ್‌ನಲ್ಲಿಯೇ ವಿವಾಹವಾಗಿದ್ದಾರೆ. ವಧು-ವರರ ಕುಟುಂಬಸ್ಥರು, ಸಂಬಂಧಿಗಳು ಆನ್‌ಲೈನ್ ಮೂಲಕವೇ ಇಬ್ಬರಿಗೂ ವಿವಾಹ ಮಾಡಿದ್ದಾರೆ. ಆನ್‌ಲೈನ್ ವಿವಾಹ ಸಮಾರಂಭಕ್ಕೆ ಜಿಲ್ಲೆಯ ಬಿಜೆಪಿ ನಾಯಕರೂ ಭಾಗಿದ್ದರು ಎಂದು ವರದಿಯಾಘಿದೆ.
ಪಾಕಿಸ್ತಾನ ಯುವತಿಯನ್ನು ವಿವಾಹವಾಗಿರುವ ಹೈದರ್, ತಮ್ಮ ಪತ್ನಿ ಭಾರತಕ್ಕೆ ಬರಲು ತ್ವರಿತವಾಗಿ ವೀಸಾ ಒದಗಿಸಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದ್ದಾರೆ.