ಜಾಗತಿಕ ಆರ್ಥಿಕ ಹಿಂಜರಿತ ಭೀತಿಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿವೆ. ಸುಂಕ ಹೆಚ್ಚಳದಿಂದ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ನಂತರ ದ್ಯತ್ಯ ಕಂಪನಿಗಳ ಷೇರುಗಳು ಕುಸಿಯತೊಡಗಿವೆ.
ಎಸ್‌ಅಂಡ್‌ಪಿ 500 ಅಂಕಗಳು, ಡೋ ಜೋನ್ಸ್ 890.01 ಅಂಕಗಳು ಹಾಗೂ ನಾಸ್ದಾಕ್ ನೊಸೆದಿವೆಡ್ ಶೇ 4 ರಷ್ಟು ಕುಸಿದಿದೆ. ವಿಶ್ವದ ಶ್ರೀಮಂತ ಕಂಪನಿಗಳಾದ ಮೈಕ್ರೊಸಾಫ್ಟ್, ಟೆಲ್ಸಾ, ಫೇಸ್‌ಬುಕ್ ಒಡೆತನದ ಮೆಟಾ, ಗೂಗಲ್ ಮಾಲೀಕತ್ವದ ಆಲ್ಫಾಬೆಟ್ ಕಂಪನಿಯ ಷೇರುಗಳು ಶೇ 4 ರಿಂದ 11 ರಷ್ಟು ಇಳಿಕೆಯಾಗಿವೆ.
ಚೀನಾ, ಕೆನಡಾ, ಮೆಕ್ಸಿಕೊ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕ ವಿಧಿಸುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದರು. ನ್ಯೂಯಾರ್ಕ್‌ನಲ್ಲಿ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ನಾಸ್ದಾಕ್ 2022ರ ನಂತರ ಭಾರಿ ಕುಸಿತ ಕಂಡಿದೆ.
ಎಸ್‌ಅಂಡ್‌ಪಿ 500 ಅಂಕಗಳ ಇಳಿಕೆ ಕಳೆದ ಒಂದು ತಿಂಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಡೋ ಜಾನ್ಸ್ ಕಂಪನಿಯ ಷೇರುಗಳು ಶೇ 2 ರಷ್ಟು ಕುಸಿದಿರುವುದು ಕಳೆದ 4 ತಿಂಗಳಲ್ಲಿ ಅತಿ ಕಡಿಮೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪರೇಶ್ ಮೇಸ್ತಾ ಟು ಫರಂಗಿಪೇಟೆ- ಸಂಘಪರಿವಾರದ ಪಿತೂರಿ ಬಯಲು!
ಭಾರತದ ಷೇರು ಮಾರುಕಟ್ಟೆಗೂ ಆತಂಕ
ಅಮೆರಿಕದ ಷೇರು ಮಾರುಕಟ್ಟೆಗಳು ಕುಸಿದಗೊಂಡಿರುವುದರಿಂದ ಇದರ ಪರಿಣಾಮ ಯೂರೋಪ್, ಏಷ್ಯಾ ಹಾಗೂ ಭಾರತದ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಲಿದೆ. ಯುರೋಪಿಯನ್ ಮಾರುಕಟ್ಟೆಗಳಿಗೆ ಈಗಾಗಲೇ ಹೊಡೆತ ಬಿದ್ದಿವೆ. ಏಷ್ಯಾದ ಮಾರುಕಟ್ಟೆಗಳಿಗೆ ಇದರ ಅಪಾಯ ತಟ್ಟಲಿದೆ. ವಿಶೇಷವಾಗಿ ವ್ಯವಹಾರಕ್ಕಾಗಿ ಅಮೆರಿಕವನ್ನು ಅವಲಂಬಿಸಿರುವ ಮಾಹಿತಿ ತಂತ್ರಜ್ಞಾನದ ಷೇರುಗಳು ಭಾರತದ ದಲಾಲ್ ಸ್ಟ್ರೀಟ್‌ನಲ್ಲಿ ಪರಿಣಾಮ ಉಂಟುಮಾಡಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಭಾರತದಲ್ಲಿ ಹಿಡಿತ ಸಾಧಿಸಿರುವುದರಿಂದ, ಎಲ್ಲರ ಕಣ್ಣುಗಳು ಅವರ ಮುಂದಿನ ನಡೆಯ ಮೇಲೆ ಇರುತ್ತವೆ. ಅವರು ದೊಡ್ಡ ಪ್ರಮಾಣದಲ್ಲಿ ಹಣವನ್ನು ಹಿಂತೆಗೆದುಕೊಳ್ಳುವುದನ್ನು ಮುಂದುವರಿಸಿದರೆ, ಮುಂಬರುವ ಅವಧಿಗಳಲ್ಲಿ ಹೂಡಿಕೆದಾರರು ತೀವ್ರ ಏರಿಳಿತವನ್ನು ನಿರೀಕ್ಷಿಸಬಹುದು.
ದಲಾಲ್ ಸ್ಟ್ರೀಟ್‌ನಲ್ಲಿ ಸೋಮವಾರದ ವಹಿವಾಟು ಸಕಾರಾತ್ಮಕವಾಗಿ ಆರಂಭವಾದರೂ ನಿರಾಶೆಯೊಂದಿಗೆ ಕೊನೆಗೊಂಡಿತು . ನಿಫ್ಟಿ ಶೇ. 50 0.41 ನಷ್ಟು ಕುಸಿದು 22,460.30 ಕ್ಕೆ ಮುಕ್ತಾಯವಾಯಿತು ಮತ್ತು ಸೆನ್ಸೆಕ್ಸ್ ಕೂಡ ಕಳಪೆ ಪ್ರದರ್ಶನ ತೋರಿತು. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಶೇ. 1.8 ಮತ್ತು 2.4 ನಡುವೆ ಕುಸಿದವು.
