ಇರಾನ್-ಇಸ್ರೇಲ್ ಸಂಘರ್ಷ ಶುರುವಾಗಿದ್ದು ಎಲ್ಲಿಂದ? ಇತಿಹಾಸದ ಹಿನ್ನೋಟ!

Date:

Advertisements

ಕಳೆದ ವಾರ, ಜೂನ್ 13ರಂದು ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದ ಇರಾನ್‌ನಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯು ಇರಾನ್‌ನ ಪರಮಾಣು ನೆಲೆಯನ್ನು ಗುರಿಯಾಗಿಸಿಕೊಂಡಿತ್ತು ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಮೇಲೆ ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಇಸ್ರೇಲ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ, ಇಸ್ರೇಲ್‌ನ ದಮನಕಾರಿ ಆಕ್ರಮಣ, ನಿಲುವುಗಳನ್ನು ಪ್ರಬಲವಾಗಿ ವಿರೋಧಿಸುವ ಅತಿದೊಡ್ಡ ಶಕ್ತಿ ಇರಾನ್ ಮಾತ್ರವೇ ಆಗಿದೆ. ಸುಮಾರು 2 ವರ್ಷಗಳ ಕಾಲ ಪ್ಯಾಲೆಸ್ತೀನ್ ಮೇಲೆ ಆಕ್ರಮಣ ಮತ್ತು ನರಮೇಧ ನಡೆಸಿರುವ ಇಸ್ರೇಲ್ ವಿರುದ್ಧ ಅರಬ್ ರಾಷ್ಟ್ರವಲ್ಲದ ಶಕ್ತಿಯೊಂದು ಎದ್ದು ನಿಂತಿದೆ. ಇರಾನ್‌ನ ಪ್ರತಿದಾಳಿಯಿಂದ ಇಸ್ರೇಲ್‌ ತತ್ತರಿಸಿಹೋಗಿದೆ. ಸದ್ಯಕ್ಕೆ, ಉಭಯ ರಾಷ್ಟ್ರಗಳ ನಡುವಿನ ಸಂಘರ್ಷವು 1979ರ ಇರಾನ್‌ ಕ್ರಾಂತಿಯ ಸಂದರ್ಭವನ್ನು ನೆನಪಿಸುತ್ತಿವೆ.

1979ಕ್ಕೂ ಮೊದಲು, ಇರಾನ್ ಮತ್ತು ಇಸ್ರೇಲ್ ಅತ್ಯುತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದವು. ಇರಾನ್‌ನ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಆಡಳಿತದಲ್ಲಿ ಇರಾನ್ ಅಮೆರಿಕ ಮತ್ತು ಯುಕೆಯ ಮಿತ್ರರಾಷ್ಟ್ರವಾಗಿತ್ತು. ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳು ಅರಬ್ ರಾಷ್ಟ್ರಗಳ ಧೋರಣೆ ಮತ್ತು ಮಧ್ಯಪ್ರಾಚ್ಯದಲ್ಲಿ ಸೋವಿಯತ್‌ನ ಪ್ರಭವವನ್ನು ಎದುರಿಸಲು ಒಗ್ಗಟ್ಟಿನ ಕಾರ್ಯತಂತ್ರದಲ್ಲಿ ಜೊತೆಯಾಗಿದ್ದವು. ಇದು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿತ್ತು. ಎರಡು ರಾಷ್ಟ್ರಗಳು ತೈಲ ರಫ್ತು ಮತ್ತು ಗುಪ್ತಚರ ಮಾಹಿತಿ ಹಂಚಿಕೆ ಸೇರಿದಂತೆ ಅನೇಕ ಆರ್ಥಿಕ ಮತ್ತು ಮಿಲಿಟರಿ ಉದ್ಯಮಗಳಲ್ಲಿ ಸಹಭಾಗಿಯಾಗಿದ್ದವು. ಆದರೆ, 1979ರಲ್ಲಿ ಈ ಸಂಬಂಧ ಕಳಚಿಬಿದ್ದಿತು.

Advertisements

1979ರ ಇರಾನ್ ಕಾಂತ್ರಿಯು ಇರಾನ್‌ನಲ್ಲಿ ಆಯತೊಲ್ಲಾ ಖೊಮೇನಿ ನೇತೃತ್ವದ ಧಾರ್ಮಿಕ ಆಡಳಿತವನ್ನು ಜಾರಿಗೆ ತಂದಿತು. ಖೊಮೇನಿ ಅವರು ತೀವ್ರ ಝಿಯಾನ್ ವಿರೋಧಿಯಾಗಿದ್ದರು. ಅವರು ಇಸ್ರೇಲ್‌ಅನ್ನು ಕಾನೂನುಬಾಹಿರ ರಾಷ್ಟ್ರವೆಂದು ಘೋಷಿಸಿದರು. ಇಸ್ರೇಲ್ ತಮ್ಮ ಮುಸ್ಲಿಂ ಸಹೋದರರಿಗೆ (ಪ್ಯಾಲೆಸ್ತೀನಿಯರು) ಸೇರಿದ ಭೂಮಿಯನ್ನು ಕದ್ದಿದೆ ಎಂದು ಆರೋಪಿಸಿದರು. ಖೊಮೇನಿ ಅವರು ತಮ್ಮ ಆಡಳಿತದ ಮೊಲದ ಕ್ರಮವಾಗಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿದರು.

ಈ ಲೇಖನ ಓದಿದ್ದೀರಾ?: ಇರಾನ್‌ನೊಂದಿಗೆ ಅಕ್ರಮ ಯುದ್ಧ ಆರಂಭಿಸಿ, ನಿಲ್ಲಿಸಲು ತಿಳಿಯದೆ ಅಮೆರಿಕ ಸಹಾಯ ಕೇಳುತ್ತಿದೆಯೇ ಇಸ್ರೇಲ್?

1982ರಲ್ಲಿ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದ ಸಮಯದಲ್ಲಿ ಹಿಜ್ಬುಲ್ಲಾ ಸಂಘಟನೆ ಸ್ಥಾಪನೆಯಾಯಿತು. ಇಸ್ರೇಲ್‌ ವಿರುದ್ಧದ ಕಾರ್ಯತಂತ್ರದಲ್ಲಿ ಹಿಜ್ಬುಲ್ಲಾ ಅವರನ್ನು ಪರೋಕ್ಷವಾಗಿ ಇರಾನ್‌ ಬೆಂಬಲಿಸಿತು. ಹಿಜ್ಬುಲ್ಲಾಗೆ ಆರ್ಥಿಕ ಮತ್ತು ತರಬೇತಿಯ ಬೆಂಬಲವನ್ನು ಇರಾನ್ ಒದಗಿಸಿತು.

ಅಂದಿನಿಂದ ಈವರೆಗೆ ಇಸ್ರೇಲ್-ಇರಾನ್ ನಡುವೆ ಆಗ್ಗಾಗ್ಗೆ ಸಂಘರ್ಷ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ಅನ್ನು ಎದುರಿಸಬಹುದಾದ ಅತಿ ದೊಡ್ಡ ಶಕ್ತಿಯಲ್ಲಿ ಇರಾನ್ ನಿಂತಿದೆ. ಅಲ್ಲದೆ, ಎರಡೂ ರಾಷ್ಟ್ರಗಳು ಅಘೋಷಿತ ಪರಮಾಣ ಶಕ್ತಿಗಳಾಗಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X