ಇಸ್ರೇಲ್‌ನ ಜೆರುಸಲೇಮ್‌ನಲ್ಲಿ ಭಾರೀ ಕಾಡ್ಗಿಚ್ಚು ಸಂಭವಿಸಿದ್ದು, ತೀವ್ರ ಬಿಸಿಲು ಹಾಗೂ ಗಾಳಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿಗಳಿಗೂ ಬೆಂಕಿ ವ್ಯಾಪಿಸುತ್ತಿದ್ದು, ಜನರು ತಮ್ಮ ಸ್ವಂತ ವಾಹನಗಳನ್ನು ಹೆದ್ದಾರಿಯಲ್ಲೇ ಬಿಟ್ಟು ಜೀವ ರಕ್ಷಿಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.
ಸುಮಾರು 200ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಶ್ರಮದಲ್ಲಿದೆ. ಹಾಗೆಯೇ 12ಕ್ಕೂ ಹೆಚ್ಚು ಏರ್ ಕ್ರಾಫ್ಟ್‌ಗಳು ಕೂಡ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ. ಎರಡನೇ ದಿನವೂ ಬೆಂಕಿಯನ್ನು ಸಂಪೂರ್ಣ ನಂದಿಸುವ ಸಾಧ್ಯವಾಗಿಲ್ಲ ಮತ್ತು ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.
A major highway in Israel was closed after wildfires engulfed it with flames and smoke forcing drivers and passengers to abandon their vehicles. pic.twitter.com/rlVJiZdQcq
— Al Jazeera English (@AJEnglish) May 1, 2025
ಈ ನಡುವೆ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿ ನೆತನ್ಯಾಹು ಹೇಳಿದ್ದಾರೆ. ಏಪ್ರಿಲ್ 30 ರಂದು ಜೆರುಸಲೇಮ್ ಮತ್ತು ಟೆಲ್ ಅವಿವ್ ಪ್ರಧಾನ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 23 ಮಂದಿ ಗಾಯಗೊಂಡಿದ್ದಾರೆ ಎಂದು ಕೂಡ ವರದಿಯಾಗಿದೆ.
ಜೆರುಸಲೆಮ್ ಹೊರವಲಯದಲ್ಲಿ ಬುಧವಾರ ಭಾರೀ ಕಾಡ್ಗಿಚ್ಚುಗಳು ಉಂಟಾಗುತ್ತಿದ್ದಂತೆಯೇ, ಇಸ್ರೇಲ್ ಅಧಿಕಾರಿಗಳು ಕೇವಲ 24 ಗಂಟೆಗಳಲ್ಲಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ. ಹಲವಾರು ಮಂದಿ ಗಂಭೀರಾಗಿ ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಬೆಟ್ಟಗಳ ತುದಿಯಲ್ಲಿ ಹಾಗೂ ಹೆದ್ದಾರಿಗಳ ಮೇಲೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಹೀಗಾಗಿ, ಅನೇಕ ಮಂದಿ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಜ್ವಾಲೆಯಿಂದ ತಪ್ಪಿಸಿ ಓಡಿಹೋಗುತ್ತಿರುವುದು ಕಂಡುಬಂದಿದೆ. ರಕ್ಷಣಾ ಮತ್ತು ಅಗ್ನಿಶಾಮಕ ದಳಗಳು ಕಾಡಿಚ್ಚನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ.
Clearing of underground DUMBS and facilities?
— Jack Straw (@JackStr42679640) April 30, 2025
Massive forest fire broke out in Judean Foothills, Israel 🇮🇱 (30.04.2025)
Disaster News pic.twitter.com/pDJxxw2XqG
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಡ್ಗಿಚ್ಚಿನ ಪರಿಸ್ಥಿತಿಯನ್ನು ‘ರಾಷ್ಟ್ರೀಯ ತುರ್ತುಸ್ಥಿತಿ’ ಎಂದು ಘೋಷಿಸಿದ್ದಾರೆ. ಕಾಡ್ಗಿಚ್ಚಿನ ಪರಿಣಾಮವಾಗಿ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಾಯಗೊಂಡಿರುವ ಸುಮಾರು 23 ಜನರಿಗೆ ಚಿಕಿತ್ಸೆ ನೀಡಿರುವುದಾಗಿ ಎಂಡಿಎ ಹೇಳಿದೆ. ಗಾಯಾಳುಗಳಲ್ಲಿ ಇಬ್ಬರು ಗರ್ಭಿಣಿಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
“ನಾವು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಜೀವಗಳನ್ನು ಉಳಿಸಲು ಮತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಸುಮಾರು ಮೂರು ಸಾವಿರ ಎಕರೆ ಭೂಮಿಗೆ ಬೆಂಕಿ ವ್ಯಾಪಿಸಿದೆ. ಗಾಳಿಯಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದೆ. ಹೀಗಾಗಿ, ಅಂತಾರಾಷ್ಟ್ರೀಯ ನೆರವಿಗೂ ವಿನಂತಿಸಿದ್ದೇವೆ” ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ತಮ್ಮ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ISRAEL BURNS ON ITS INDEPENDENCE DAY pic.twitter.com/QFnGXIejV1
— Sulaiman Ahmed (@ShaykhSulaiman) May 1, 2025
ಇಸ್ರೇಲ್ ವಿದೇಶಾಂಗ ಸಚಿವಾಲಯವು ಗ್ರೀಸ್, ಸೈಪ್ರಸ್, ಪ್ರೊಯೇಷಿಯಾ, ಇಟಲಿ ಮತ್ತು ಬಲ್ಗೇರಿಯಾ ಸೇರಿದಂತೆ ಹತ್ತಿರದ ದೇಶಗಳನ್ನು ಸಹಾಯಕ್ಕಾಗಿ ಸಂಪರ್ಕಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
BREAKING: Opposite the fires in Israel, a massive sandstorm is raging through the rest of the country. pic.twitter.com/XVvNhBbeYz
— Ms Trevian Kutti (@FreeTrevian) April 30, 2025
ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಇಟಲಿ ಮತ್ತು ಪ್ರೊಯೇಷಿಯಾದಿಂದ ಮೂರು ವಿಮಾನಗಳು ಶೀಘ್ರದಲ್ಲೇ ಬರಲಿವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಈ ನಡುವೆ ಇಸ್ರೇಲ್‌ನ ಹಲವು ಕಡೆಗಳಲ್ಲಿ ‘ಸ್ಯಾಂಡ್ ಸ್ಟೋರ್ಮ್’ ಕೂಡ ಅಪ್ಪಳಿಸಿರುವುದಾಗಿ ವರದಿಯಾಗಿದೆ.


